ವಿಧಾನ ಪರಿಷತ್ ಚುನಾವಣೆ: ಯಾರು ಹಿತವರು ನಿಮಗೆ ಈ ಮೂವರೊಳಗೆ…

Call us

Call us

Call us

Call us

ಸುನಿಲ್ ಹೆಚ್. ಜಿ. ಬೈಂದೂರು.

Call us

Click Here

Click here

Click Here

Call us

Visit Now

Click here

ವಿಧಾನ ಪರಿಷತ್ ಚುನಾವಣೆ. ಇಲ್ಲಿ ಉಳಿದ ಚುನಾವಣೆಗಳಂತೆ ಹೇಳಿಕೊಳ್ಳುವಂತಹ ಅಬ್ಬರ ಇಲ್ಲದಿದ್ದರೂ ರಾಜಕೀಯ ಕಸರತ್ತು ಇಲ್ಲದಿಲ್ಲ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಭಾರಿ ನಾಯಕರುಗಳ ಪ್ರತಿಷ್ಠೆಯ ಪ್ರಶ್ನೆ, ಬಂಡಾಯ ಅಭ್ಯರ್ಥಿಗಳ ಅಳಿವು ಉಳಿವಿನ ಪ್ರಶ್ನೆ ಎದುರುಗೊಂಡು ಗೆಲುವಿಗಾಗಿ ತೆರೆ ಮರೆಯ ಕಸರತ್ತು ನಡೆಯುತ್ತಿದೆ. ಮೇಲ್ನೋಟಕ್ಕೆ ಪಕ್ಷಗಳ ನಡುವಿನ ಸಮರ ಎಂದೆನಿಸಿದರೂ ವ್ಯಕ್ತಿಗಳ ನಡುವೆ ಸ್ವರ್ಧೆ ಏರ್ಪಟ್ಟಿರುವುದನ್ನು ಅಲ್ಲಗಳೆಯಲಾಗದು. ಕಳೆದ ಭಾರಿ ಅವಿರೋಧ ಆಯ್ಕೆ ಕಂಡ ಈ ಕ್ಷೇತ್ರದಲ್ಲಿ ಸ್ವರ್ಧೆಯ ಕಾವು ಏರುತ್ತಿದೆ.

