ಬಿಜೆಪಿ ಹೆಬ್ಬಾಗಿಲು ಮುಚ್ಚಿಸುತ್ತೇನೆಂದವರಿಗೆ ಮತದಾರರು ಉತ್ತರಿಸಲಿದ್ದಾರೆ: ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಜೆಪಿ ಸರಕಾರವಿದ್ದಾಗ ಹಾಗೂ ಸಂಸದರಾಗಿದ್ದಾಗ ಬೈಂದೂರು ಕ್ಷೇತ್ರ ಮೂಲಭೂತ ಸೌಕರ್ಯ, ಮೀನುಗಾರರ ಸಮಸ್ಯೆ, ರೈಲ್ವೇ ಯೋಜನೆ, ರಾ.ಹೆ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಹೀಗೆ ಎಲ್ಲಾ ವಿಭಾಗದಲ್ಲಿಯೂ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದೆ. ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು.

Call us

Call us

Visit Now

ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಪ್ರಧಾನಮಂತ್ರಿಗಳು ಬಿಜೆಪಿ ಹೆಬ್ಬಾಗಿಲನ್ನು ಮುಚ್ಚಿಸುವ ಮಾತುಗಳನ್ನಾಡುತ್ತಿದ್ದಾರೆ. ರಾಷ್ಟ್ರ ಭಕ್ತ ಸಂಘಟನೆಗಳ ಒಂದೆಡೆ ರಾಷ್ಟ್ರಭಕ್ತ ಸಂಘಟನೆ ಕಾರ್ಯಕರ್ತರ ಪರಿಶ್ರಮ ಮತ್ತು ಶಕ್ತಿ, ಇನ್ನೊಂದು ಕಡೆ ಮತದಾರರನ್ನು ಕೊಂಡುಕೊಂಡು ಮತ ಪಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜನರು ಸರಿಯಾದ ಉತ್ತರವನ್ನೇ ನೀಡಲಿದ್ದಾರೆ ಎಂದರು.

Click here

Click Here

Call us

Call us

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ ಮೀನುಗಾರರಿಗೆ ಅಗತ್ಯವಾದ ಸೀಮೆಎಣ್ಣೆ ದೊರಕಿಸಿಕೊಡಲು ಕರಾವಳಿ ಶಾಸಕರೊಂದಿಗೆ ತೆರಳಿ ಹಲವಾರು ಭಾರಿ ಸಿ.ಎಂ ಹಾಗೂ ಮೀನುಗಾರಿಕಾ ಸಚಿವರಿಗೆ ಹಲವು ಭಾರಿ ಮನವಿ ಮಾಡಿದ್ದೇನೆ. ಆದರೆ ಮುಂಖ್ಯಮಂತ್ರಿಗಳು ಯಾರೂ ಇದಕ್ಕಾಗಿ ಮನವಿ ಮಾಡಿಲ್ಲ ಎಂಬ ತಪ್ಪು ಸಂದೇಶವನ್ನು ಹರಡುತ್ತಿದ್ದಾರೆ ಇದು ಸರಿಯಲ್ಲ ಎಂದರು.

Click Here

ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮರಳುಗಾರಿಕೆ ಪುನರಾರಂಭಿಸಲು ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಉಡುಪಿ, ಮಂಗಳೂರು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಸಭೆ ನಡೆಸಿದ ಬಳಿಕ ಅ.೧೬ರ ಒಳಗೆ ಮರಳುಗಾರಿಕೆ ಪುನರಾರಂಭಿಸುವ ಭರವಸೆಯನ್ನು ಸ್ವತಃ ಮುಖ್ಯಮಂತ್ರಿಗಳೇ ನೀಡಿದ್ದಾರೆ. ಅಲ್ಲಿಯ ತನಕ ಬಡವರ ಮನೆ ಕಟ್ಟಲು ಮರಳು ಸಾಗಿಸಲು ತೊಂದರೆ ಕೊಡಬೇಡಿ ಎಂದು ಮೌಖಿಕ ಆದೇಶ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮಖ್ಯಮಂತ್ರಿಗಳ ಮಾತನ್ನೇ ಕೇಳುತ್ತಿಲ್ಲ. ಮುಖ್ಯಮಂತ್ರಿ ಹೇಳಿದ ಮಾತನ್ನೇ ಜಿಲ್ಲಾಧಿಕಾರಿಗಳಿಗೆ ಅನುಷ್ಠಾನಕ್ಕೆ ತರಲು ಸಾಧ್ಯವಾಗದಿದ್ದರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮೇಲೋ, ಉಸ್ತುವಾರಿ ಸಚಿವರು ಮೇಲೋ ಅಥವಾ ಮುಖ್ಯಮಂತ್ರಿಗಳು ಮೇಲೋ ಎಂದು ಪ್ರಶ್ನಿಸಿದ ಅವರು ಮರಳು ಸಮಸ್ಯೆ ಬಗೆಹರಿಯುವ ತನಕ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿಯಲಿದೆ ಎಂದರು.

ಸಿದ್ಧರಾಮಯ್ಯನವರ ಸರಕಾರವಿದ್ದಾಗ ಮೀನುಗಾರರ ಮಹಿಳೆಯರಿಗೆ ಬಡ್ಡಿರಹಿತ ಹಾಗೂ ೨% ಬಡ್ಡಿದರದಲ್ಲಿ ನೀಡಲಾಗಿದ್ದ ಸಾಲಕ್ಕೆ ಈವರೆಗೆ ಸಬ್ಸಿಡಿ ನೀಡಿಲ್ಲ. ಶೆಂದಿ ತೆಗೆದು ಬದುಕು ಬಿಲ್ಲವ ಸಮಾಜದ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದೆಂಬ ಭರವಸೆ ನೀಡಿದರೆ ಹೊರತು ಅನುಷ್ಠಾನಕ್ಕೆ ಬಂದಿಲ್ಲ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಿಜೆಪಿ ಪಕ್ಷದ ನಾಯಕರು, ಶಾಸಕರುಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳೀನ್‌ಕುಮಾರ್ ಕಟೀಲು, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್. ಪ್ರಭಾರಿ ಉದಯಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಶ್ರೀನಿವಾಸ ನಾಯ್ಕ್, ಬಾಲಚಂದ್ರ ಭಟ್, ದೀಪಕ್‌ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್ ಮೊದಲಾದವರು ಉಪಸ್ಥಿತದ್ದರು.

 

Leave a Reply

Your email address will not be published. Required fields are marked *

eighteen − 10 =