ಉಪ್ಪುಂದ: ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡ ‘ಮತ್ಸ್ಯಸಿರಿ’ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಮ್ಪಂದದ ರಾಣಿಬಲೆ ಮೀನುಗಾರರ ಒಕ್ಕೂಟದ ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ನೂತನ ಕಟ್ಟಡ ‘ಮತ್ಸ್ಯಸಿರಿ’ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.

Click Here

Call us

Call us

ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಕಟ್ಟಡವನ್ನು, ಕುಂದಾಪುರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ಚಂದ್ರಪ್ರತಿಮಾ ಎಂ. ಜೆ ಭದ್ರತಾಕೋಶವನ್ನು, ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ ಗಣಕಯಂತ್ರವನ್ನು ಉದ್ಘಾಟಿಸಿದರು. ಒಕ್ಕೂಟದ ನೂತನ ಕಟ್ಟಡವನ್ನು ಅದರ ಕೋಶಾಧಿಕಾರಿ ಜಿ. ಮಾಧವ ಖಾರ್ವಿ ಉದ್ಘಾಟಿಸಿದರು. ಒಕ್ಕೂಟದ ಗೌರವ ಸಲಹೆಗಾರ ಎಸ್. ಮದನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ನಿರ್ದೇಶಕ ಮಂಜುನಾಥ ಜಿ. ಖಾರ್ವಿ ಸ್ವಾಗತಿಸಿ ವಂದಿಸಿದರು.

Click here

Click Here

Call us

Visit Now

ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಅರುಣ್‌ಕುಮಾರ, ಸಂಘದ ನಿರ್ದೇಶಕರಾದ ಡಿ. ಮೋಹನ್ ಖಾರ್ವಿ, ಎ. ಶ್ರೀನಿವಾಸ ಖಾರ್ವಿ, ಪದ್ಮನಾಭ ಖಾರ್ವಿ, ಜಿ. ಮಾಧವ ಖಾರ್ವಿ, ಡಿ. ಶುಕ್ರ ಖಾರ್ವಿ, ರಾಜಾರಾಮ್ ಖಾರ್ವಿ, ರಮೇಶ ಖಾರ್ವಿ, ಬಿ. ನಾಗೇಶ್ ಖಾರ್ವಿ, ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶೋರ್ ಇದ್ದರು. ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.

 

Call us

 

Leave a Reply

Your email address will not be published. Required fields are marked *

ten − nine =