ರಾಜ್ಯದ ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಕ್ಷೇತ್ರವು ದ.ಕ ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ ಬೆಳ್ತಂಗಡಿ ತಾಲೂಕು ಹಾಗೂ ಉಡುಪಿ ಜಿಲ್ಲೆಯ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಸೇರಿ ಒಟ್ಟು 13 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವಿಭಜಿತ ಜಿಲ್ಲೆಯ ಸ್ಥಳೀಯ ಪಾಧಿಕಾರದ 6631 ಮತದಾರರ ಪೈಕಿ ಗ್ರಾಮ ಪಂಚಾಯತ್ ಸದಸ್ಯರದ್ದು ಇಲ್ಲಿ ಬಹುಮುಖ್ಯ ಪಾತ್ರ. ಉಳಿದಂತೆ ಸಂಸದರಾದ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಎರಡೂ ಜಿಲ್ಲೆಗಳ 13 ಶಾಸಕರು, ನಾಲ್ವರು ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಸದಸ್ಯರು ಪರಿಷತ್ ಚುನಾವಣೆಯ ಮತದಾರರಾದ್ದರಿಂದ ಎಲ್ಲರೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಕಾಂಗ್ರೆಸ್‌ನ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಈ ಭಾರಿ ಮತ್ತೆ ಕಣದಲ್ಲಿದ್ದಾರೆ. ಆದರೆ ಕಳೆದ ಅವಧಿಯಂತೆ ಅವಿರೋಧ ಆಯ್ಕೆಯ ಪ್ರಮೇಯ ಈ ಭಾರಿಯಿಲ್ಲ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಕೆ. ಜಯಪ್ರಕಾಶ್ ಹೆಗ್ಡೆ, ಹರಿಕೃಷ್ಣ ಬಂಟ್ವಾಳ ಸ್ವರ್ಧೆಗಿಳಿದುದರ ಪರಿಣಾಮ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಒಟ್ಟು ಸ್ವರ್ಧೆಗೆ ಅಣಿಯಾಗಿದ್ದ ಎಂಟು ಮಂದಿ ಅಭ್ಯರ್ಥಿಗಳಲ್ಲಿ ಜೆಡಿಎಸ್ ನ ಪ್ರಕಾಶ್ ಶೆಟ್ಟಿ ಕಣದಿಂದ ಹಿಂದೆ ಸರಿದು ಇನ್ನೊರ್ವ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಪಕ್ಷ ಒಮ್ಮತದ ನಿರ್ಧಾರ ಕೈಗೊಂಡು ಕೋಟ ಅವರನ್ನೇ ಮತ್ತೆ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ, ಕಾಂಗ್ರೆಸ್ ಈ ವಿಚಾರದಲ್ಲಿ ಎಡವಿರುವುದು ಸ್ವಷ್ಟವಾಗಿ ಗೋಚರಿಸುತ್ತದೆ. ಚುನಾವಣೆಗೆ ಸ್ವರ್ಧಿಸುವುದಿಲ್ಲ ಎಂದು ಹೇಳುತ್ತಲೇ ಬಂದಿರುವ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಮತ್ತೆ ಟಿಕೆಟ್ ನೀಡುವ ಅಗತ್ಯವೇನಿತ್ತು ಎಂದು ಸ್ವತಃ ಕಾಂಗ್ರೆಸ್ಸಿಗರೇ ದೂರಿಕೊಂಡಿದ್ದರು. ಆಕಾಂಕ್ಷಿಗಳನ್ನು ಬಿಟ್ಟು ಬೇಡವೆಂದವರಿಗೆ ಮಣೆ ಹಾಕಿದ್ದಕ್ಕಾಗಿ ಹಲವರು ಅಸಮಧಾನಗೊಂಡಿದ್ದರು. ಅದರ ಮುಂದುವರಿದ ಭಾಗವಾಗಿ ಭಿನ್ನಮತ ಕುಡಿಯೊಡೆದು ಮಾಜಿ ಮಂತ್ರಿ ಜಯಪ್ರಕಾಶ್ ಹೆಗ್ಡೆ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಹರಿಕೃಷ್ಣ ಬಂಟ್ವಾಳ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಯಾವ ರಾಜಿಗೂ ಬಗ್ಗದ ಅವರನ್ನು ಶಿಸ್ತುಕ್ರಮವೆಂದು ಪಕ್ಷದಿಂದಲೂ ಉಚ್ಚಾಟಿಸಿಯೂ ಆಗಿದೆ. (ಕುಂದಾಪ್ರ ಡಾಟ್ ಕಾಂ ವರದಿ)

[quote font_size=”15″ bgcolor=”#ffffff” arrow=”yes” align=”right”]ದಕ್ಷಿಣಕನ್ನಡ ಕ್ಷೇತ್ರ ಯಾರಿಗೆ ಫೇವ್‌ರಿಟ್?
ಆರಂಭದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ 1998ರ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆದಿತ್ತು. ಕಾಂಗ್ರೆಸ್‌ನ ಮಣೂರು ವಾಸುದೇವ ಕಾಮತ್ ಅವರೊಂದಿಗೆ ಬಿಜೆಪಿಯ ವಿನಯಚಂದ್ರ ಗೆದ್ದಿದ್ದರು. 2004ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಬ್ಲೇಸಿಯಸ್ ಡಿಸೋಜ ಗೆಲುವುದ ಸಾಧಿಸಿದ್ದರು. 2008ರಲ್ಲಿ ಬ್ಲೇಸಿಯಸ್ ಡಿಸೋಜ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಗೆದ್ದು ಅಚ್ಚರಿ ಮೂಡಿಸಿದ್ದರು. ಮತ್ತೆ 2010ರಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಕೋಟ ಪೂಜಾರಿ ಅವಿರೋಧ ಆಯ್ಕೆಗೊಂಡಿದ್ದರು. ಈ ಭಾರಿ ಸ್ವರ್ಧೆ ಏರ್ಪಟ್ಟಿದೆ. ಗೆಲುವು ಯಾರಿಗೆ ಒಲಿಯಲಿದೆ ಎಂಬುದನ್ನು ನೋಡಬೇಕಾಗಿದೆ. [/quote]

