ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಮೋದಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ವಿವಿಧ ಹಂತದಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದರೇ, ಕುಂದಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಭಿಮಾನಿಯೊಬ್ಬರು ತನ್ನ ಆಟೋ ರಿಕ್ಷಾದಲ್ಲಿ ಮೂರು ದಿನಗಳ ಕಾಲ 5 ಕಿಲೋಮೀಟರ್ ವರೆಗೆ 1 ರೂಪಾಯಿ ಪ್ರಯಾಣ ದರ ನಿಗದಿ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾನೆ. ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ ವಿನಾಯಕ ಟಾಕೀಸ್ ಬಳಿಯ ಆಟೋ ನಿಲ್ದಾಣದಲ್ಲಿರುವ ರಿಕ್ಷಾ ಹಿಂಬದಿ ಬ್ಯಾನರ್ ಅಳವಡಿಸಿಕೊಂಡ ಅಂಕದಕಟ್ಟೆಯ ಸುರೇಶ್ ಪ್ರಭು, ಮೋದಿ ಸರಕಾರದ ಸಾಧನೆಯಿಂದ ಪ್ರೇರಿತಗೊಂಡು ಸರಕಾರಕ್ಕೆ ಎರಡು ವರ್ಷ ಪೂರೈಸಿದಾಗಲೂ ತಮ್ಮ ಆಟೋ ಹಿಂದೆ 1ರೂಪಾಯಿ ಪ್ರಯಾಣ ದರದ ಮಾಹಿತಿ ನೀಡಿ ಓಡುಸುತ್ತಿದ್ದರು. ಮೂರು ದಿನದ ಕೊನೆಯಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು 1 ರೂಪಾಯಿಯಲ್ಲಿ ಪ್ರಯಾಣಿಸಿ ಖುಷಿಪಟ್ಟರೇ, ಇಂತಹ ಅವಕಾಶ ಕಲ್ಪಿಸಿಕೊಟ್ಟ ಸುರೇಶ್ ಪ್ರಭು ತಮ್ಮ ಕೆಲಸದಿಂದ ತೃಪ್ತರಾಗಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/