ಲಾಕ್‌ಡೌನ್: 21 ದಿನಗಳ ಕಾಲ ಲಭ್ಯವಿರುವ ಮತ್ತು ಲಭ್ಯವಿರದ ಸೇವೆಗಳ ಪಟ್ಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಇಂದಿನಿಂದ ದೇಶಾದ್ಯಂತ ವಿಧಿಸಲಾಗಿರುವ 21 ದಿನಗಳ ಲಾಕ್‌ಡೌನ್ ಸಂದರ್ಭ ಭಾರತದ ಗೃಹ ಇಲಾಖೆ ಬಿಡುಗಡೆ ಮಾಡಿರುವ ಲಭ್ಯವಿರುವ ಮತ್ತು ಲಭ್ಯವಿರದ ಸೇವೆಗಳ ಪಟ್ಟಿ:

Click Here

Call us

Call us

ಲಭ್ಯವಿರುವ ಸೇವೆಗಳು:
► ಆಸ್ಪತ್ರೆಗಳು, ಆರೋಗ್ಯ ಸಂಬಂಧಿತ ಎಲ್ಲಾ ವಿಭಾಗಗಳು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ಕಂಪನಿಗಳು, ಉದ್ದಿಮೆಗಳು, ಘಟಕಗಳು ಅಂದರೆ, ಮೆಡಿಕಲ್ ಸಾಧನಗಳನ್ನು ತಯಾರಿಸುವ ಕಂಪನಿಗಳು, ಔಷಧಿ ತಯಾರಕಾ ಹಾಗೂ ವಿತರಕರು, ವೈದ್ಯಕೀಯ ಸಿಬ್ಬಂದಿ, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಆಸ್ಪತ್ರೆಗಳಿಗೆ ಸಂಬಧಿತ ವಾಹನ ಪ್ರಯಾಣಕ್ಕೆ ಅವಕಾಶ.
► ದಿನಸಿ ಅಂಗಡಿಗಳು, ತರಕಾರಿ, ಹಣ್ಣು ಅಂಗಡಿಗಳು, ಹಾಲಿನ ಡೈರಿಗಳು, ಮೀನು ಮಾಂಸ, ಪ್ರಾಣಿಗಳ ಮೇವು ಅಂಗಡಿಗಳು
► ಬ್ಯಾಂಕುಗಳು, ವಿಮಾ ಕಂಪನಿಗಳು, ಎಟಿಎಮ್
► ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು. /ಕುಂದಾಪ್ರ ಡಾಟ್ ಕಾಂ ಸುದ್ದಿ/ 
► ದೂರಸಂಪರ್ಕ, ಇಂಟರ್ನೆಟ್, ಪ್ರಸಾರ, ಕೇಬಲ್ ಸೇವೆಗಳು, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳು. (ಸಾಧ್ಯವಾದಷ್ಟು ಮನೆಯಲ್ಲಿಯೇ ಕೆಲಸ ಮಾಡಲು ಸೂಚನೆ)
► ಇ ಕಾಮರ್ಸ್ ಮುಖಾಂತರ ಡೆಲಿವರಿ ಆಗುವ ಅಗತ್ಯ ವಸ್ತುಗಳಾದ ಆಹಾರ, ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಲು ಅವಕಾಶ.
► ಪೆಟ್ರೋಲ್ ಪಂಪುಗಳು, ಗ್ಯಾಸ್ ಸ್ಟೇಷನ್‌ಗಳು, ಗ್ಯಾಸ್ ಚಿಲ್ಲರೆ ಮತ್ತು ಸಂಗ್ರಹಣಾ ಔಟ್‌ಲೆಟ್‌ಗಳಿಗೆ ವಿನಾಯಿತಿ.
► ಕೋಲ್ಡ್ ಸ್ಟೋರೇಜ್ ಮತ್ತು ಉಗ್ರಾಣ ಸೇವೆಗಳು
► ಖಾಸಗಿ ಭದ್ರತಾ ಸೇವೆಗಳು
► ಅಗತ್ಯ ಸಾಮಾಗ್ರಿ ತಯಾರಿಕೆಗೆ ಅವಕಾಶ. /ಕುಂದಾಪ್ರ ಡಾಟ್ ಕಾಂ ಸುದ್ದಿ/ 
► ರಾಜ್ಯ ಸರಕಾರಗಳಿಂದ ಅನುಮತಿ ಪಡೆದ ಬಳಿಕ ನಿರಂತರ ಚಾಲನೆಯಲ್ಲಿರಬೇಕಾದ ಉತ್ಪಾದನಾ ಘಟಕಗಳಿಗೆ ಅವಕಾಶ
► ಅಗ್ನಿಶಾಮಕ ದಳ, ಕಾನೂನು ಮತ್ತು ತುರ್ತು ಸೇವೆಗಳ ಸಾಗಾಟ
► ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ, ಜನರಿಗೆ, ವೈದ್ಯಕೀಯ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ವೈಮಾನಿಕ ಮತ್ತು ನೌಕಾ ಸಿಬ್ಬಂದಿಗಳಿಗೆ ವಸತಿ ಕಲ್ಪಿಸಲು ಹೊಟೇಲ್, ಹೋಂಸ್ಟೇ, ಲಾಡ್ಜ್‌ಗಳಿಗೆ ಅವಕಾಶ.
► ಕ್ವಾರಂಟೈನ್ ಸೇವೆಗಳಿಗೆ ಗುರುತಿಸಲಾದ ಬಳಕೆಯಾಗುತ್ತಿರುವ ಕಟ್ಟಡಗಳಿಗೆ ವಿನಾಯಿತಿ
► ಪೋಲೀಸ್, ಹೋಮ್‌ಗಾರ್ಡ್ಸ್, ಅಗ್ನಿಶಾಮಕ ದಳ, ಕಾರಾಗೃಹಗಳು, ತುರ್ತು ಸೇವೆ, ವಿಪತ್ತು ನಿರ್ವಹಣೆ
► ನಗರಪಾಲಿಕೆ, ಮಹಾನಗರ ಪಾಲಿಕೆಗಳು (ಕೇವಲ ಅಗತ್ಯ ಹಾಗೂ ಅನಿವಾರ್ಯ ಸೇವೆ ಹಾಗೂ ಸಿಬ್ಬಂದಿಗಳು ಮಾತ್ರ)
► ಜಿಲ್ಲಾಡಳಿತ ಹಾಗೂ ಕೋಶಾಗಾರ
► ವಿದ್ಯುತ್ ನೀರು ಸರಬರಾಜು ಮತ್ತು ಸ್ವಚ್ಛತಾ ಸೇವೆಗಳು

