ಪೊಳ್ಳು ಕ್ರಾಂತಿಕಾರಿ ಮಿಸ್ಟರ್ ಕನ್ಹಯ್ಯಗೊಂದು ಬಹಿರಂಗ ಪತ್ರ – ಕಮ್ಲೇಶ ನರ್ವಾನಾ

Click Here

Call us

Call us

ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಕನ್ಹಯ್ಯ ಕುಮಾರ್‌ಗೆ ಜೆಎನ್‌ಯುವಿನ ಹಳೆ ವಿದ್ಯಾರ್ಥಿನಿ ಹಾಗೂ ಹಾಲಿ ಪ್ರೊಫೆಸರ್ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಮಹಿಳೆಯರ ಗೌರಕ್ಕಾಗಿ ಹೋರಾಡಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕನ್ಹಯ್ಯನ ಅಸಲಿ ಮುಖವನ್ನು ತೆರೆದಿಡುತ್ತಾ ಒಂದಿಷ್ಟು ಪ್ರಶ್ನೆಗನ್ನು ಆತನ ಮುಂದಿಟ್ಟಿದ್ದಾರೆ. ಓಮ್ಮೆ ಓದಿ.

Call us

Call us

Visit Now

***

Click here

Click Here

Call us

Call us

ಕಮ್ಲೇಶ ನರ್ವಾನಾ : ಹೇಳಿಕೇಳಿ ಇದು ಬಹಿರಂಗ ಪತ್ರಗಳ ಕಾಲ. ಟಿವಿ ನಿರೂಪಕರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರೂ ತಮ್ಮ ವಿಚಾರ-ಆತಂಕಗಳನ್ನು ಹೇಳಿಕೊಳ್ಳುವುದಕ್ಕೆ ಮೋದಿ, ಸ್ಮೃತಿ ಇರಾನಿ, ರವೀಶ್ ಕುಮಾರ್ ಹೀಗೆ ಎಲ್ಲರಿಗೂ ಬಹಿರಂಗ ಪತ್ರಗಳನ್ನು ಬರೆಯುತ್ತಿದ್ದಾರೆ. ನಾನೂ ಸಹ ಇದೇ ಮಾರ್ಗವನ್ನು ಅನುಸರಿಸಿ ನನ್ನ ವ್ಯಥೆಗೊಂಡಿರುವ ಹೃದಯವನ್ನು ಸರಿಮಾಡಿಕೊಳ್ಳುವುದಕ್ಕೆ ಬಯಸುತ್ತೇನೆ.

ನನ್ನ ಜೆಎನ್‌ಯು ಸಮುದಾಯವೆಲ್ಲ ಒಟ್ಟುಗೂಡಿ ಒಬ್ಬ ಪೊಳ್ಳು ಕ್ರಾಂತಿಕಾರಿಯನ್ನು ಸೃಷ್ಟಿಸುತ್ತಿರುವುದನ್ನು ನೋಡಿ ಈ ಪತ್ರ ಬರೆಯಲೇಬೇಕಾಗಿದೆ. ಜೆಎನ್‌ಯು ವಿದ್ಯಾರ್ಥಿ ಸಂಘಟನೆ ನಾಯಕ ಮಿ. ಕನ್ಹಯ್ಯ ಹಾಗೂ ಆತನನ್ನು ಈ ಶತಮಾನದ ಭಗತ್ ಸಿಂಗ್ ಅಂತ ಸಾಬೀತುಗೊಳಿಸುವುದಕ್ಕೆ ಒಟ್ಟಾಗಿರುವವರಿಗೆ ನಾನು ಈ ಪತ್ರ ಬರೆಯುತ್ತಿದ್ದೇನೆ. (ಕುಂದಾಪ್ರ ಡಾಟ್ ಕಾಂ)

