ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ನೆಲ್ಲಿಗೆದ್ದೆ ಕ್ರೀಡಾಂಗಣದಲ್ಲಿ ದಿ. ಎನ್. ರವೀಂದ್ರ ಭಟ್ ಸ್ಮರಣಾರ್ಥ ಎರಡನೇ ವರ್ಷದ ನೆಲ್ಲಿಗೆದ್ದೆ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ 30 ಗಜಗಳ ‘ಮೂಕಾಂಬಿಕಾ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ನಡೆಯಿತು.
ಪಂದ್ಯಾಟದಲ್ಲಿ ಪ್ರಸಿದ್ಧಿ ಕ್ರಿಕೆಟರ್ಸ್ ತಂಡವು ಗೆಲುವು ಸಾಧಿಸಿತು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು ಫೈನಲ್ ಹಣಾಹಣೆಯಲ್ಲಿ ಪ್ರಸಿಧ್ಧಿ ಕ್ರಿಕೆಟರ್ಸ ಮತ್ತು 8 ವಂಡರ್ಸ ಕ್ರಿಕೆಟರ್ಸ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಿತು. ಫೈನಲ್ ಪಂದ್ಯದ ರೋಚಕ ಹಣಾಹಣೆಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಪ್ರಸಿಧ್ಧಿ ಕ್ರಿಕೆಟರ್ಸ ನಿಗದಿತ 5 ಓವರ್ 49 ರನ್ ಗಳಿಸಿತು ನಂತರ ಬ್ಯಾಟಿಂಗ್ ಆರಂಭಿಸಿದ 8 ವಂಡರ್ಸ ಕ್ರಿಕೆಟರ್ಸ್ 48 ರನ್ ಗಳಿಸಿತು.
ನೆಲ್ಲಿಗೆದ್ದೆ ಪ್ರೀಮಿಯರ್ ಲೀಗಿನ ಎರಡನೇ ಆವೃತ್ತಿಯಲ್ಲಿ ವಿನೋದ್ ಭಟ್ ನೇತೃತ್ವದ ಪ್ರಸಿಧ್ಧಿ ಕ್ರಿಕೆಟರ್ಸ್ ಮೂಕಾಂಬಿಕಾ ಟ್ರೋಫಿ ಜಯಗಳಿಸಿತು ಹಾಗೂ ಶ್ರೀನಾಥ್ ಅಡಿಗ ನೇತೃತ್ವದ 8 ವಂಡರ್ಸ ಕ್ರಿಕೆಟರ್ಸ್ ದ್ವಿತೀಯ ಸ್ಥಾನ ಗೆದ್ದುಕೊಂಡಿತು.
ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಆಟಗಾರರಾಗಿ ಕಿರಣ್, ಸರಣಿಯ ಉತ್ತಮ ಎಸೆತಗಾರರಾಗಿ ಅರ್ಜುನ್, ಉತ್ತಮ ದಾಂಡಿಗನಾಗಿ ಕಾಳಿದಾಸ ಮತ್ತು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕಿರಣ್ ಪಡೆದುಕೊಂಡರು.