ಮೊಂತಿ ಫೆಸ್ತ್: ತಾಲೂಕಿನ ವಿವಿಧ ಚರ್ಚುಗಳಲ್ಲಿ ಸರಳ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ `ಮೊಂತಿ ಫೆಸ್ತ್ (ತೆನೆ ಹಬ್ಬ) ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಚರ್ಚುಗಳಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.

ರೈತರು ಬೆಳೆದ ಭತ್ತದ ತೆನೆಯನ್ನು ಆಯಾ ಚರ್ಚ್ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು.

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಧರ್ಮಗುರು ರೆ.ಫಾ ವಿನ್ಸೆಂಟ್ ಕುವೆಲ್ಲೂ, ರೆ.ಫಾ ಹೆರಾಲ್ಡ್ ಪಿರೇರಾ ಮತ್ತು ಬ್ರದರ್ ಲಿವನ್ ಮಥಾಯಸ್ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು.

ಚಿತ್ರಗಳು: ಎ ಒನ್ ಸ್ಟುಡಿಯೋ

 

Leave a Reply

Your email address will not be published. Required fields are marked *

ten + 9 =