ನನಗೆ ಈ ಪತ್ರ ಬರೆಯುವ ಅರ್ಹತೆ ಏಕಿದೆ ಎಂದರೆ, ಜೆಎನ್‌ಯುದ ಈ ಹೊಸ ಚೆ ಗೆವೆರಾನ ನಿಜಮುಖವನ್ನು ನಾನು ಕಂಡಿದ್ದೇನೆ ಹಾಗೂ ಅದನ್ನು ಬಹಿರಂಗಪಡಿಸದೇ ಬಿಡಲಾರೆ. ಜೆಎನ್‌ಯು ಕ್ಯಾಂಪಸ್ಸಿನ ರಸ್ತೆ ಮೇಲೆ ಈ ಕನ್ಹಯ್ಯ ಎಂಬ ಪುಂಡ ಉಚ್ಚೆ ಹೊಯ್ಯುತ್ತಿದ್ದ ಸಂದರ್ಭದಲ್ಲಿ, ಕಳೆದ ವರ್ಷ ಜೂನ್ ನಲ್ಲಿ ಈತನೊಂದಿಗೆ ಮೊದಲ ಮತ್ತು ಕೊನೆಯ ಭೇಟಿ ಆಯಿತು. ರಸ್ತೆಯಲ್ಲಿ ಮೂತ್ರ ಮಾಡುತ್ತಿರುವುದಕ್ಕೆ ನಾನು ಆಕ್ಷೇಪಿಸಿದಾಗ, ಆತ ಕ್ಷಮೆ ಕೇಳುವುದರ ಬದಲು ನನ್ನ ಮೇಲೆ ಕೂಗಾಡಿದ. ಅಷ್ಟೇ ಅಲ್ಲ, ಇದರ ಪರಿಣಾಮ ನೆಟ್ಟಗಿರೋಲ್ಲ ಅಂತ ಹೆದರಿಸಿದ್ದಲ್ಲದೇ, ನಾನು ಮನೋವೈದ್ಯರ ಚಿಕಿತ್ಸೆ ತೆಗೆದುಕೊಳ್ಳಬೇಕು ಅಂತ ನಿಂದಿಸಿದ. ಆಗ ಜೆಎನ್‌ಯುದವಳೇ ಆಗಿದ್ದ ನಾನು, ವಿಶ್ವವಿದ್ಯಾಲಯದ ಶಿಸ್ತುಪಾಲಕರ ಬಳಿ 2015ರ ಜೂನ್ ನಲ್ಲಿ ದೂರು ದಾಖಲಿಸಿದೆ. ವಿಚಾರಣೆಯ ಬಳಿಕ ಮುಖ್ಯ ಶಿಸ್ತುಪಾಲಕರು ಹಾಗೂ ಜೆ ಎನ್ ಯುದ ವೈಸ್ ಚಾನ್ಸೆಲರ್ ಇಬ್ಬರೂ ‘ಆತನ ವರ್ತನೆ ಜೆ ಎನ್ ಯು ವಿದ್ಯಾರ್ಥಿಗೆ ತಕ್ಕುದಾಗಿ ಇರಲಿಲ್ಲ’ ಎಂಬ ತೀರ್ಮಾನಕ್ಕೆ ಬಂದು 3 ಸಾವಿರ ರೂಪಾಯಿಗಳ ದಂಡ ವಿಧಿಸಿದರು.

