ಕುಂದಾಪುರ: ಮೃತ ತಾಯಿಯನ್ನು ಕಂಡು ಮಗನೂ ಹೃದಯಾಘಾತದಿಂದ ನಿಧನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:  ಮೃತರಾದ ತನ್ನ ತಾಯಿಯನ್ನು ಕಂಡು ಮಗನೂ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಮನಕಲಕುವ ಘಟನೆಯೊಂದು ಕುಂದಾಪುರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Call us

Call us

ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಸಮೀಪದ ಮಹಾರಾಜ್ ಜುವೆಲ್ಲರ‍್ಸ್ ಮಾಲಿಕ ದಿ. ರಮೇಶ್ ಶೇಟ್ ಪತ್ನಿ ಶಕುಂತಲಾ ಶೇಟ್ (80) ಸ್ವಗೃಹದಲ್ಲಿ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ನೋವಿನಲ್ಲಿದ್ದ ಮಗ ಪ್ರಶಾಂತ್ ಶೇಟ್ (46) ಕೂಡ ಒಂದು ಗಂಟೆಯ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮೃತ ಶಕುಂತಲಾ ಅವರಿಗೆ 4 ಗಂಡು ಹಾಗೂ 2 ಪುತ್ರಿಯರಿದ್ದು, ಅವರು ಗಂಡು ಮಕ್ಕಳೊಂದಿಗೆ ಕುಂದಾಪುರದಲ್ಲಿನ ಮನೆಯಲ್ಲಿ ವಾಸವಾಗಿದ್ದರು. ಪ್ರಶಾಂತ್ 3ನೇ ಪುತ್ರರಾಗಿದ್ದು, ಅವಿವಾಹಿತರಾಗಿದ್ದರು. ಕುಂದಾಪುರದ ಜುವೆಲ್ಲರ್ಸ್ ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ಅವರು ಅಪಾರ ಮಿತ್ರ ವರ್ಗವನ್ನು ಹೊಂದಿದ್ದರು.

Call us

Call us

ಶನಿವಾರ ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿ ಇರುವ ಹಿಂದೂ ಸ್ಮಶಾನದಲ್ಲಿ ತಾಯಿ ಹಾಗೂ ಮಗನ ಅಂತ್ಯ ಸಂಸ್ಕಾರ ಒಟ್ಟಿಗೆ ನಡೆಸಲಾಯಿತು. ಕುಂದಾಪುರದ ಜುವೆಲ್ಲರಿ ಅಂಗಡಿಗಳು ಮೃತರ ಗೌರವಾರ್ಥವಾಗಿ ಅಂಗಡಿ ಬಂದ್ ಮಾಡಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ನಾಡ: ಆಯತಪ್ಪಿ ಬಾವಿಗೆ ಬಿದ್ದ ವ್ಯಕ್ತಿ ಸಾವು – https://kundapraa.com/?p=38617 .
► ಉಡುಪಿ: ಶನಿವಾರ 15 ಕೊರೋನಾ ಪಾಸಿಟಿವ್ ದೃಢ. ಒಟ್ಟು 720 ಮಂದಿ ಡಿಸ್ಚಾರ್ಜ್ – https://kundapraa.com/?p=38608 .

 

Leave a Reply

Your email address will not be published. Required fields are marked *

seven + 18 =