ಕಲೆಯಲ್ಲಿ ಆಸಕ್ತಿ ಇದ್ದರೆ ಮಾತ್ರ ಪರಿಣತಿ: ಮುಕ್ತ ಕಾಟೂನು ಕ್ಲಾಸು ಉದ್ಘಾಟಿಸಿ ರೂಪಾ ಶೆಣೈ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಸಕ್ತಿ ಇದ್ದರೆ ಆಯಾ ಕ್ಷೇತ್ರದಲ್ಲಿ ಪರಿಣತರಾಗಿಲು ಸಾಧ್ಯವಿದೆ. ಕೈಗೆತ್ತಿಕೊಳ್ಳುವ ಕಾರ್ಯದ ಬಗೆಗೆ ನಿರಂತರವಾದ ಪರಿಶ್ರಮ ಗೆಲುವು ಸುಲಭವಾಗಲಿದೆ ಎಂದು ಕುಂದಾಪುರ ವೆಂಕಟರಮಣ ಶಾಲೆಯ ಪ್ರಾಂಶುಪಾಲೆ ರೂಪಾ ಶೆಣೈ ಹೇಳಿದರು.

Call us

Call us

ಕುಂದಾಪುರದ ಕಲಾಮಂದಿರದಲ್ಲಿ ಜರುಗುತ್ತಿರುವ ನಾಲ್ಕು ದಿನಗಳ ಕಾರ್ಟೂನು ಹಬ್ಬದಲ್ಲಿ ’ಮುಕ್ತ ಕಾರ್ಟೂನು ಕ್ಲಾಸು’ ಕಾರ್ಟೂನು ಕಾರ್ಯಾಗಾರ ಹಾಗೂ ಕಾರ್ಟೂನು ಸ್ವರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಗಳು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಮಕ್ಕಳಿಗೆ ಬಹುಬೇಗನೆ ಅಥವಾಗುವಂತೆ ಮಾಡುತ್ತದೆ. ಚಿತ್ರ ಬಿಡಿಸುವುದರಿಂದ ಏಕಾಗ್ರತೆ, ಕ್ರೀಯಾಶೀಲತೆ ಹೆಚ್ಚುವುದಲ್ಲದೇ ಭವಿಷ್ಯದಲ್ಲೊಂದು ಸ್ವಷ್ಟ ಗುರಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಮಂಜುನಾಥ ಚಾಂದ್ ತ್ರಾಸಿ ಮಾತನಾಡಿ ಕಾರ್ಟೂನು ರಚಿಸಲು ರೇಖೆಗಳಷ್ಟೇ ಸಾಲದು. ಉತ್ತಮ ಭಾಷೆ, ಬುದ್ಧಿ ಇರಬೇಕು. ಕಾರ್ಟೂನು ಒಂದು ಪತ್ರಿಕೆಯ ಸಂಪಾದಕೀಯದಷ್ಟೇ ಪ್ರಭಾವಶಾಲಿಯಾದ ಮಾಧ್ಯಮವಾಗಿದೆ ಎಂದರು.

Call us

Call us

ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಸಿಸ್ಟಂಟ್ ಗವರ್ನ್‌ರ್ ಗಣೇಶ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು.

ವಿಜಯಕರ್ನಾಟಕ ಪತ್ರಿಕೆಯ ವ್ಯಂಗ್ಯಚಿತ್ರಕಾರ ಸಂತೋಷ್ ಸಸಿಹಿತ್ಲು ಅವರನ್ನು ಅಭಿನಂದಿಸಲಾಯಿತು. ಪ್ರಭಾತ್ ಕಲ್ಕುರಾ ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ್ ಗಂಗೊಳ್ಳಿ ಪರಿಚಯ ಪತ್ರ ವಾಚಿಸಿದರು. ಕೇಶವ ಸಸಿಹಿತ್ಲು ಧನ್ಯವಾದಗೈದರು. ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ ಅವರಿಂದ ವಿದ್ಯಾರ್ಥಿಗಳಿಗೆ ಮುಕ್ತ ಕಾಟೂನು ಕ್ಲಾಸು ಬಳಿಕ ಮಾಯಾ ಕಾಮತ್ ಹಾಗೂ ಕಾರ್ಟೂನು ಮೊಗ್ಗು ಕಾರ್ಟೂನು ಸ್ವರ್ಧೆ ಜರುಗಿತು.

cartoon-habba-2016-mukta-cartoonu-clasu-1 cartoon-habba-2016-mukta-cartoonu-clasu-6 cartoon-habba-2016-mukta-cartoonu-clasu-7cartoon-habba-2016-mukta-cartoonu-clasu-8cartoon-habba-2016-mukta-cartoonu-clasu-5 cartoon-habba-2016-mukta-cartoonu-clasu-10 cartoon-habba-2016-mukta-cartoonu-clasu-11 cartoon-habba-2016-mukta-cartoonu-clasu-12 cartoon-habba-2016-mukta-cartoonu-clasu-4 cartoon-habba-2016-mukta-cartoonu-clasu-9cartoon-habba-2016-mukta-cartoonu-clasu-3 cartoon-habba-2016-mukta-cartoonu-clasu-2

Leave a Reply

Your email address will not be published. Required fields are marked *

5 × 2 =