ಈ ಹಿನ್ನೆಲೆಯಲ್ಲಿ ಕನ್ಹಯ್ಯ ಮತ್ತು ಆತನ ಬೆಂಬಲಿಗರಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳುವುದಕ್ಕಿದೆ. ಇದಕ್ಕೂ ಮೊದಲು ಒಂದು ಮಾತು ಸ್ಪಷ್ಟಪಡಿಸಿಬಿಡ್ತೇನೆ. 7 ವರ್ಷ ಜೆ ಎನ್ ಯುದಲ್ಲಿ ಓದಿದವಳು ಹಾಗೂ 11 ವರ್ಷ ಈ ಸಂಸ್ಥೆಯೊಂದಿಗೆ ಬಾಂಧವ್ಯ ಇರಿಸಿಕೊಂಡವಳು ನಾನು. ಹೀಗಾಗಿ ಅಲ್ಲಿನ ಚರ್ಚಾ ಮುಕ್ತತೆಯ ವಾತಾವರಣದ ಬಗ್ಗೆ ಬಹಳ ಗೌರವವಿದೆ. ಜೆಎನ್‌ಯು ಎಂಬ ಉಟೋಪಿಯಾ ಪ್ರಪಂಚದಿಂದ ಸಾಕಷ್ಟು ಕಲಿತಿದ್ದೇನೆ. ಇಷ್ಟು ಹೇಳಿ, ಕೆಲವನ್ನು ಪ್ರಶ್ನಿಸುವೆ. (ಕುಂದಾಪ್ರ ಡಾಟ್ ಕಾಂ)

ಮಿ. ಕನ್ಹಯ್ಯ ಫೆಬ್ರವರಿ 9ರ ತನ್ನ ಮಾತಿನಲ್ಲಿ, ತಾನು ಮಹಿಳೆಯರ ಗೌರವಕ್ಕಾಗಿ ಹೇಗೆ ಹೋರಾಡಿದೆ ಅಂತ ವಿವರಿಸಿರುವುದು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟವಾಗಿದೆ. ನಾನು ಕೇಳಲಿಕ್ಕಿದೆ? ಮಿಸ್ಟರ್ ಕನ್ಹಯ್ಯ, ಮಹಿಳೆಯರ ಗೌರವ ಎಂಬ ಪದದ ಒಂದು ಅಕ್ಷರವನ್ನಾದರೂ ನೆಟ್ಟಗೆ ತಿಳಿದುಕೊಂಡಿರುವಿರಾ? ರಸ್ತೆ ಮೇಲೆ ಮೂತ್ರ ಮಾಡಬೇಡ ಅಂತ ಹೆಣ್ಣೊಬ್ಬಳು ನಿನ್ನನ್ನು ಕೇಳಿದಾಗ (ನೀನು ಶೌಚಾಲಯದ ಹತ್ತಿರದಲ್ಲೇ ಇದ್ದೆ ಹಾಗೂ ನಿನ್ನ ಸ್ನೇಹಿತರ ಕಾರು ಅಲ್ಲಿಗೆ ಒಯ್ಯುವುದಕ್ಕೆ ಪಕ್ಕದಲ್ಲೇ ಲಭ್ಯವಿತ್ತು) ನೀನು ಆಕೆಯ ಎದುರು ಕೂಗಾಡಿದೆ. ಬಾಯ್ಮುಚ್ಚಿಕೊಳ್ಳುವಂತೆ ಆಕೆಯನ್ನು ಬೆದರಿಸಿದೆ. ಆಕೆಯನ್ನು ನಿಂದಿಸಿ, ಅವಮಾನಿಸಿ, ಮೆಂಟಲ್ ಆಸ್ಪತ್ರೆಗೆ ಹೋಗು ಅಂತ ಬಯ್ದೆ. (ಇದೇನನ್ನು ತೋರಿಸುತ್ತೆ ಅಂದ್ರೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದು, ನಿನ್ನ ಖಾಸಗಿ ಅಂಗವನ್ನು ರಸ್ತೆಯಲ್ಲಿ ತೆರೆದಿಡುವುದು ಇವೆಲ್ಲ ನಿನಗೆ ತುಂಬ ಮಾಮೂಲಿನ ಸಂಗತಿ). ಮಹಿಳಾ ಗೌರವವನ್ನು ಎತ್ತಿಹಿಡಿಯೋದು ಅಂದ್ರೆ ಹೀಗೇನಾ?

