ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಇಲ್ಲಿನ ಹರಳೂರು ಮುಖ್ಯ ರಸ್ತೆಯಲ್ಲಿ ಕೆ.ಎಫ್.ಡಿ.ಸಿ ಸಹಭಾಗಿತ್ವದಲ್ಲಿ ಪ್ರಜ್ಞಾ ಸಾಗರ ಹೋಟೆಲ್ಸ್ ಮತ್ತು ರೆಸಾರ್ಟ್ಸ್ ಇದರ ನೂತನ ಮತ್ಸ್ಯ ದರ್ಶಿನಿ ಮತ್ತು ಪ್ರಗ್ನ್ಯಾ ಸಾಗರ ಹೋಟೆಲ್ ಹಾಗೂ ಫಿಶ್ ಔಟ್ಲೆಟ್ ಗುರುವಾರ ಉದ್ಘಾಟನೆಗೊಂಡಿತು.
ರಾಜ್ಯ ಮಾನ್ಯ ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ಸ್ಯ ದರ್ಶಿನಿ ಹಾಗೂ ಪ್ರಜ್ಞ್ನಾ ಸಾಗರ ಹೋಟೆಲ್ ಉದ್ಘಾಟಿಸಿದರು. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ಪಿ. ಸಿ. ರಾವ್ ಅವರು ಪ್ರಜ್ಞ್ನಾ ಸಾಗರ ಹೋಟೆಲ್ನ 2ನೇ ಯುನಿಟ್ ಹಾಗೂ ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷರಾದ ವೇದಕುಮಾರ್ ಅವರು ಫೀಶ್ ಔಟ್ಲೆಟ್ ಉದ್ಘಾಟಿಸಿದರು.
ಈ ಸಂದರ್ಭ ಚೆಫ್’ಟಾಕ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಗೋವಿಂದ ಬಾಬು ಪೂಜಾರಿ, ಪ್ರಜ್ಞಾ ಸಾಗರ ಹೋಟೆಲ್ಸ್ ಮತ್ತು ರೆಸಾರ್ಟ್ಸ್ ಸಂಸ್ಥೆಯ ಡೈರೆಕ್ಟರ್ ಮಾಲತಿ ಗೋವಿಂದ ಪೂಜಾರಿ, ಉದ್ಯಮಿಗಳಾದ ಅರುಣ್ ಧನಪಾಲ್, ಗುರುರಾಜ ಪೂಜಾರಿ ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿದ್ದರು.