ಕಾಲು ಜಾರಿ ವಾರಾಹಿ ಕಾಲುವೆಗೆ ಬಿದ್ದು ಬಾಲಕಿ ಸಾವು

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲು ಜಾರಿ ವಾರಾಹಿ ಕಾಲುವೆಗೆ ಬಿದ್ದ ಪರಿಣಾಮ ಎಂಟು ವರ್ಷದ ಬಾಲಕಿ ಸಾವನ್ನಪ್ಪಿಗ್ಪಿದ ಘಟನೆ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ತಲಮಕ್ಕಿ ಬ್ರಹ್ಮನಗರ ಎಂಬಲ್ಲಿನ ಜನತಾ ಕಾಲೋನಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತ ಬಾಲಕಿಯನ್ನು ಜನತಾ ಕಾಲೋನಿ ನಿವಾಸಿ ಭಾಸ್ಕರ ಕುಲಾಲ್ ಹಾಗೂ ಲಕ್ಷ್ಮೀ ಕುಲಾಲ್ ಎಂಬುವರ ಪುತ್ರಿ ಮೇಘನಾ ಕುಲಾಲ್(8) ಎಂದು ಗುರುತಿಸಲಾಗಿದೆ.

Call us

Click Here

Click here

Click Here

Call us

Visit Now

Click here

ಮೇಘನಾ ಕುಲಾಲ್ ತನ್ನ ದೊಡ್ಡಮ್ಮನ ಮಗ ಸಚಿನ್ ಕುಲಾಲ್ (9) ಜೊತೆಗೆ ಆಟವಾಡುತ್ತಿದ್ದು ವಾಪಾಸ್ಸು ಮನೆಗೆ ವಾರಾಹಿ ಕಾಲುವೆಯ ದಂಡೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾಲು ಜಾರಿ ಇಬ್ಬರೂ ಬಿದ್ದಿದ್ದಾರೆ. ಕಾಲುವೆಗೆ ಬೀಳುವ ಸಂದರ್ಭ ಸಚಿನ್ ಗಿಡವೊಂದನ್ನು ಹಿಡಿದುಕೊಂಡಿದ್ದು ಬೊಬ್ಬೆ ಹೊಡೆದಿದ್ದಾನೆ. ಬೊಬ್ಬೆ ಕೇಳಿದ ಸ್ಥಳೀಯರು ಓಡಿ ಬಂದಿದ್ದು ಸಚಿನ್ನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಾಲುವೆಗೆ ಬಿದ್ದ ಮೇಘನಾ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾಳೆ. ಬಹಳ ದೂರದಲ್ಲಿ ಆಕೆಯ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೇಘನಾ ಬಿದ್ಕಲ್ಕಟ್ಟೆಯ ಸರಕಾರಿ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

11 + 20 =