ಪ್ರಾಣಿ ರಕ್ಷಣಾ ಕೇಂದ್ರ ಹಾಗೂ ಉದ್ಯಾನ ಸ್ಥಾಪನೆ ಕುರಿತು ಕೇಂದ್ರಕ್ಕೆ ಪ್ರಸ್ತಾಪನೆ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ‘ವನ್ಯಜೀವಿ ಪ್ರಾಣಿ ರಕ್ಷಣಾ ಕೇಂದ್ರ ಹಾಗೂ ಮೂಕಾಂಬಿಕಾ ಪ್ರಾಣಿಶಾಸ್ತ್ರೀಯ ಉದ್ಯಾನ’ ಸ್ಥಾಪನೆ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

Call us

Call us

ಮೂಕಾಂಬಿಕಾ ಅಭಯಾರಣ್ಯವು ಕುಂದಾಪುರ, ಬೈಂದೂರು ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸೇರಿ 370.37 ಚ.ಕಿಮೀ ಪಶ್ಚಿಮ ಕರಾವಳಿ ಅರೆ ಉಷ್ಣವಲಯ ಹಾಗೂ ಉಷ್ಣವಲಯ ನಿತ್ಯಹರಿದ್ವರ್ಣ ಅರಣ್ಯ (west coast semi-tropical and tropical evergreen forest) ಪ್ರದೇಶವಾಗಿದ್ದು, ಮೂಕಾಂಬಿಕಾ ಅಭಯಾರಣ್ಯದಲ್ಲಿ ಚಿರತೆ, ಕರಡಿ, ಕಾಡುಕೋಣ, ಕೆನ್ನಾಯಿ, ಗುಳ್ಳೆನರಿ, ಕಡವೆ, ಸಾರಂಗ ಹಾಗೂ ಇನ್ನಿತರೆ ಪ್ರಾಣಿ ಸಂಕುಲಗಳು, ಜಂಗಲ್ ಮೈನಾ, ಬಿಳಿ ಹಾಗೂ ಕೆಂಪು ಬುಲ್ ಬುಲ್, ಮಂಗಟ್ಟೆ(hornbill) ಹಾಗೂ ಇನ್ನಿತರೆ ಹಕ್ಕಿಗಳು ನೆಲೆಸಿವೆ. ಪ್ರಾಣಿಗಳ ಸಂಘರ್ಷ ನಡುವೆ ಅಪಘಾತದಲ್ಲಿ ಹಾಗೂ ಮಾನವ-ಪ್ರಾಣಿ ಸಂಘರ್ಷಗಳಲ್ಲಿ ಗಾಯಗೊಂಡ ಪ್ರಾಣಿ-ಪಕ್ಷಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡಲು ಇಲ್ಲಿ ಹತ್ತಿರದಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲದಿರುದರಿಂದ ಅರಣ್ಯದ ಗಡಿ ಭಾಗಗಳಲ್ಲಿರುವ ಕೃಷಿ ಬೆಳೆಗಳಿಗೆ ಹಾಗೂ ಅಡಿಕೆ ಬೆಳೆಗಳಿಗೆ ಕಡವೆ, ಸಾರಂಗ, ಕಾಡುಕೋಣ, ಕಾಡು ಹಂದಿಗಳಿಂದ ಅಪಾರ ಹಾನಿಯಾಗುತ್ತಿದೆ. ಚಿರತೆಗಳು ಸಾಕು ಪ್ರಾಣಿಗಳನ್ನು ಹೊತ್ತೊಗುತ್ತಿವೆ. ಆದ್ದರಿಂದ ಈ ಸಮಸ್ಯೆಗಳ ಬಗ್ಗೆ ತುರ್ತಾಗಿ ಗಮನ ಹರಿಸಿ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಹಾಗೂ ಪ್ರಾಣಿ ಸಂಕುಲ ಹಾಗೂ ಅರಣ್ಯ ಪ್ರದೇಶಗಳನ್ನೂ ಸಂರಕ್ಷಣೆ ಮಾಡಲು ಕ್ರಮ ಕೈಗೊಂಡು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ‘ವನ್ಯಜೀವಿ ಪ್ರಾಣಿ ರಕ್ಷಣಾ ಕೇಂದ್ರ ಹಾಗೂ ಮೂಕಾಂಬಿಕಾ ಪ್ರಾಣಿಶಾಸ್ತ್ರೀಯ ಉದ್ಯಾನ’ ಸ್ಥಾಪನೆಗೆ ಮನವಿ ಮಾಡಿದ್ದಾರೆ.

ಕಟ್ಟಿನಹೊಳೆಯಿಂದ ಕೊಡಚಾದ್ರಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣದ ಬಗ್ಗೆ ಮನವಿ
ಬೈಂದೂರು ವ್ಯಾಪ್ತಿಯ ಕಾರ್ಕಳ ವನ್ಯಜೀವಿ ವಲಯದಲ್ಲಿ ಬರುವ ಕಟ್ಟಿನಹೊಳೆಯಿಂದ ಕೊಡಚಾದ್ರಿವರೆಗಿನ ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ದಿಪಡಿಸವ ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮೊದಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಪ್ರಸ್ತಾವನೆಯನ್ನುರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಗಣನೆಗೆ ತೆಗೆದುಕೊಂಡು ಪ್ರಥಮ ಆದ್ಯತೆಯ ಮೇರೆಗೆ ಅನುಮೊದನೆ ದೊರಕಿಸಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

15 − twelve =