ಕಡಿಮೆ ಅವಧಿಯಲ್ಲಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಆದ್ಯತೆ: ಬಿ. ವೈ. ರಾಘವೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರದ ಜನರ ನೀರಾವರಿ ಸೌಕರ್ಯವನ್ನು ಒದಗಿಸಲುವ ನಿಟ್ಟಿನಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವ ನೇತೃತ್ವದಲ್ಲಿ ರಾಜ್ಯದ ನೀರಾವರಿ ಸಚಿವರನ್ನು ಭೇಟಿಯಾಗಿ ಶಿವಮೊಗ್ಗ ಕ್ಷೇತ್ರಕ್ಕೆ ನಾಲ್ಕು ನೀರಾವರಿ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಆದಿತ್ಯವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನೀರಾವರಿ ಯೋಜನೆಯ ಪೈಕಿ ಸುಮಾರು ೧೨೦ ಕೋಟಿ ರೂ. ವೆಚ್ಚದ ಸಿದ್ಧಾಪುರ ಸೌಕೂರು ನೀರಾವರಿ ಯೋಜನೆಗೆ ಈಗಾಗಲೇ ಜೆಟ್‌ನಲ್ಲಿ ಐವತ್ತು ಕೋಟಿ ರೂ. ಮೀಸಲಿರಿಸಲಾಗಿದ್ದು ಆರಂಭಿಕ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಬೈಂದೂರು ಕ್ಷೇತ್ರದ ಉಪ್ಪುಂದ-ಮಡಿಕಲ್ ಬಂದರು ಅಭಿವೃದ್ಧಿಗೆ ೧೨೦ ಕೋಟಿ, ಮರವಂತೆ ಬಂದರು ೨ನೇ ಹಂತದ ಕಾಮಗಾರಿಗೆ ೩೮ ಕೋಟಿ, ಶಿರೂರು ಅಳ್ವೆಗದ್ದೆ ಬಂದರು ಎರಡನೇ ಹಂತದ ಕಾಮಗಾರಿಗೆ ೯೮ ಕೋಟಿ ಅಗತ್ಯವಿದ್ದು ಕೇಂದ್ರ ಕೃಷಿ ಮಂತ್ರಿಯನ್ನು ಶಾಸಕರೊಂದಿಗೆ ಭೇಟಿಯಾಗಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದು, ಅವರೂ ರಾಜ್ಯ ಸರಕಾರಕ್ಕೆ ಡಿಪಿಆರ್ ತಯಾರಿಸಲು ಸೂಚಿಸಿದ್ದಾರೆ.

ಮೀನುಗಾರರು ಹೆಚ್ಚಿರುವ ಕಂಚುಗೋಡು ಗಂಗೊಳ್ಳಿ, ಸೀಲ್ಯಾಂಡ್ ಹೋಟೆಲ್‌ನಿಂದ ಮರವಂತೆ ಬಂದರು ತನಕದ ರಸ್ತೆ, ಕೋಡೆರಿ ಬಂದರು ರಸ್ತೆ, ಮಡಿಕಲ್ ಕರ್ಕಿಕಳಿ ಬಂದರು ರಸ್ತೆ, ಶಿರೂರು ಆಳ್ವೆಗದ್ದೆ ಬಂದರು ರಸ್ತೆಗೆ ಬೇಡಿಕೆ ಇಡಲಾಗಿದೆ. ಬೈಂದೂರು ಟೂರಿಸಂ ಹಬ್ ಆಗಬೇಕು ಎಂಬ ನಿಟ್ಟಿನಲ್ಲಿ ಸೋಮೇಶ್ವರ ಟೂರಿಸಂ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದ್ದು, ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿಗಳು ಕೇಂದ್ರದ ಟೂರಿಸಂ ಮಂತ್ರಿಯನ್ನು ಭೇಟಿಯಾಗಲಿದ್ದಾರೆ. ಕಾರ್ಗೋ ಕಮ್ ಎರ್‌ಸ್ಟ್ರೀಪ್‌ಗಾಗಿ ಈಗಾಗಲೇ ವಿಮಾನಯಾನ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಂಗಳ ಎಕ್ಸ್‌ಪ್ರೆಸ್, ಪೂರ್ಣಾ ಎಕ್ಸ್‌ಪ್ರೆಸ್ ಹಾಗೂ ಪೂಣೆ ಎರ್ನಾಕುಲಂ ರೈಲು ನಿಲುಗಡೆಗೆ ಬೇಡಿಕೆ ಇಡಲಾಗಿದೆ.

ಶಿವಮೊಗ್ಗ ಕ್ಷೇತ್ರದ ೫೬ ಸರಕಾರಿ ಪದವಿ ಹಾಗೂ ಪದವಿಪೂರ್ವ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಗುತ್ತಿದ್ದು, ಬೈಂದೂರು ಕ್ಷೇತ್ರದಲ್ಲಿ ಒಟ್ಟು ೯ ಪದವಿ ಪೂರ್ವ ಕಾಲೇಜು, ೩ ಪದವಿ ಕಾಲೇಜು, ೩ ಆರೋಗ್ಯ ಕೇಂದ್ರ ಹಾಗೂ ೧ ತಾಲೂಕು ಕಛೇರಿಗೆ ಶುದ್ಧ ನೀರಿನ ಘಟಕವನ್ನು ನೀಡಲಾಗಿದೆ.

ನರೇಂದ್ರ ಮೋದಿಯವರು ಬಜೆಟ್‌ನಲ್ಲಿ ಘೋಷಿಸಿದಂತೆ ೫ ಎಕ್ರೆಗಿಂತ ಕಡಿಮೆ ಭೂಮಿ ಇರುವ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ ಸವಲತ್ತು ದೊರೆಯಲಿದ್ದು ಡಿಸೆಂಬರ್‌ನಿಂದಲೇ ರೈತರು ಇದಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ೮೮ ಸಾವಿರ ರೈತರಿದ್ದ ಅವರಿಗೆ ಮೊದಲನೇ ಕಂತು ಒಂದು ವಾರದಲ್ಲಿ ಸಿಗಲಿದೆ. ರೈತರು ಫಾರಂ ನಂ ಸಿ ಹಾಗೂ ಫಾರಂ ನಂ.ಡಿಯನ್ನು ರೈತಕೇಂದ್ರದಲ್ಲಿ ಭರ್ತಿಮಾಡಿ ಸಲ್ಲಿಸಬೇಕಿದೆ ಎಂದರು.

ಬೈಂದೂರು ವಿಧಾಸಭಾ ಕ್ಷೇತ್ರದ ಶಾಸಕ ಬಿ. ಎಂ ಸುಕುಮಾರ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಶೋಭಾ ಪುತ್ರನ್, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಗ್ರಾ.ಪಂ ಅಧ್ಯಕ್ಷೆ ಅನಿತಾ, ದೀಪಾ, ಯುವ ಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಮಹಿಳಾ ಮೋರ್ಚಾ ಆಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ಬಿಜೆಪಿ ಪ್ರಮುಖರಾದ ಸದಾಶಿವ ಪಡುವರಿ, ಗಿರೀಶ್ ಬೈಂದೂರು, ರಾಘವೇಂದ್ರ ನೆಂಪು, ಗೋಪಾಲ್ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

5 × two =