ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊರರಾಜ್ಯಗಳಿಂದ ಬಂದು ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ವ್ಯಕ್ತಿಗಳ ಕೋವಿಡ್ -19 ಟೆಸ್ಟ್ ವರದಿ ಹಂತ ಹಂತವಾಗಿ ಕೈಸೇರುತ್ತಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ 11ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್ ಬಂದಿದ್ದು, ಇಂದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಅವರ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ.
ಕುಂದಾಪುರ ತಾಲೂಕಿನ ಕೋಡಿ, ಬಸ್ರೂರು, ಕೋಣಿ, ನೇರಳಕಟ್ಟೆ, ಹಳ್ನಾಡು, ನೆಂಪು ಗ್ರಾಮಗಳು ಹಾಗೂ ಬೈಂದೂರು ತಾಲೂಕಿನ ಕಬ್ಸೆ, ನಾವುಂದ, ಗುಜ್ಜಾಡಿ ಬೆಣೆಗೇರಿ ಗ್ರಾಮಗಳಲ್ಲಿನ ಕ್ವಾರಂಟೈನ್ ಮುಗಿಸಿದ ವ್ಯಕ್ತಿಗಳಿಗೆ ಪಾಸಿಟವ್ ಬಂದಿದೆ. ಅವರ ಮನೆಯ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗುತ್ತಿದೆ ಎನ್ನಲಾಗಿದೆ. ಇವರೆಲ್ಲರೂ ಸರಕಾರದ ನಿಯಮಾವಳಿಯಂತೆ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಬಂದವರಾಗಿದ್ದು, ಕೋವಿಡ್ ಟೆಸ್ಟ್ ವರದಿ ಬರುವುದು ಬಾಕಿ ಇತ್ತು. ವರದಿ ದೊರೆಯುತ್ತಿದ್ದಂತೆ ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಅವರ ಪ್ರಾಥಮಿಕ ಸಂಪರ್ಕವನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಗಳ ಪೂರ್ಣ ವಿವರ ಇನ್ನಷ್ಟೇ ದೊರೆಯಬೇಕಿದ್ದು, ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸ್ಥಳಕ್ಕೆ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ., ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಪೊಲೀಸರು ಸೇರಿದಂತೆ ವಿವಿಧ ಅಧಿಕಾಗಳು ಭೇಟಿ ನೀಡಿ ಹೋಮ್ ಕ್ವಾರಂಟೈನ್ ಹಾಗೂ ಸೀಲ್‌ಡೌನ್ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಕ್ವಾರಂಟೈನ್‌ನಲ್ಲಿ ಇದ್ದವರ ವರದಿ ಕೈಸೇರುವ ಮೊದಲೇ ಅವರನ್ನು ಮನೆಗೆ ಕಳುಹಿಸಿದ್ದ ಬಗ್ಗೆ ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನಸಾಮಾನ್ಯರಲ್ಲಿ ಅನಗತ್ಯ ಭಯ ಹಾಗೂ ಆತಂಕ ಹುಟ್ಟಿಕೊಂಡಿದೆ. ಪಾಸಿಟಿವ್ ಬಂದ ವ್ಯಕ್ತಿಗಳಿದ್ದ ಪ್ರದೇಶ ಸೀಲ್‌ಡೌನ್ ಮಾಡುತ್ತಿರುವುದು ಅಲ್ಲಿನ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಮೇ.31 ಭಾನುವಾರದ ಸಂಪೂರ್ಣ ಲಾಕ್ ಡೌನ್ ತೆರವುಗೊಳಿಸಿದ ರಾಜ್ಯ ಸರಕಾರ – https://kundapraa.com/?p=38042 .
► ಕ್ವಾರಂಟೈನ್ ಮುಗಿಸಿ ತೆರಳಿದ್ದ ಬಾರಿಕೆರೆಯ ಮಹಿಳೆ, ವಂಡಾರಿನ ಮಗುವಿಗೆ ಕೊರೋನಾ ಪಾಸಿಟಿವ್ – https://kundapraa.com/?p=38036 .
► ಜಿಲ್ಲೆಯಲ್ಲಿ ಮೂರು ದಿನ ಭಾರಿ ಮಳೆ: ಸಾರ್ವಜನಿಕರಿಗೆ ಸೂಚನೆ – https://kundapraa.com/?p=38020 .
► ಜೂನ್ 15ರಿಂದ ಮೀನುಗಾರಿಕೆ ನಿಷೇಧ: ಪರಿಷ್ಕೃತ ಆದೇಶ – https://kundapraa.com/?p=38016 .
► ಉಡುಪಿ: 7 ದಿನ ಸರ್ಕಾರಿ ಕ್ವಾರಂಟೈನ್ ಪೂರೈಸಿದವರಿಗೆ ಹೋಂ ಕ್ವಾರಂಟೈನ್‌ಗೆ ಅನುಮತಿ – https://kundapraa.com/?p=37978 .