ಸಾರ್ವಜನಿಕವಾಗಿ ಉಚ್ಚೆ ಹೊಯ್ಯೋದು, ಧೂಮಪಾನ ಮಾಡೋದು ನಿನ್ನ ಸ್ವಾತಂತ್ರ್ಯ ಅಂತ ಸಾಧಿಸಿದ್ದೆ. ನಿನ್ನ ಸ್ವಾತಂತ್ರ್ಯದ ಪರಿಕಲ್ಪನೆ ಇಷ್ಟೇನಾ? ನಿನ್ನ ರಾಜಕೀಯ ಮತ್ತು ಕ್ರಾಂತಿಕಾರಕ ಸಿದ್ಧಾಂತದ ಪೊಳ್ಳುತನವನ್ನು ತೋರಿಸುತ್ತದಿದು. ಕ್ರಾಂತಿ ಮತ್ತು ಸ್ವಾತಂತ್ರ್ಯಕ್ಕೆ ವ್ಯಾಖ್ಯೆ ಏನು ಹೇಳು? ರಸ್ತೆ ಮೇಲೆ ಮೂತ್ರ ಮಾಡೋದು, ಧೂಮಪಾನ ನಿಷೇಧ ವಲಯದಲ್ಲಿ ಸೇದೋದು ಸ್ವಾತಂತ್ರ್ಯ ಅಲ್ಲವಲ್ಲ.

ನಿನ್ನ ಭಾಷಣಗಳಲ್ಲಿ ನೀನು ಬಡ ಕುಟುಂಬದಿಂದ ಬಂದಿರುವುದಾಗಿ, ಅಮ್ಮನ ತಿಂಗಳ ದುಡಿಮೆ 3 ಸಾವಿರ ರುಪಾಯಿಗಳಿರುವುದಾಗಿ ಹೇಳುತ್ತಿರುವೆ. ಮಿ.ಕ್ರಾಂತಿಕಾರಿ? ನೀನು ನಿಜಕ್ಕೂ ನಿನ್ನಮ್ಮನ ದುಡಿಮೆಯ ಹೋರಾಟವನ್ನು ಗೌರವಿಸುವವನೇ ಆಗಿದ್ದರೆ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದಕ್ಕೆ, ಹೆಣ್ಣನ್ನು ನಿಂದಿಸುವುದಕ್ಕೆ ಅದೇ 3 ಸಾವಿರ ರುಪಾಯಿಗಳ ದಂಡ ಭರಿಸುವ ಸ್ಥಿತಿ ಏಕೆ ತಂದುಕೊಳ್ಳುತ್ತಿದ್ದೆ? ನಾನೂ ಬಡ ಕುಟುಂಬದಿಂದ ಬಂದವಳೇ. ನನ್ನ ತಾಯಿ ಕೃಷಿ ಕಾರ್ಮಿಕಳಾಗಿಯೇ ನನ್ನ ಸಹಿತ ನಾಲ್ವರು ಮಕ್ಕಳನ್ನು ಬೆಳೆಸಿದಳು. ಹೆಣ್ಣುಮಕ್ಕಳ ಗೌರವ ಏನು ಹಾಗೂ ಅದನ್ನು ಕಾಪಾಡಿಕೊಳ್ಳುವುದಕ್ಕೆ ಅವರೆಷ್ಟು ಕಷ್ಟ ಪಡ್ತಾರೆ ಅಂತ ನಂಗೆ ಗೊತ್ತು ಕೇಳು. ನಿನ್ನಂಥವರು ರಸ್ತೆ ಮೇಲೆ ಮೂತ್ರಕ್ಕೆ ನಿಲ್ಲುತ್ತಾರಲ್ಲ, ಅಂಥವರಿಂದ ನನ್ನಂಥವರು, ನನ್ನ ಸ್ತ್ರೀ ಸಹಪಾಠಿಗಳು ಅಸುರಕ್ಷತೆ ಅನುಭವಿಸುತ್ತೇವೆ. (ಸ್ವಚ್ಛತೆ ವಿಚಾರ ಬೇರೆ). ಸಾರ್ವಜನಿಕವಾಗಿ ಮೂತ್ರ ಮಾಡುವ ನೆಪ ಮಾಡಿಕೊಂಡು ಹೆಣ್ಣನ್ನು ಹೇಗೆ ದಾಳಿಗೀಡುಮಾಡಲಾಗುತ್ತದೆ ಅನ್ನೋದನ್ನು ನಾನು ನೋಡಿದ್ದೇನೆ. ಇದನ್ನು ನಾನವತ್ತು ನಿನಗೆ ವಿವರಿಸಬೇಕನ್ನುವಷ್ಟರಲ್ಲೇ ನಿನ್ನ ಕ್ಷುಲ್ಲಕ ಪುರುಷಾಹಂಕಾರ ಆರ್ಭಟಿಸಿತು!