Call us

ಕಾಂಗ್ರೆಸ್ ವರ್ಸಸ್ ಬಿಜೆಪಿ ಅಲ್ಲ ಜೆಪಿ!
ಎಲ್ಲಾ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಸಾಮಾನ್ಯವಾಗಿ ಪೈಪೋಟಿ ಇರುತ್ತದೆ. ಆದರೆ ಈ ಭಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಗಳಿಗಿಂತ ವ್ಯಕ್ತಿಗಳ ನಡುವೆಯೇ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳಾದ ಜಯಪ್ರಕಾಶ್ ಹೆಗ್ಡೆ ಹಾಗೂ ಹರಿಕೃಷ್ಣ ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿಯ ಬಲ ಅಡಗಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮೊನ್ನೆ ಮೊನ್ನೆಯವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈರ್ವರೂ ಈಗ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ವರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಬೆಂಬಲಿತ ಮತದಾರರೂ ಕೂಡ ಯಾರ ಪರ ನಿಲ್ಲಬೇಕೆಂಬ ಗೊಂದಲ್ಲಿದ್ದಾರೆ. ಒಂದೆಡೆ ಜಯಪ್ರಕಾಶ್ ಹೆಗ್ಡೆ ತಾನು ಕಾರ್ಯಕರ್ತರ ಅಭ್ಯರ್ಥಿ ಎಂದು ಹೇಳಿಕೊಂಡಿದ್ದರೇ, ಹರಿಕೃಷ್ಣ ಬಂಟ್ವಾಳ ತಾನು ಪಕ್ಷದಿಂದ ಉಚ್ಚಾಟನೆಗೊಂಡಿರಬಹುದು ಆದರೆ ಕಾರ್ಯಕರ್ತರ ಮನದಿಂದಲ್ಲ ಎಂದು ಹೇಳುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಸದ್ಯ ಕಾಂಗ್ರೆಸಿಗರಿಗೆ ಪ್ರಬಲ ವಿರೋಧಿ ಬಿಜೆಪಿ ಪಕ್ಷಕ್ಕಿಂತ ಸ್ವತಂತ್ರ ಅಭ್ಯರ್ಥಿಗಳ ಭಯ ಕಾಡುತ್ತಿದೆ. ಕಾಂಗ್ರೆಸ್‌ನ ಎಲ್ಲಾ ಸಭೆಗಳಲ್ಲಿಯೂ ಬಿಜೆಪಿಯ ಬದಲಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ದೂರುತ್ತಿರುವುದು ಇದಕ್ಕೊಂದು ನಿದರ್ಶನ. (ಕುಂದಾಪ್ರ ಡಾಟ್ ಕಾಂ)

ಬಿಜೆಪಿಗೆ ಗೆಲುವು ಬಹುಪಾಲು ಖಚಿತ:
ದಕ್ಷಿಣಕನ್ನಡ ಕ್ಷೇತ್ರದ ಒಟ್ಟು ಮತಗಳಲ್ಲಿ 3,600 ಮತಗಳು ತಮಗೆ ದೊರೆಯಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ. ಹಾಗಾಗಿ ಪ್ರಥಮ ಪ್ರಾಶಸ್ತ್ಯದ ಎರಡು ಸಾವಿರ ಮತಗಳು ನಿರಾಯಾಸವಾಗಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಿಗಲಿದೆ ಎಂಬ ಭರವಸೆ ನಾಯಕರದ್ದು. ಹಾಗಾಗಿ ಗೊಂದಲವೇ ಬೇಡವೆಂದು ಜಾಣ್ಮೆಯಿಂದ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿದೆ. ಸರಳ, ಸಜ್ಜನಿಕೆಯ ರಾಜಕಾರಣಿ ಎಂದೆಸಿಕೊಂಡಿರುವ ಕೋಟ ಶ್ರೀನಿವಾಸ ಪೂಜಾರರೂ ಅದೇ ಧೈರ್ಯದಲ್ಲಿದ್ದಾರೆ. ತನ್ನ ಕಾರ್ಯವನ್ನು ಜನತೆ ಒಪ್ಪಿಕೊಂಡಿದ್ದಾರೆ. ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತಾನು ಅವಿರತವಾಗಿ ಶ್ರಮಿಸಿದ್ದೇನೆ. ಸ್ಥಳೀಯ ಸಂಸ್ಥೆಗಳ ಅಳಿವಿನ ಪ್ರಶ್ನೆ ಬಂದಾಗ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಸ್ಥಳೀಯ ಸಂಸ್ಥೆಗಳ ಸದಸ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಹಾಗಾಗಿ ಮತದಾರರು ತನ್ನ ಕೈಬಿಡಲಾರರು ಎಂದು ಹೇಳುತ್ತಿದ್ದಾರೆ. ಬಿಜೆಪಿಯ ನಾಯಕರೂ ಕೂಡ ಮತದಾರನ ಮನವೊಲಿಸು ಎಲ್ಲಾ ಕಸರತ್ತನ್ನು ಮಾಡುತ್ತಿದ್ದಾರೆ. ಹಾಗಾಗಿ ಪ್ರಥಮ ಪ್ರಾಶಸ್ತ್ಯದ ಮತಗಳು ಬಿಜೆಪಿಗೆ ಬಿದ್ದರೇ ಗೆಲುವು ಖಚಿತ. (ಕುಂದಾಪ್ರ ಡಾಟ್ ಕಾಂ)

