ಕುಂದಾಪುರ: ಕೆರೆಯಲ್ಲಿ ಮುಳುಗಿ ತಾಯಿ ಮಕ್ಕಳಿಬ್ಬರ ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆರೆಯಲ್ಲಿ ನೆನೆಹಾಕಿದ್ದ ಭತ್ತದ ಚೀಲಗಳನ್ನು ಮೇಲೆತ್ತುವ ವೇಳೆ ಆಯತಪ್ಪಿ ಬಿದ್ದ ತಾಯಿ ಹಾಗೂ ಅವರ ರಕ್ಷಣೆಗೆ ಧಾಮಿಸಿದ ಇಬ್ಬರು ಮಕ್ಕಳು ನೀರಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇಲಟ್ಟು ಎಂಬಲ್ಲಿ ನಡೆದಿದೆ. ದೇಲಟ್ಟು ದೇವಸ್ಥಾನ ಸಮೀಪದ ನರಸಿಂಹ ಶೆಟ್ಟಿ ಎಂಬುವವರ ಪುತ್ರಿ ಭಾರತಿ (45) ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಶೆಟ್ಟಿ(21) ಹಾಗೂ ಪ್ರಜ್ಞಾ ಶೆಟ್ಟಿ (19) ಮೃತ ದುರ್ದೈವಿಗಳು.

Call us

Call us

Call us

ಕೃಷಿಕರಾದ ಭಾರತಿ ಅವರ ಕುಟುಂಬ ಮಳೆಗಾಲ ಸನ್ನಿಹಿತವಾದ ಬೆನ್ನಲ್ಲೇ ಬಿತ್ತನೆ ಮಾಡುವ ಉದ್ದೇಶದಿಂದ ಬೀಜದ ಭತ್ತವನ್ನು ಮೊಳಕೆ ಬರಿಸುವ ಸಲುವಾಗಿ ಮನೆಯ ಸಮೀಪದ ಕೆರೆಯಲ್ಲಿ ನೆನೆಹಾಕಿದ್ದರು. ಸಂಜೆ ವೇಳೆಗೆ ಮಳೆಯಾಗಿದ್ದರಿಂದ ಬೀಜಗಳು ಹಾಳಗಬಹುದು ಎಂಬ ಕಾರಣಕ್ಕೆ ಕೆರೆಯಲ್ಲಿ ಹಾಕಲಾಗಿದ್ದ ಚೀಲಗಳನ್ನು ಮೇಲೆತ್ತಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕಾಲು ಜಾರಿ ಬಿದ್ದ ತಾಯಿ ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ್ದ ಮಕ್ಕಳಿಬ್ಬರೂ ಕೆರೆಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಸಂಜೆ ಮನೆಯಲ್ಲಿ ತಾಯಿ ಮಕ್ಕಳು ಕಾಣಿಸದಿದ್ದುದರಿಂದ ಬಂಧುಗಳು ಹುಡುಕಾಟ ಆರಂಭಿಸಿದ್ದರು. ಕೆರೆಯ ದಂಡೆಯ ಮೇಲೆ ಭತ್ತದ ಚೀಲಗಳಿರುವುದನ್ನು ಕಂಡು ಅನುಮಾನಗೊಂಡು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೂವರ ಮೃತ ದೇಹಗಳು ಪತ್ತೆಯಾಗಿವೆ. ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ಮುಂದುವರಿದಿದೆ. ಸ್ಥಳಕ್ಕೆ ಕೋಟ ಎಸೈ ರಾಜಗೋಪಾಲ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2 thoughts on “ಕುಂದಾಪುರ: ಕೆರೆಯಲ್ಲಿ ಮುಳುಗಿ ತಾಯಿ ಮಕ್ಕಳಿಬ್ಬರ ಸಾವು

Leave a Reply

Your email address will not be published. Required fields are marked *

twelve + 5 =