ಇದನ್ನು ಬರೆಯುತ್ತ ನಾನು ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಸರ್ಕಾರವನ್ನು ಟೀಕಿಸುವುದು ಬೇರೆ, ಕನ್ಹಯ್ಯನನ್ನು ಭಗತ್ ಸಿಂಗ್ ಗೆ ಸಮನಾದ ಕ್ರಾಂತಿಕಾರಿ ಅಂತ ಬಿಂಬಿಸೋದು ಬೇರೆ. ಆತ ವಿದ್ಯಾರ್ಥಿಯಂತೆ ನಡೆದುಕೊಳ್ಳುತ್ತಿಲ್ಲ, ಅವಕಾಶವಾದಿ ರಾಜಕಾರಣಿಯಂತಿದ್ದಾನೆ. ಕೆಲ ಟಿವಿ ವಾಹಿನಿಗಳು, ಪತ್ರಿಕೆಗಳು ಕನ್ಹಯ್ಯನ ಬಡ ಕುಟುಂಬ ಹಿನ್ನೆಲೆ ಹಾಗೂ ಆತ ಕಮ್ಯುನಿಸ್ಟ್ ನೇತಾರ ಎ. ಬಿ. ಬರ್ಧನ್ ಹತ್ತಿರ ಶಾಲಾ ಬಾಲಕನಾಗಿದ್ದಾಗ ಪ್ರಶಸ್ತಿ ಸ್ವೀಕರಿಸುತ್ತಿರೋ ಚಿತ್ರವನ್ನಿಟ್ಟುಕೊಂಡು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಬದ್ಧ ಹೀರೋ ಅಂತ ಸಾರುತ್ತಿವೆ. ‘ಕಮ್ಯುನಿಸ್ಟ್ ಸಿದ್ಧಾಂತವು ಲಿಂಗ ಸಮಾನತೆ ಬಗ್ಗೆ ಹೇಳಿರೋದೇನು’ ಅಂತ ತುಸುವಾದರೂ ಗೊತ್ತಿದೆಯಾ ನಿನಗೆ? ನಾನೂ ಕಮ್ಯುನಿಸ್ಟ್ ಕುಟುಂಬದಿಂದಲೇ ಬಂದವಳು. ನನ್ನ ಸಹೋದರ ದಿವಂಗತ ಕಾಮ್ರೆಡ್ ರಾಜೆಂದರ್ ಗಿರಾ ಹರ್ಯಾಣ ಸಿಪಿಎಂನಲ್ಲಿ ಸಕ್ರಿಯರಾಗಿದ್ದವರು. ಜೆ ಎನ್ ಯು ವಿದ್ಯಾರ್ಥಿ ಚಳವಳಿಗಳಲ್ಲಿ ನಾನೂ ಭಾಗವಹಿಸಿದ್ದೆ. ಈ ಚಳವಳಿಗಳು ಲಿಂಗ ಸಮಾನತೆಗೆ ಪ್ರಾಮುಖ್ಯ ಕೊಡುತ್ತಿದ್ದದ್ದನ್ನೂ ಬಲ್ಲೆ. ಹರ್ಯಾಣದ ಪಿತೃಪ್ರಧಾನ ಸಮಾಜದ ನಡುವೆ ಕಾಮ್ರೆಡ್ ಜಗ್ವತಿ ಸಂಗ್ವಾನ್, ಕಾಮ್ರೆಡ್ ಪೂಲ್ ಸಿಂಗ್, ಮಾಸ್ಟರ್ ಶೇರ್ ಸಿಂಗ್, ಸತ್ಯಪಾಲ್ ಸಿವಾಚ್ ಇವರೆಲ್ಲ ಲಿಂಗ ಸಮಾನತೆಗೆ ಹೋರಾಡಿದ ಬಗೆಯನ್ನು ಹತ್ತಿರದಿಂದ ಕಂಡಿದ್ದೇನೆ.

ಅಂತೆಯೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದ ಜೆ ಎನ್ ಯುದ ನಿನ್ನಂಥ ಪುರುಷ ಮೂಲಭೂತವಾದಿಗಳನ್ನೂ ಎದುರಿಸಿದ್ದೇನೆ. ಅಂಥ ನೀನು ಈಗ ನಿನ್ನನ್ನೇ ಕ್ರಾಂತಿಕಾರಿ ಎದು ಘೋಷಿಸುತ್ತಿರುವೆ! (ಕುಂದಾಪ್ರ ಡಾಟ್ ಕಾಂ)

Click Here

ಕನ್ಹಯ್ಯನಂಥ ಸ್ತ್ರೀದ್ವೇಷಿಯನ್ನು ಜೆ ಎನ್ ಯು ಕ್ರಾಂತಿಕಾರಿ ಎಂದು ಹೇಳುತ್ತಿರುವುದು ಆಘಾತ ತಂದಿದೆ. ಜೆ ಎನ್ ಯು ಒಳ ಹೊರಗಿನ ಜನರೇ? ಸರ್ಕಾರವನ್ನು ಟೀಕಿಸಿ ತಪ್ಪಿಲ್ಲ. ಆತನ ಬಂಧನವನ್ನೂ ಪ್ರತಿಭಟಿಸಿ. ಆದರೆ ಪೊಳ್ಳು ಕ್ರಾಂತಿಕಾರಿಯೊಬ್ಬನನ್ನು ಏಕೆ ಸೃಷ್ಟಿಸುತ್ತಿರುವಿರಿ? ನಿಮ್ಮ ವಿಚಾರಶಕ್ತಿ ಕಾಪಿಟ್ಟುಕೊಳ್ಳಿ.

ಕಮ್ಲೇಶ್ ನರ್ವಾನಾ
ಜೆ ಎನ್ ಯು ಹಳೆ ವಿದ್ಯಾರ್ಥಿ
ದೆಹಲಿ ವಿವಿಯ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಎಕನಾಮಿಕ್ಸ್ ನಲ್ಲಿ ಸಹಾಯಕ ಪ್ರೊಫೆಸರ್

*******
Original Letter

Why to create ‘False Revolutionaries’ : My open letter to the ‘Upholder of Women Dignity’ Mr Kanhaiya

This spring will be known for open letters. Everyone, starting from renowned TV anchors to common students has been expressing their thoughts, concerns and fears through open letters to Modi, Irani, Ravish Kumar and many more. I also want to use this mean to give some ventilation to my grieving heart. I am writing this letter because I am disheartened to see the way twist and turns are given to JNU case. I am dejected and pained to see how my JNU community has ganged up to create false revolutionary. I am writing this letter to JNUSU president Mr Kanhaiya and other JNUites who are hell bend to portray him as the ‘Bhagat Singh’ of this century.

