ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರಾಗಿ ವೆಂಕಟ ರಾವ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್: ಕರ್ನಾಟಕ ಸಂಘ ಕತಾರ್‌ನ 2018-19ನೇ ಸಾಲಿಕ ಅಧ್ಯಕ್ಷ ಸ್ಥಾನದ ಹಾಗು ಹೊಸ ಸಮಿತಿಯ ಚುನಾವಣೆ ಐಸಿಸಿಯಲ್ಲಿ ಜರುಗಿತು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವೆಂಕಟ ರಾವ್ ಅವರು, ನಾಗೇಶ್ ರಾವ್ ವಿರುದ್ಧ ಹೆಚ್ಚು ಮತ ಪಡೆದು ಮುಂದಿನ 2 ವರ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ಅಧ್ಯಕ್ಷ ಸ್ಥಾನಕ್ಕೆ 2 ಅಭ್ಯರ್ಥಿಗಳ ಹೆಸರು ನೋಂದಾವಣೆ ಗೊಂಡಿದ್ದು, ಹಾಗೇನೇ ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಒಟ್ಟು ೧೫ ಸ್ಪರ್ದಿಗಳ ಹೆಸರು ಚುನಾವಣೆಗೆ ನಾಮಾಂಕಿತ ಗೊಂಡಿತ್ತು.

ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಪಟ್ಟಿಗೆ 10 ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಮತ ಮುಖಾಂತರ ಕಾರ್ಯಕಾರಿ ಸಮಿತಿಗೆ ರವಿ ಶೆಟ್ಟಿ, ದಿನೇಶ್ ಗೌಡ, ಸಂದೀಪ್ ರೆಡ್ಡಿ, ಮುರಳೀಧರ್ ರಮಾನಾಥ್ ರಾವ್, ಅನಿಲ್ ಕುಮಾರ್ ಬೋಳೂರ್, ಮಣಿಹಳ್ಳ ಯೋಗೀಶ್ ಪೈ, ಅಶ್ವಿನ್ ಪ್ರಸನ್ನ ಕುಮಾರ್, ಶಶಿಧರ್ ಹೆಬ್ಬಾಳ್ ಚುನಾಯಿತರಾದರು. ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಆಶಾ ನಂಜಪ್ಪ ಹಾಗು ರಶ್ಮಿ ಜಯರಾಮ್ ಅವಿರೋಧವಾಗಿ ಆಯ್ಕೆಗೊಂಡರು.

ಸಂಘದ ನಿರ್ಗಮಿತ ಅಧ್ಯಕ್ಷ ಹೆಚ್.ಕೆ ಮಧು ಅವರು ಕಳೆದ ಅವಧಿಯಲ್ಲಿ ಸಂಘಕ್ಕೆ ದುಡಿದ ಹಾಗು ಸಹಾಯ ವಿತ್ತ ಎಲ್ಲ ಸಂಘದ ಕಾರ್ಯಕಾರಿ ಸದಸ್ಯರಿಗೆ ಧನ್ಯವಾದ ತಿಳಿಸುತ್ತ ಇನ್ನು ಕೂಡ ಸಂಘವನ್ನು ಯಶಸ್ಸಿನೆಡೆಗೆ ಮುನ್ನಡೆಸಲು ಸಹಕರಿಸಬೇಕಾಗಿ ವಿನಂತಿಸಿದರು. ಭಾರತೀಯ ಸಾಂಸ್ಕೃತಿಕ ಕಚೇರಿ ಮುಖಾಂತರ ರಚಿಸಿದ ‘ಚುನಾವಣಾ ಸ್ವಯಂ ಸೇವಕರ ತಂಡ ನಡೆಸಿದ ಚುನಾವಣಾ ಪ್ರಕ್ರಿಯೆ ಜನರ ಪ್ರಶಂಸೆಗೆ ಪಾತ್ರವಾಯಿತು.

 

Leave a Reply

Your email address will not be published. Required fields are marked *

3 × four =