ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮೊವಾಡಿಯ ಹಿರಿಯ ಪ್ರಾಥಮಿಕ ಶಾಲೆಯ 1997-98 ರ ಸಾಲಿನ ವಿದ್ಯಾರ್ಥಿಗಳು ಕೊಡಮಾಡಿದ ಎರಡು ಕಂಪ್ಯೂಟರ್‌ಗಳನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅನಂತ ಮೊವಾಡಿ ಮಾತನಾಡಿ ಶಾಲೆಯ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಹಳೆ ವಿದ್ಯಾರ್ಥಿಗಳ ಈ ತೆರನಾದ ಕೊಡುಗೆ ಎಲ್ಲರಿಗೂ ಮಾದರಿಯಾಗಿರಲಿ. ಸಮಾಹದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗುವಂತಾಗಲಿ ಎಂದು ಹೇಳಿದರು.
ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ರಾದ ಸಂಧ್ಯಾ ಕಾರಂತ ಅಧ್ಯಕ್ಷ ತೆ ವಹಿಸಿದ್ದರು. ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶೇಖರ ಗಾಣಿಗ, ಶಾಲೆಯ ಮುಖ್ಯೋಪಾಧ್ಯಾಯರಾದ ಜ್ಯೋತಿ ಐತಾಳ್, ಹಕಲೆ ವಿದ್ಯಾರ್ಥಿಗಳ ಪರವಾಗಿ ಮೆಸ್ಕಾಂನ ಎ.ಇ. ಶಶಿರಾಜ್, ಭರತ್ ಆಚಾರ್ಯ ಎಸ್ ಡಿ ಎಮ್ ಸಿ ಸದಸ್ಯರು, ಶಿಕ್ಷಕರು , 1997-98 ಸಾಲಿನ ಹಳೆ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಶರಾವತಿ ವಂದಿಸಿದರು. ಸಹಶಿಕ್ಷಕ ದೇವದಾಸ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.