ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಸಂಸದ ಬಿ. ವೈ. ರಾಘವೇಂದ್ರ ಭೇಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

Click here

Click Here

Call us

Call us

Visit Now

Call us

Call us

ಬಳಿಕ ಅವರು ಮಾತನಾಡಿ, ವೀರ ಪುರುಷರಾದ ಕೋಟಿ ಚೆನ್ನಯರ ದೈವಸ್ಥಾನವನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಇಲ್ಲಿನ ಪರಿಸರವೂ ಸಂದರವಾಗಿದೆ ದೇವಳದ ವಠಾರ ಪ್ರವೇಶಿಸುತ್ತಿದ್ದಂತೆ ಇಲ್ಲಿನ ದೈವಿಶಕ್ತಿಯ ಅರಿವಾಗುತ್ತದೆ. ಬಿಲ್ಲವ ಸಮುದಾಯ ಬಂಧುಗಳು ಊರವರೊಂದಿಗೆ ಸೇರಿ ಈ ಭವ್ಯ ದೇಗುಲ ನಿರ್ಮಾಣ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಂಸದ ಬಿ. ವೈ. ರಾಘವೇಂದ್ರ ಅವರ ತಾಯಿ ಮೈತ್ರಾದೇವಿ ಅವರ ಸ್ಮರಣಾರ್ಥ ವೈಯಕ್ತಿವಾಗಿ 2 ಲಕ್ಷ ರೂ. ಹಾಗೂ ಸರಕಾರದ ಅನುದಾನ ರೂ. 10 ಲಕ್ಷವನ್ನು ಗರಡಿಯ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣ ಒದಗಿಸುವುದಾಗಿ ಅವರು ತಿಳಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಗರಡಿಯ ಪರವಾಗಿ ಸಂಸದರನ್ನು ಸನ್ಮಾನಿಸಿದರು. ಈ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ನಾವುಂದ, ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಗೋವಿಂದ ಬಾಬು ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎನ್. ಜಗನ್ನಾಥ ಶೆಟ್ಟಿ, ಅಧ್ಯಕ್ಷ ಗಣೇಶ್ ಎಲ್. ಪೂಜಾರಿ, ಕಾರ್ಯದರ್ಶಿ ಪ್ರಭಾಕರ ಬಿಲ್ಲವ, ಪ್ರಕಾಶ್ ಮಾಕೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು, ಅರ್ಚಕ ಗಣೇಶ್ ಪೂಜಾರಿ ಮೇಲ್‌ಹಿತ್ಲು, ಮಂಜಯ್ಯ ಪೂಜಾರಿ ಏಳಜಿತ, ರಘುರಾಮ ಪೂಜಾರಿ, ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Call us

Leave a Reply

Your email address will not be published. Required fields are marked *

eighteen − seventeen =