ಕುಂದಾಪುರ: ‘ರಂಗೋತ್ಸವ – 2019’ ಸ್ವರ್ಧೆಯಲ್ಲಿ ಆಳ್ವಾಸ್ ಚಾಂಪಿಯನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಕುಂದಾಪುರ ಭಂಡಾರ್‌ಕರ‍್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ‘ರಂಗಕಲಾ ಸ್ಪರ್ಧೆ-ರಂಗೋತ್ಸವ 2019’’ಯಲ್ಲಿ ಆಳ್ವಾಸ್ ಕಾಲೇಜು ಸತತವಾಗಿ 12ನೇ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಬಹುಮಾನ ವಿತರಿಸಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯಇದರ ನಿದೇಶಕರಾದ ಪ್ರೊ. ಬಾರ್ಕೂರು ಉದಯ ಮಾತನಾಡಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಂಗಭೂಮಿಯ ಬಗ್ಗೆ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವುದಕ್ಕೆ ಪೂರಕವಾಗಿ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ವಿಷಯ ಮಂಡಿಸುತ್ತೇನೆ. ವಿದ್ಯಾರ್ಥಿ ಸ್ನೇಹಿ ಅಧ್ಯಯನವನ್ನುಕಾರ್ಯರೂಪಕ್ಕೆತರಲು ಪ್ರಯತ್ನಸುತ್ತೇನೆಎಂದು ಹೇಳಿದರು.

ಅಧ್ಯಕ್ಷತೆಯನ್ನುಕಾಲೇಜಿನ ಪಾಂಶುಪಾಲರಾದ ಡಾ. ಎನ್. ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ರಂಗೋತ್ಸವದಕುರಿತು ನಿರ್ಣಾಯಕರಾಗಿ ಆಗಮಿಸಿದ್ದ ಬಾಸುಮ ಕೊಡಗು ಮತ್ತು ಸತೋಶ ಮರವಂತೆ ತಮ್ಮ್ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿರ್ಣಾಯಕರಾಗಿ ಆಗಮಿಸಿದ್ದ ಪೂರ್ಣಿಮಾ ಸುರೇಶ್, ಸಂತೋಷ್ ಶೆಟ್ಟಿ ಹಿರಿಯಡ್ಕ, ಪ್ರವೀಣಕೊಡವೂರು, ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ರಂಗೋತ್ಸವ ಕಾರ್ಯಕ್ರಮ ಸಂಯೋಜಕರಾದ ಅರ್ಚನಾ ಅರವಿಂದ್ ಉಪಸ್ಥಿತರಿದ್ದರು.

ರಂಗೋತ್ಸವದಲ್ಲಿ ಭಾಗವಹಿಸಿದ್ದ ವಿವಿಧಕಾಲೇಜಿನ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಪ್ರಶಾಂತ ಹೆಗ್ಡೆ ವಂದಿಸಿದರು. ವಿದ್ಯಾರ್ಥಿನಿ ಕೀರ್ತಿ ಎಸ್. ಕಾರ್ಯಕ್ರಮ ನಿರ್ವಹಿಸಿದರು.

ಸ್ಪರ್ಧೆಗಳ ಫಲಿತಾಂಶ:

ಅನುಕರಣೆ ಸ್ಪರ್ಧೆ:
ಪ್ರಥಮ ಸ್ಥಾನ -ಶ್ರೀ ರಾಮಪ್ರಥಮದರ್ಜೆಕಾಲೇಜು, ಕಲ್ಲಡ್ಕ,
ದ್ವಿತೀಯ ಸ್ಥಾನ -ಆಳ್ವಾಸ್ ಕಾಲೇಜು ಮೂಡಬಿದ್ರೆ,
ತೃತೀಯ ಸ್ಥಾನ-,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ

ಮೂಕಾಭಿನಯ ಸ್ಪರ್ಧೆ:
ಪ್ರಥಮ ಸ್ಥಾನ – ಆಳ್ವಾಸ್ ಕಾಲೇಜು ಮೂಡಬಿದ್ರೆ,
ದ್ವಿತೀಯ ಸ್ಥಾನ -ಮಹಾತ್ಮಗಾಂಧಿ ಸ್ಮಾರಕಕಾಲೇಜು, ಉಡುಪಿ,
ತೃತೀಯ ಸ್ಥಾನ-ತ್ರಿಶಾ ವಿದ್ಯಾಕಾಲೇಜ್ ಆಫ್ ಕಾಮರ್ಸ್, ಉಡುಪಿ

ಪ್ರಹಸನ ಸ್ಪರ್ಧೆ:
ಪ್ರಥಮ ಸ್ಥಾನ -,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜು, ಉಜಿರೆ,
ದ್ವಿತೀಯ ಸ್ಥಾನ -ಆಳ್ವಾಸ್ ಕಾಲೇಜು ಮೂಡಬಿದ್ರೆ,
ತೃತೀಯ ಸ್ಥಾನ-ಮಹಾತ್ಮಗಾಂಧಿ ಸ್ಮಾರಕ ಕಾಲೇಜು, ಉಡುಪಿ,

ಏಕಾಂಕ ನಾಟಕ ಸ್ಪರ್ಧೆ:
ಪ್ರಥಮ ಸ್ಥಾನ- ಮಹಾತ್ಮಗಾಂಧಿ ಸ್ಮಾರಕಕಾಲೇಜು, ಉಡುಪಿ,
ದ್ವಿತೀಯ ಸ್ಥಾನ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜು, ಉಜಿರೆ,
ತೃತೀಯ ಸ್ಥಾನ-ಆಳ್ವಾಸ್ ಕಾಲೇಜು ಮೂಡಬಿದ್ರೆ

Leave a Reply

Your email address will not be published. Required fields are marked *

twenty + 2 =