ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶಂಕರನಾರಾಯಣದ ಮದರ್ ತೆರೆಸಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 48 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ, ವಾಣಿಜ್ಯ ವಿಭಾಗದ ತೇಜಸ್ವಿ 585 ಅಂಕ, ವೈಷ್ಣವಿ 585 ಅಂಕ, ವೈಷ್ಣವಿ 585 ಅಂಕ, ಶಿವರಾಜ್ 579 ಅಂಕ, ಅಮೂಲ್ಯ 578 ಅಂಕ, ಅನುಶ್ರೀ 575 ಅಂಕ, ಸ್ವಾತಿ 571 ಅಂಕ, ಸಹನಾ ಶೆಟ್ಟಿ 563 ಅಂಕ, ಶ್ರೀನಿಧಿ 561 ಅಂಕ, ಸ್ಪೂರ್ತಿ 560 ಅಂಕ, ಧನಷಾ 558 ಅಂಕ, ಪ್ರಿತೇಶ್ 558 ಅಂಕ, ಪಲ್ಲವಿ 555 ಅಂಕ, ಸೌಜನ್ಯ 553 ಅಂಕ, ರೋಹಿತ್ 545 ಅಂಕ, ಸಂಶೋಧ್ 541 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದ ಸನ್ನಿಧಿ 583 ಅಂಕ, ಶ್ರಾವ್ಯ 583 ಅಂಕ, ಶ್ರಿದೇವಿ 583 ಅಂಕ, ಅಂಕಿತಾ 581 ಅಂಕ, ಸ್ಪೂರ್ತಿ 579 ಅಂಕ, ನಿಶ್ಮಿತಾ 578 ಅಂಕ, ಅರ್ಚನಾ 569 ಅಂಕ, ರಚಿತಾ 566 ಅಂಕ, ಶಾಂಭವಿ 564 ಅಂಕ, ಶ್ರೇಯಾ 564 ಅಂಕ, ಸಿಂಚನ 562 ಅಂಕ, ವಿವೇಕ್ ಪ್ರಭು 562 ಅಂಕ, ಕಲ್ಪನಾ 561 ಅಂಕ, ವಿದ್ಯಾಶ್ರೀ 561 ಅಂಕ, ಮಹಾಮಾಯಿ 560 ಅಂಕ, ವಿಶ್ವಾಸ್ 550 ಅಂಕ, ಅನೀಶ್ 543 ಅಂಕ, ರಶ್ಮಿ ರಾವ್ 541 ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.