ಕುಂದಾಪ್ರ ಡಾಟ್ ಕಾಂ ವರದಿ.
ಅಮಾಸೆಬೈಲು ಸಂಪೂರ್ಣ ಸೋಲಾರ್ ಅವಳಸಿಕೊಂಡ ರಾಜ್ಯದ ಮೊದಲ ಗ್ರಾಮವಾದರೆ, ಮರವಂತೆ ಗ್ರಾಮ ಪಂಚಾಯಿತಿ ಕಚೇರಿಗೆ ಪರಿಪೂರ್ಣ ಸೋಲಾರ್ ಅಳವಡಿಸಿಕೊಂಡ ರಾಜ್ಯದ ನಾಲ್ಕನೇ ಹಾಗೂ ದ.ಕ, ಉಡುಪಿ ಜಿಲ್ಲೆ ಪ್ರಥಮ ಗ್ರಾಮ ಪಂಚಾಯಿತಿ!
ದಕ ಸಂಸದ ನಳಿನ್ ಕುಮಾರ್‌ಕಟೀಲ್ ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವ ಬೆಳ್ಪ ಗ್ರಾಮ ಪಂಚಾಯಿತಿ ಸಂಪೂರ್ಣ ಸೋಲಾರ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮರವಂತೆ ಗ್ರಾಮ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಚೇರಿಗೆ ಸಂಪೂರ್ಣ ಸೋಲಾರ್ ಅಳವಡಿಸಿಕೊಂಡಿದೆ. ಸೋಲಾರ್ ಹೊಷ ವರ್ಷದ ಹೊಸ ಕೊಡುಗೆ.
ಮರವಂತೆಗ್ರಾಮ ಪಂಚಾಯಿತಿದಾನಿ ಡಾ.ದಯಾನಂದ ಪೈ ಕೊಡುಗೆ ಮೂಲಕ ಕಚೇರಿ, ಹಾಗೂ ಸುವರ್ಣ ಸೌಧ ಸಭಾಭವನನಿರ್ಮಿಸಿಕೊಂಡಿದೆ.ಕಟ್ಟಡಮಾಡಿನ ಮೇಲೆ ಸೋಲಾರ್ ಪ್ಲೇಟ್‌ಗಳ ಅಳವಡಿಸಿಕೊಂಡಿದೆ.ಸೋಲಾರ್‌ರೂಪ್‌ಟಾಪ್‌ಹೆಸರಲ್ಲಿ೧೦ ವೋಲ್ಟ್ ಕೆವಿ ನಾಲ್ಕು ಪ್ಲೇಟ್ ಅಳವಡಿಸಿ ೨೫೦ ವ್ಯಾಟ್‌ಪೀರ್ (ಡಬ್ಲ್ಯೂಪಿ) ಶಕ್ತಿ ಪಡೆಯಲಾಗುತ್ತದೆ.ಕಚೇರಿ ಫ್ಯಾನ್, ಲೈಟ್‌ಕಂಪ್ಯೂಟರ್ ಸಿಸ್ಟಮ್ ಎಲ್ಲವೂ ಸೋಲಾರ್ ಮೂಲಕ ನಡೆಯುತ್ತದೆ.ಕಚೇರಿಗೆಕತ್ತಲೆಂಬುದೇಇಲ್ಲಾ!
ಮರವಂತೆಗ್ರಾಮ ಪಂಚಾಯಿತಿ ೧೪ನೇ ಹಣಕಾಸುಯೋಜನೆಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿದ್ದು, ಅದಕ್ಕೆ ೧,೪,೮೦೦ ಲಕ್ಷಖರ್ಚು ಮಾಡಿದೆ. ಸೋಲಾರ್‌ರೂಪ್‌ಟಾಪ್ ವಾರೆಂಟಿ ೨೦ ವರ್ಷವಾಗಿದ್ದು, ೩೦ ವರ್ಷಕ್ಕೂ ಹೆಚ್ಚು ಸಮಯ ಬಾಳುತ್ತದೆ ಎಂದು ಸೋಲಾರ್ ಅಳವಡಿಕೆ ಕಾಮಗಾರಿ ನಡೆಸಿದ ಕುಂದಾಪುರ ಮಾಧವ ನಾಯ್ಕ್ ವಿಜಯವಾಣಿಗೆ ತಿಳಿಸಿದ್ದಾರೆ.ಈಗಾಗಲೇ ವಿಭಿನ್ನ ಸಾಧನೆ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದ ಮರವಂತೆಗ್ರಾಮ ಪಂಚಾಯಿತಿ ಸೋಲಾರ್ ಸಿಸ್ಟಮ್ ಅಳವಡಿಕೆ ಮೂಲಕ ಮತ್ತೊಂದು ಸಾಧನೆಮಜಲುತಲುಪಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಗ್ರಾಪಂಗೆ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡ ಗ್ರಾ.ಪಂ:
ಕುಂದಾಪುರ ತಾಲೂಕು ಮರವಂತೆ ಗ್ರಾಮ ಪಂಚಾಯಿತಿ ರಾಜ್ಯದ ಮಟ್ಟದಲ್ಲಿ ಗುರುತಿಸಿಕೊಂಡು ಮಾದರಿಗ್ರಾಮ.ಬೇರೆ ಬೇರೆಗ್ರಾಮ ಪಂಚಾಯಿತಿಯಿಂದಅಧ್ಯಯನಕ್ಕಾಗಿಇಲ್ಲಿಗೆಬರುತ್ತಾರೆ.ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿಗ್ರಾಪಂ ಗುರುತಿಸಿಕೊಂಡಿದ್ದು, ಹತ್ತು ಹಲವು ಪ್ರಶಸ್ತಿಗೆ ಭಾಜನವಾಗಿದೆ.೨೦೦೫-೬ರಲ್ಲಿ ನಿರ್ಮಲ ಗ್ರಾಮ ಪ್ರಶಸ್ತಿ, ೨೦೧೦-೧೧ರಲ್ಲಿ ರಜತ ನೈರ್ಮಲ್ಯ ಪ್ರಶಸ್ತಿ, ಪಂಚಾಯಿತಿ ಸಶಕ್ತೀರಣ ಪ್ರಶಸ್ತಿ (ಪಿಸಿಐ), ೨೦೧೩-೧೪ರಲ್ಲಿ ಗಾಂಧಿಗ್ರಾಮ ಪುರಸ್ಕಾರ ಹಾಗೂ ಸತತ ಶೇ.೧೦೦ಕ್ಕೆ ೧೦೦ ತೆರಿಗೆ ಸಂಗ್ರಹ, ಅತೀ ಹೆಚ್ಚು ಸೋಲಾರಿದಾರಿ ದೀಪ ಅಳವಡಿಕೆ, ತ್ಯಾಜ್ಯ ವಿಲೇವಾರಿಗೆ ವಾಹನ ವ್ಯವಸ್ಥೆ.ಪ್ರಸಕ್ತ ಘನ ಮತ್ತುದ್ರವತ್ಯಾಜ್ಯ ವಿಲೇವಾರಿಗೆ ಮುಂದಾಗಿದ್ದು, ಜಾಗಕೂಡಾ ಸಿಕ್ಕಿದೆ.