I am eligible to write this letter because I have an ugly encounter with this newly found Che Guevara of JNU and therefore I know his real face which I should definitely expose. I had my first and may be last encounter with this moron known as Kanahiya (the president of JNUSU) in June last year when he was urinating on road in JNU campus. When I objected, instead of saying sorry he not only shouted at me but also threatened me of dire consequence and suggested that I should take psychiatrist help. Being a JNUite, I filed a complained against him with JNU proctor office in June 2015. After enquiry, Chief Proctor and Vice- Chancellor of JNU found his behavior “So unbecoming of a JNU student” and fined Rs. 3000. Given this background, I have strong reasons to ask few questions to Kanahiya and his followers. However, before saying anything, I want to clarify that I was a student of JNU for 7 years and I have been associated with this institution for past 11 years. I respect this institution for its progressive culture. I appreciate JNU’s culture of debate and dialogue. I have learnt a lot at this utopian world. With this disclaimer, I would like to ask following equations.

• Mr Kanhiya talks about his fight for “Dignity of Women” in his post-9th February speech which was published in Economic and Political Weekly. I want to ask, do you really understand the D for Dignity of a female Mr. Kanhiya? Unzipping your private part in public and urinating on road—Are these your revolutionary tools to uphold a female’s dignity. When you were requested by a female not to urinate on road (as you were close enough to use a toilet, with a friend with a car to drive you there), you shouted at her, threatened her to shut up, called her by names, insulted her and asked her to go to mental hospital to treat herself (which shows this act of public urination and uncovering your private part on road is completely normal for you), Is this the way you uphold a female’s dignity?

• You claimed that public urination and Sutta Pina (public smoking) as your freedom right. So these are your notion and understanding of right to freedom? This underlines shallowness of your political and revolutionary ideology. Please update your definition of Revolution and freedom. Freedom is not just about “Urination on Road” and ‘Smoking in No Smoking Zone’.

• In your speech, you informed that you came from a very poor family where your mother’s monthly salary is 3000 rs per month. So Mr. Revolutionary! Do you really value her struggle?? You spend 3000 bucks as fine for ‘Public Urination’ and “harassing and threatening a girl’! Stop making a hue and cry about poverty of your family when you don’t even value their struggle. I also belong to a poor family. My mother has worked as an agriculture labourer for raising me and my 4 other siblings. I know what does “Dignity of female means.” We females, struggle at every step to uphold our dignity. When I see a male urinating in public place, I feel unsafe for me and my fellow females (forget about hygiene). I have seen how females are being molested on the pretext of public urination. This is what I tried to explain to you when your fragile male ego got hurt.

• When I am writing all this, I am not justifying, Government’s move. However “Criticizing Government” and “portraying Kanhiya as revolutionary like Bhagat Singh” are two different cases. I am very disappointed the way politics is being done. As VC and Chief Proctor addressed him, He is so unlike JNU student, such a hypocrite and opportunist politician. Many newspaper and news channels come up with Kanhiya’s family background and his school time pictures with Comrade Bardhan to show his life time commitment for communist ideology. Do you really understand “What is communist Ideology about gender equality?” I come from communist family. My brother Late Com. Rajender Ghira was active member of CPM, Haryana. I was associated with student movement in JNU. I have witnessed how JNU student movement is committed to the issue of “Gender Justice”. I have closely observed How CPM members like Comrade Jagmati Sangwan, Comrade Phool Singh, Master Sher Singh, Styapal Siwach are fighting for Gender Justice in patriarchal society of Haryana?

And then I faced the wrath of a public urinating male chauvinist like you in JNU who claims himself a revolutionary! I could not find any trace of communism ideology in your behavior.

I am shocked to see how a misogynist Like Kanhaiya is being hailed as Revolutionary.
People (JNUites and outside JNU)! Do criticize government; do criticize his arrest, but why to create fake sympathies by discussing his family background and by sharing his childhood pictures with Comrade Bardhan? What is the urgency of creating false revolutionaries? Please consider ‘what kind of message you are giving’! Keep your rationality intact.

Kamlesh Narwana
Ex-JNU Student
Assistant Professor
Institute of Home Economics
Delhi University

Leave a Reply

Your email address will not be published. Required fields are marked *

twenty + 17 =