ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು. ಗ್ರಾಮ ಪಂಚಾಯತಿ ಅಧ್ಯಕ್ಷನಿಂದಲೇ ಕೊಲೆ?

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಜೂ.05: ಲಾಕ್‌ಡೌನ್‌‌ ಸಮಯದಲ್ಲಿ ಜನಸಾಮಾನ್ಯರಿಗಾದ ತೊಂದರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟ‌ ಘಟನೆ ಯಡಮೊಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಬಾಳು‌ ಎಂಬಲ್ಲಿ ಇಂದು ರಾತ್ರಿ ನಡೆದಿದೆ. ಅಪಘಾತವು ಪೂರ್ವ ನಿಯೋಜಿತವಾದದ್ದು, ಗ್ರಾಮ ಪಂಚಾಯತಿ ಅಧ್ಯಕ್ಷನೇ ವೈಷಮ್ಯದಿಂದ ಕಾರು ಹತ್ತಿಸಿ ಕೊಲೆಗೈದಿದ್ದಾನೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Call us

Click Here

Click here

Click Here

Call us

Visit Now

Click here

ಯಡಮೊಗೆ ಗ್ರಾಮದ ಹೊಸಬಾಳು ನಿವಾಸಿ ಉದಯ ಗಾಣಿಗ (45) ಅಪಘಾತದಲ್ಲಿ ಮೃತ ದುರ್ದೈವಿ. ಆರೋಪಿ ಯಡಮೊಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಘಟನೆಯ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

 

ಆಗಿದ್ದೇನು?
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮನೆಯ ಎದುರಿನ ರಸ್ತೆಯ ಬದಿಯಲ್ಲಿ ನಿಂತಿದ್ದ ಉದಯ್ ಗಾಣಿಗ‌ ಎಂಬುವವರ ಮೇಲೆ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಏಕಾಏಕಿಯಾಗಿ ಕಾರು ಚಲಾಯಿಸಿದ್ದಾನೆ. ಗಂಭೀರ ಗಾಯಗೊಂಡ ಉದಯ ಅವರನ್ನು ಸ್ಥಳೀಯ ನಿವಾಸಿಗಳು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ದಿದ್ದು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಜಡ್ಕಲ್ನಲ್ಲಿ ರಸಗೊಬ್ಬರ ಅಂಗಡಿ ಹೊಂದಿರುವ ಉದಯ್ ಗಾಣಿಗ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಕಳೆದ ಕೆಲ ದಿನಗಳಿಂದ ಲಾಕ್ಡೌನ್ ಹಾಗೂ ಜನರು, ಕೂಲಿ ಕಾರ್ಮಿಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಅಲ್ಲದೇ ಶುಕ್ರವಾರ ರಾತ್ರಿ ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಯಡಮೊಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಲಹೆ ನೀಡಿದ್ದು, ಅದರಲ್ಲಿ ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೊದಲು ಯಡಮೊಗೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗುವ ಹಾಗೆ ಮಾಡಿ. ಆಸ್ಪತ್ರೆಗೆ ಬೆಡ್ ವ್ಯವಸ್ಥೆ ಮಾಡಿ, ಪಾಸಿಟಿವ್ ಬಂದವನ್ನು ಆಸ್ಪತ್ರೆಗೆ ಸೇರಿಸಿ ಗುಣಮುಖರಾದವರನ್ನು ಮನೆಗೆ ಕಳುಹಿಸಿಕೊಡಿ. ಬಡ ಕೂಲಿ ಕಾರ್ಮಿಕರು ಊಟಕ್ಕೆ ಏನು ಮಾಡುತ್ತಿದ್ದಾರೆ ಅವರ ಸಮಸ್ಯೆಗಳನ್ನು ವಿಚಾರಿಸಿ. ಇದನ್ನು ಬಿಟ್ಟು ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಬೇಡಿ. ಇದರಿಂದ ಸರ್ಕಾರದ ಹಣ ನುಂಗಿ ನೀರು ಕುಡಿಯುವುದು ಬಿಟ್ಟು ಬೇರೇನು ಪ್ರಯೋಜನವಿಲ್ಲ ಎಂದು ವಾಟ್ಸಾಪ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಉದಯ ಗಾಣಿಗ ಮತ್ತು ಯಡಿಯಾಳ್ ಮಧ್ಯೆ ವೈಷಮ್ಯ ಹುಟ್ಟಿಕೊಂಡಿದ್ದು, ಅದೇ ದ್ವೇಷದಲ್ಲಿ ಕಾರು ಹತ್ತಿಸಿ ಅವರನ್ನು ಕೊಲೆಗೈಯ್ಯಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿವೆ. ಪೊಲೀಸ್ ತನಿಖೆಯಿಂದ ಹೆಚ್ಚನ ಮಾಹಿತಿ ತಿಳಿದುಬರಬೇಕಿದೆ.

Call us

ಮೃತ ಉದಯ ಗಾಣಿಗ ವಿವಾಹಿತರಾಗಿದ್ದು, ಪತ್ನಿ, ಎರಡು ಮಕ್ಕಳು, ಕುಟುಂಬಿಕರನ್ನು ಅಗಲಿದ್ದಾರೆ. ಶಂಕರನಾರಾಯಣ ಪೊಲೀಸರು ತನಿಕೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ:
► ಯಡಮೊಗೆ ಕೊಲೆ ಪ್ರಕರಣ. ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸರ ವಶಕ್ಕೆ – https://kundapraa.com/?p=48994 .

Leave a Reply

Your email address will not be published. Required fields are marked *

seventeen − 16 =