ಸುನಿಲ್ ಹೆಚ್. ಜಿ. ಬೈಂದೂರು. | ಕುಂದಾಪ್ರ ಡಾಟ್ ಕಾಂ
ದೇಶಕ್ಕೆ ಮಗ್ಗುಲ ಮುಳ್ಳಾಗಿದ್ದ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವ ನಮ್ಮ ವೀರ ಯೋಧರ ಧೈರ್ಯ, ಶೌರ್ಯ ಶ್ಲಾಘನಾರ್ಹ. ಇದು ಕೇವಲ ಪಾಕಿಸ್ತಾನದ ನೆಲದಲ್ಲಿ ನಿಂತು ಉಗ್ರರೊಂದಿಗೆ ನಡೆಸಿದ ಹೋರಾಟವಲ್ಲ. ಬದಲಿಗೆ ಭಾರತ ದೇಶದ ಶಾಂತಿಭಂಗಕ್ಕೆ ಕ್ಷಣ ಕ್ಷಣವೂ ಹವಣಿಸುತ್ತಿರುವ ಉಗ್ರರು ಹಾಗೂ ವಿರೋಧಿ ರಾಷ್ಟ್ರಗಳಿಗೆ ನೀಡಿದ ಎಚ್ಚರಿಕೆಯ ಸಂದೇಶ. ದೇಶದ ಪ್ರಧಾನಿ ಈ ಐತಿಹಾಸಿಕ ನಿರ್ಣಯವನ್ನು ಕೈಗೊಂಡು ನಮ್ಮ ಸೈನಿಕರು ಹಾಗೂ ದೇಶವಾಸಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಭಾರತೀಯರಾದ ನಾವು ಹರ್ಪೋದ್ಘಾರದಲ್ಲಿ ಮುಳುಗಿದರಷ್ಟೇ ಸಾಕೆ? ವರ್ಷವಿಡಿ ನಮಗಾಗಿ ಪ್ರಾಣ ಒತ್ತೆ ಇಟ್ಟು ಹೋರಾಡುವ ನಮ್ಮ ಹೆಮ್ಮೆಯ ಸೈನಿಕರ ರಕ್ಷಣೆಗೆ ಅಗತ್ಯ ಸೌಕರ್ಯಗಳು ದೊರೆಯುವಂತೆ ನೋಡಿಕೊಳ್ಳುವುದೂ ಕೂಡ ಭಾರತೀಯ ಪ್ರಜೆಯಾಗಿ ನಮ್ಮ ಕರ್ತವ್ಯವಲ್ಲವೇ? ಹೌದು ಇದೇ ಸಕಾಲ. ನಮಗಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ನೆರವಿಗಾಗಿ ಕೇಂದ್ರ ರಕ್ಷಣಾ ಇಲಾಖೆ ಆರಂಭಿಸಿರುವ ’ಆರ್ಮಿ ವೆಲ್ಫೇರ್ ಫಂಡ್’ಗೆ ಒಂದಿಷ್ಟು ಹಣ ಸಂದಾಯ ಮಾಡೋಣವೆ? ಕುಂದಾಪ್ರ ಡಾಟ್ ಕಾಂ.
[quote font_size=”15″ bgcolor=”#ffffff” bcolor=”#263f00″ arrow=”yes”]ಕನಿಷ್ಠ ಒಂದು ರೂಪಾಯಿಂದ ಸಾಧ್ಯವಿರುವಷ್ಟು ಹಣವನ್ನು ನಮ್ಮ ಸೈನಿಕರಿಗಾಗಿ ತೆಗೆದಿರಿಸೋಣ.
SYNDICATE BANK
A/C NAME: ARMY WELFARE FUND BATTLE CASUALTIES
A/C NO: 90552010165915
IFSC CODE: SYNB0009055
SOUTH EXTENSION BRANCH,
NEW DELHI.[/quote]
ಅಂದಹಾಗೆ ದೆಹಲಿ ಸಿಂಡಿಕೇಟ್ ಬ್ಯಾಂಕಿನಲ್ಲಿರು ಈ ಖಾತೆಯನ್ನು ಅಧಿಕೃತವಾಗಿ ರಕ್ಷಣಾ ಇಲಾಖೆಯೇ ಸೈನಿಕರ ಕಲ್ಯಾಣ ನಿಧಿಗಾಗಿ ತೆರೆದಿದೆ. ಆ ಬಗ್ಗೆ ಸಂಶಯ ಬೇಡ. ಕುಂದಾಪ್ರ ಡಾಟ್ ಕಾಂ.
Below is the reference link for authenticity of Bank account