ಮೇಕೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಪುನರಷ್ಟಬಂಧಕ್ಕೆ ಸಿದ್ಧತೆಗಳು ಪೂರ್ಣ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: 29ರಿಂದ ನಾಲ್ಕು ದಿನ ನಡೆಯಲಿರುವ ಬೈಂದೂರು ತಾಲ್ಲೂಕು ಉಳ್ಳೂರಿನ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಎಲ್ಲ ಸಿದ್ಧತೆಗಳು ಮುಗಿದಿದ್ದು, ಸೋಮವಾರ ಆರಂಭಿಕ ವಿಧಿಗಳನ್ನು ನಡೆಸಲಾಗಿದೆ. 1ರಂದು ಪುನರಷ್ಟಬಂಧ, 2ರಂದು ಬ್ರಹ್ಮಕಲಶೋತ್ಸವ ನಡೆಯುವುದು ಎಂದು ದೇವಸ್ಥಾನದ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Call us

Click Here

Visit Now

ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ದೇವಾಲಯ ಇರುವ ಸ್ಥಳವನ್ನು ಮುನಿಕಟ್ಟೆ ಎಂದು ಕರೆಯಲಾಗುತ್ತಿತ್ತು. ಮುನಿ ತಪಸ್ಸು ಆಚರಿಸಿ, ದುರ್ಗಾಪರಮೇಶ್ವರಿಯನ್ನು ಒಲಿಸಿಕೊಂಡು ಅವಳು ಇಲ್ಲಿ ನೆಲೆ ನಿಲ್ಲುವಂತೆ ಮಾಡಿದರು ಎಂಬ ಹಿನ್ನೆಲೆಯ ಈ ಕ್ಷೇತ್ರವನ್ನು ಪರಿಸರದ ಜನರು ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬಂದಿರುವರು. ಕೆಂಪು ಕಲ್ಲಿನ ಗುಹೆಯಂತಹ ಈ ಶ್ರದ್ಧಾಕೇಂದ್ರವನ್ನು ವೈ. ಚಂದ್ರಶೇಖರ ಶೆಟ್ಟಿ ಅವರ ನೇತೃತ್ವದಲ್ಲಿ ೧೨ ವರ್ಷಗಳ ಹಿಂದೆ ಶಿಲಾಮಯ ದೇಗುಲವಾಗಿ ರೂಪಿಸಲಾಯಿತು. ಆ ಹಿನ್ನೆಲೆಯಲ್ಲಿ ಈಗ ಪುನರಷ್ಟಬಂಧ, ಬ್ರಹ್ಮಕಲಶೋತ್ಸವದ ಜತೆಗೆ ಶ್ರೀ ಗಣಪತಿ, ಶಾಸ್ತಾ, ನಾಗದೇವರ ಪ್ರತಿಷ್ಠೆ, ಸುತ್ತು ಪೌಳಿ, ತೀರ್ಥಬಾವಿ, ರಾಜಗೋಪುರಗಳ ಅರ್ಪಣಾ ಮಹೋತ್ಸವ ನಡೆಯುವುದು ಎಂದು ಅವರು ಹೇಳಿದರು.

Click here

Click Here

Call us

Call us

ಸಂಬಂಧಿಸಿದ ಧಾರ್ಮಿಕ ವಿಧಿಗಳಲ್ಲದೆ ಮೇ 1 ಮತ್ತು 2ರಂದು ಸಂಜೆ ಧಾರ್ಮಿಕ ಸಭೆಗಳು ನಡೆಯಲಿದ್ದು, ಕ್ರಮವಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಮತ್ತು ಕೊಪ್ಪದ ಸ್ವರ್ಣ ಪೀಠಿಕಾಪುರ ಗೌರಿಗದ್ದೆ ದತ್ತ ಆಶ್ರಮದ ಶ್ರೀ ವಿನಯ ಗುರೂಜಿ ಆಶೀರ್ವಚನ ಮಾಡುವರು. ಅವರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಮತ್ತು ನವೋದಯದ ಸ್ವಸಹಾಯ ಸಂಘಗಳ ಸದಸ್ಯರು ದುಡಿಯುತ್ತಿದ್ದಾರೆ. ಹೆದ್ದಾರಿಯಿಂದ ಹಳಗೇರಿ ನಡುವಿನ 4 ಕಿಲೋಮೀಟರು ರಸ್ತೆ ತೀರಹದಗೆಟ್ಟಿದ್ದು, ಅದರ ಗುಂಡಿಗಳನ್ನು ಸ್ವಯಂಸೇವಕರು ಶ್ರಮದಾನದ ಮೂಲಕ ಮುಚ್ಚುತ್ತಿದ್ದಾರೆ. ಈ ಮಾರ್ಗವನ್ನು ವಿದ್ಯುದ್ದೀಪಗಳಿಂದ ಬೆಳಗಲಾಗುವುದು. ಎಲ್ಲ ದಿನಗಳಲ್ಲೂ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. 29ಕ್ಕೆ ಸ್ಥಳೀಯರಿಂದ ಹಾಗೂ ಸಪ್ತಸ್ವರ ಮ್ಯೂಜಿಕಲ್ ಗ್ರೂಪ್ ಅವರಿಂದ ನೃತ್ಯ ವೈಭವ, ಗಾನ ರಸಮಂಜರಿ, 30ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಘಟಂ ವಾದಕ ವಿದ್ವಾನ್ ಉಳ್ಳೂರು ಗಿರಿಧರ ಉಡುಪ ಮತ್ತು ಬಳಗದವರಿಂದ ಸಂಗೀರ ರಸಸಂಜೆ, 1ರಂದು ಮಂಗಳೂರಿನ ಅಮೆಜಾನ್ ಡಾನ್ಸ್ ಗ್ರೂಪ್‌ನಿಂದ ಡಾನ್ಸ್ ಧಮಾಕಾ, 2ರಂದು ಪೇರ್ಡೂರು ಮೇಳದಿಂದ ಪೌರಾಣಿಕ ಪ್ರಸಂಗದ ಯಕ್ಷಗಾನ ನಡೆಯಲಿವೆ. ಭಕ್ತರ ಉದಾರ ಕೊಡುಗೆಗಳಿಂದ ಸಂಗ್ರಹಿಸಿದ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿ, ಅದರ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉಪ್ರಳ್ಳಿ ಸತೀಶಕುಮಾರ ಶೆಟ್ಟಿ ಇದ್ದರು.

Also Read ► ಎ.29ರಿಂದ ಮೇ.02: ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ  – https://kundapraa.com/?p=31969 

Leave a Reply

Your email address will not be published. Required fields are marked *

five × 1 =