ಜಯಪ್ರಕಾಶ್ ಹೆಗ್ಡೆ ಗೆಲುವು ಸುಲಭವಲ್ಲ:
ಕಾಂಗ್ರೆಸ್ ತಿರ್ಮಾನದಿಂದ ಬೇಸತ್ತು ಹೊರಬಂದ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಸೋಲು ಗೆಲುವು ಹೊಸತಲ್ಲ. ಸೋಲಿನ ರುಚಿ ಕಂಡಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಭಾರಿ ಗೆದ್ದವರು. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಿರುವಾಗ ಮಂತ್ರಿಯಾಗಿದ್ದವರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ನಿರಂತವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡವರು. ಹಾಗಾಗಿ ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಮತದಾರರಿಗೆ ಹೆಗ್ಡೆಯವರೂ ಫೇವರಿಟ್. ಸೊಲು-ಗೆಲುವಿನ ನಡುವೆಯೂ ನಿರಂತರವಾಗಿ ಎಲ್ಲರ ಸಂಪರ್ಕದಲ್ಲಿದ್ದು, ಮೊಬೈಲ್ ಮಿಸ್ಡ್ ಕಾಲಿಗೂ ಸ್ಪಂದಿಸವ ಗುಣವಿರುವುದು ಹೆಗ್ಡೆಯವರಿಗೆ ಪ್ಲಸ್ ಪಾಯಿಂಟ್. ತಾನು ಕಾರ್ಯಕರ್ತರ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದರೂ ಇರುವ 2,00 ಕಾಂಗ್ರೆಸ್ ಪರ ಮತಗಳಲ್ಲಿ ಯಾರು ಗೆಲ್ಲುವರು ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. (ಕುಂದಾಪ್ರ ಡಾಟ್ ಕಾಂ)

