ಮನು ಹಂದಾಡಿಗೆ ಅತ್ಯುತ್ತಮ ಶಿಕ್ಷಕ ಗೌರವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕುಂದಗನ್ನಡದ ಮಾತುಗಾರಿಕೆಯ ಮೂಲಕ ಮನೆಮಾತನಾಗಿರುವ ಶಿಕ್ಷಕ ಮನೋಹರ ಹಂದಾಡಿ (ಮನು ಹಂದಾಡಿ) ಅವರು ಇತ್ತಿಚಿಗೆ ಅತ್ಯುತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ
ಹುಬ್ಬಳ್ಳಿಯ ಸ್ವ-ರಕ್ಷಾ ಶಿಕ್ಷಣ ಸಂಸ್ಥೆಯು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಧಾರವಾಡದ ಕರ್ನಾಟಕ ಕಾಲೇಜು ಆವರಣದ ಡಾ. ಅಣ್ಣಾಜಿರಾವ್ ಸಿರೂರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ದಯಾನಂದ ವಿದ್ಯಾಸಾಗರ ಭಾರತಿ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಇಂಗ್ಲೀಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮನು ಹಂದಾಡಿಯವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಅವರು ಅತ್ಯುತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾದವರನ್ನು ಗೌರವಿಸಿದರು. ಧಾರವಾಡ ಶಿಕ್ಷಣ ಇಲಾಖೆಯ ಉಪನಿರ್ದೇಕರು ಸೇರಿದಂತೆ ಹುಬ್ಬಳ್ಳಿಯ ವಿವಿಧ ಅತಿಥಿ ಗಣ್ಯರು ವೇದಿಕೆಯಲ್ಲಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Call us

Call us

ಇದನ್ನೂ ಓದಿ ► ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಸಿದ ಮನು ಹಂದಾಡಿ – http://kundapraa.com/?p=8608

Call us

Call us

► Download Kundapra.com’s Mobile App for your Android Phone: Click Here

_MG_4233

Leave a Reply

Your email address will not be published. Required fields are marked *

eight − eight =