ಬೆಂಗಳೂರಿನಲ್ಲಿ ನಡೆದ ಮಹಾತ್ಮಗಾಂಧಿ ಪರಿಸರತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದು, ಸೋಲಾರ್ ಸಿಸ್ಟಿಮ್‌ನಿಂದ ಎಲ್ಲವನ್ನೂನಿರ್ವಹಿಸುತ್ತಿದ್ದರು.ತರಬೇತಿ ನಂತರಫಲಾನುಭವಿಗಳ ಅನಿಸಿಕೆ ವ್ಯಕ್ತ ಮಾಡುವ ಸಮಯದಲ್ಲಿ ಮರವಂತೆಗ್ರಾಪಂಕಚೇರಿಗೆ ಸೋಲಾರ್ ಅಳವಡಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದು, ಅದೇ ಸೋಲಾರ್ ಅಳವಡಿಕೆಗೆ ಕಾರಣ. ಮರವಂತೆ ಸಮುದ್ರ ತೀರದಲ್ಲಿದ್ದು, ಸಿಆರ್‌ಝಡ್ ವ್ಯಾಪ್ತಿಗೆ ಬರುತ್ತದೆ. ಮನೆಗೆ ವಿದ್ಯುತ್ ಸಂಕರ್ಪಕ್ಕೂ ಸಮಸ್ಯೆ ಆಗುತ್ತಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ, ಗ್ರಿಡ್ ಸಿಸ್ಟಮ್ ಮೂಲಕ ಮನೆಗಳಿಗೆ ಸೋಲಾರ್ ಶಕ್ತಿ ಸರಬರಾಜು ಮಾಡುವಉದ್ದೇಶವಿದ್ದು, ಗ್ರಾಪಂಅನುದಾನದಲ್ಲಿ ಸಾಧ್ಯವಿಲ್ಲ. ಮರವಂತೆಗ್ರಾಮ ಸಂಪೂರ್ಣ ಪೇಪರ್ ಲೆಸ್‌ಕಚೇರಿಯಾಗಿದ್ದು, ಈಗ ಸಂಪೂರ್ಣ ಸೋಲಾರ್ ಅಳವಡಿಸಿಕೊಂಡ ಮೊದಲ ಗ್ರಾಮ ಆಗಿದೆ. – ಅನಿತಾ ಆರ್.ಕೆ.,ಅಧ್ಯಕ್ಷ, ಗ್ರಾಪಂ ಮರವಂತೆ
ಲೋಡ್ ಶೆಡ್ಡಿಂಗ್ ಹಾಗೂ ಇನ್ನಿತರೆ ಕಾರಣಗಳಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದ ಸಂದರ್ಭದಲ್ಲಿಗ್ರಾಮ ನಿವಾಸಿಗಳಿಗೆ ಅವರ ಕೆಲಸ ಮಾಡಿಕೊಡಲು ವಿಳಂಬವಾಗುತ್ತಿತ್ತು.ಸೋಲಾರ್ ಅಳವಡಿಕೆ ನಂತರಕರೆಂಟ್‌ಇಲ್ಲಾಎಂದುಯಾರನ್ನೂ ಕಾಯಿಸುವ ಸಮಸ್ಯೆಇಲ್ಲ. ಪ್ರತೀತಿಂಗಳು ಗ್ರಾಮಂಗೆ ೧೮೦೦ರೂ. ವಿದ್ಯುತ್ ಬಿಲ್ ಬರುತ್ತಿದ್ದು, ಈಗ ಮಿನಿಮಮ್ ಬಿಟ್ಟರೆ ವಿದ್ಯುತ್ ಬಿಲ್ ಹಣ ಉಳಿತಾಯವಾಗಿತ್ತದೆ. ಸೋಲಾರ್‌ಎನರ್ಜಿ ನಮಗೆ ಬೇಕಾಗುಷ್ಟು ಸಿಗುತ್ತಿದ್ದು, ನಮ್ಮಕಚೇರಿಗೆ ವಿದ್ಯುತ್ ಸಮಸ್ಯೆಇಲ್ಲ. – ಹರಿಶ್ಚಂದ್ರ ಆಚಾರ್ಯ, ಕಾರ‍್ಯದರ್ಶಿ, ಗ್ರಾಪಂ ಮರವಂತೆ