ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯದ ವತಿಯಿಂದ ಶಿರೂರು, ಬೈಂದೂರು, ಕಿರಿಮಂಜೇಶ್ವರ ಹಾಗೂ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 125 ಆಶಾ ಕಾರ್ಯಕರ್ತರಿಗೆ ಎನ್-95 ಮಾಸ್ಕ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಾರ್ಯದರ್ಶಿ ರಾಘವೇಂದ್ರ ದೇವಾಡಿಗ, ಖಜಾಂಚಿ ಮಹಾಬಲ ಕೆ. ಶಿಕ್ಷಕರುಗಳಾದ ಪ್ರಭಾಕರ ಬಿಲ್ಲವ, ನಾಗರಾಜ ಶೇರುಗಾರ್, ವೆಂಕಪ್ಪ ಉಪ್ಪಾರ್, ಪ್ರಭಾಕರ ಎಚ್ ಮೊದಲಾದವರು ಇದ್ದರು. ಒಟ್ಟು 32,000 ಸಾವಿರ ರೂ. ಮೌಲ್ಯದ ಮಾಸ್ಕ್‌ಗಳನ್ನು ವಿತರಿಸಲಾಯಿತು./ಕುಂದಾಪ್ರ ಡಾಟ್ ಕಾಂ/