ಪ್ರತಾಪ್‌ಚಂದ್ರ ಶೆಟ್ಟಿ ಗೆಲುವು ನಿಶ್ಚಿತವಲ್ಲ:
ನಾಲ್ಕು ಭಾರಿ ವಿಧಾನಸಭಾ ಸದಸ್ಯರಾಗಿ, ಎರಡು ಭಾರಿ ವಿಧಾನ ಪರಿಷತ್ ಸದಸ್ಯರಾಗಿ 35ವರ್ಷಕ್ಕೂ ಹೆಚ್ಚು ಕಾಲ ರಾಜಕೀಯ ಜೀವದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಪ್ರತಾಪಚಂದ್ರ ಶೆಟ್ಟಿ ಅವರು ಮತ್ತೆ ಸ್ವರ್ಧಾ ಕಣದಲ್ಲಿ ಉತ್ಸುಕರಾಗಿದ್ದಾರೆ. ರಾಜಕೀಯ ಜೀವನ ಸಾಕು. ಮತ್ತೆ ಚುನಾವಣೆಗೆ ಸ್ವರ್ಧಿಸುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದ ಶೆಟ್ಟಿರು ಕಾರ್ಯಕರ್ತರ ಒತ್ತಡಕ್ಕೆ ಮಣಿದು, ವರಿಷ್ಠರ ತೀರ್ಮಾನ ಕಟ್ಟುಬಿದ್ದು ಮತ್ತೆ ಸ್ವರ್ಧಿಸುತ್ತಿದ್ದಾರೆ. ಆಸ್ಕರ್ ಅವರ ಆಪ್ತರಾದ ಪ್ರತಾಪಚಂದ್ರ ಶೆಟ್ಟರು ಪ್ರಭಾವಿಯೂ ಹೌದು. ಸತತ 30ವರ್ಷಗಳ ಕಾಲ ಎರಡೂ ಸದನಗಳ ಆಗುಹೋಗುಗಳನ್ನು ಹತ್ತಿರದಿಂದ ಗಮನಿಸಿದವರು. ಸುಮಾರು 2,600 ಮತಗಳು ಕಾಂಗ್ರೆಸ್ ಬೆಂಬಲಿತವಾದುದರಿಂದ ಪಕ್ಷ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಅವಳಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಮಂತ್ರಿಗಳಿಗೂ ಪ್ರತಾಪರ ಗೆಲುವು ಪ್ರತಿಷ್ಠೆಯ ಪ್ರಶ್ನೆ. ಆದರೆ ಈ ಮತಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯಥಿಗಳು ಎಷ್ಟು ಪಾಲು ಪಡೆಯುತ್ತಾರೆ ಎಂಬುದು ಕುತೂಹಲ. (ಕುಂದಾಪ್ರ ಡಾಟ್ ಕಾಂ)

ವೈಯಕ್ತಿಕ ವರ್ಚಸ್ಸು ಸ್ವತಂತ್ರ ಅಭ್ಯರ್ಥಿ ಗೆಲುವು ತಂದುಕೊಡುವುದೇ?
ಇಲ್ಲಿನ ಮತದಾರನಿಗೆ ಪಕ್ಷವೇ ಫೇವರೀಟ್ ಆದರೂ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ ಉದಾಹರಣೆಗಳಿವೆ. ಜಯಪ್ರಕಾಶ್ ಹೆಗ್ಡೆಯವರು ಎರಡು ಭಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತೇ ಜಯಗಳಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರೂ ಕೂಡ ಬಿಜೆಪಿಯಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ಹಾಗಾಗಿ ವೈಯಕ್ತಿಕ ವರ್ಚಸ್ಸು ಕೂಡ ಇಲ್ಲಿ ಕೆಲಸ ಮಾಡದೇ ಇರಲಾರದು. ಆದರೆ ಸದ್ಯ ಎರಡು ಜಿಲ್ಲೆಗಳ ಮತದಾರನಿರುವುದರಿಂದ ಯಾವುದನ್ನೂ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿಯ ದ್ವಿತೀಯ ಪ್ರಾಶಸ್ತ್ಯದ ಮತಗಳು ಸ್ವತಂತ್ರ ಅಭ್ಯರ್ಥಿಗಳಿಗೆ ಬಿದ್ದರೇ ರಾಜಕೀಯ ಚಿತ್ರಣವೇ ಬದಲಾಗಲಿದೆ.

ಒಟ್ಟಿನಲ್ಲಿ ಸೋಲು ಗೆಲುವಿನ ಈ ರಾಜಕೀಯ ಲೆಕ್ಕಾಚಾರಲ್ಲಿ ಯಾವ ಅಭ್ಯರ್ಥಿಗೆ ಗೆದ್ದುಬರಲಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಯಾರೂ ಬಂದರೂ ಜನಪರ ಕಾರ್ಯ ಮಾಡಲಿ ಎಂಬುದು ಪ್ರಜೆಗಳ ಹಂಬಲ. ಅಂದಹಾಗೆ ರಾಜಕೀಯದಲ್ಲಿ ಏನೂ ಆಗಬಹುದು!

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted. You can SHARE contents [/box]

Leave a Reply

Your email address will not be published. Required fields are marked *

seventeen + 7 =