Click here

Click Here

Call us

Visit Now

ಲಭ್ಯವಿರದ ಸೇವೆಗಳು:
► ಖಾಸಗಿ ಮತ್ತು ವಾಣಿಜ್ಯ ಸಂಸ್ಥೆಗಳ ಬಾಗಿಲು ತೆರೆಯಲು ಅವಕಾಶವಿಲ್ಲ
► ಕೈಗಾರಿಕೆಗಳು
► ವೈಮಾನಿಕ, ರೈಲು ಮತ್ತು ರಸ್ತೆ ಸಾರಿಗೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/ 
► ಆತಿಥ್ಯ ಸೇವೆಗಳು
► ಎಲ್ಲಾ ಶೈಕ್ಷಣಿಕ, ತರಬೇತಿ, ಸಂಶೋಧನೆ, ಕೋಚಿಂಗ್ ಸಂಸ್ಥೆಗಳು
► ಎಲ್ಲಾ ಆರಾಧನಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ. ಯಾವುದೇ ಧಾರ್ಮಿಕ ಸಭೆಗಳಿಗೆ ಪ್ರವೇಶವಿಲ್ಲ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ.
► ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.
► ಕುಟುಂಬದಲ್ಲಿ ಯಾರಾದರೂ ತೀರಿ ಹೋದರೆ, ಗರಿಷ್ಟ ಇಪ್ಪತ್ತು ಜನರು ಮಾತ್ರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಬಹುದು.
► ಭಾರತ ಸರಕಾರದ ಕಚೇರಿಗಳು, ಅದರ ಸ್ವಾಯತ್ತ ಕಛೇರಿಗಳು

#StayHome #21daylockdown #IndiaFightsCorona #CoronavirusLockdown

 

Call us

Leave a Reply

Your email address will not be published. Required fields are marked *

6 + seventeen =