ಕತಾರ್:‌ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ನಾಗೇಶ್ ರಾವ್ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕತಾರ್‌: ಸತತವಾಗಿ 20 ವರ್ಷಗಳಿಂದ ಸೇವೆ, ಸಂಸ್ಕೃತಿಗಳ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ‘ಕರ್ನಾಟಕ ಸಂಘ ಕತಾರ್‌ನ 2020-2021 ಸಾಲಿನ ನೂತನ ಆಡಳಿತ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಮೈರ್ಪಾಡಿ ನಾಗೇಶ್ ರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Click Here

Call us

Call us

ಆಡಳಿತ ಸಮಿತಿ 2020-2021
ಮೈರ್ಪಾಡಿ ನಾಗೇಶ್ ರಾವ್ – ಅಧ್ಯಕ್ಷರು
ಅನೀಲ್ ಕುಮಾರ್ ಬೋಲೂರ್ – ಉಪಾಧ್ಯಕ್ಷರು
ಮುರಳಿಧರ್ ರಮನಾಥ್ ರಾವ್ – ಪ್ರಧಾನ ಕಾರ್ಯದರ್ಶಿ
ಲಕ್ಕಪ್ಪ ಲಕ್ಕೇಗೌಡ – ಖಜಾಂಚಿ
ಅಕ್ಷಯ ಶೆಟ್ಟಿ – ಸಾಂಸ್ಕೃತಿಕ ಕಾರ್ಯದರ್ಶಿ
ಸಂಜಯ್ ಕುದರಿ – ಕ್ರೀಡಾ ಕಾರ್ಯದರ್ಶಿ
ಕಿಶೋರ್.ವಿ – ಜಂಟಿ ಕಾರ್ಯದರ್ಶಿ ಮತ್ತು ಕನ್ನಡ ಸಂಬಂಧಿತ ಸಂಚಾಲಕರು
ಕುಮಾರಸ್ವಾಮಿ. ಸಿ.ಅರ್ – ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಸಂಚಾಲಕರು
ಸುಶೀಲ ಸುನೀಲ್ – ಮಹಿಳಾ ಸಂಚಾಲಕರು
ರಶ್ಮಿ ಜಯರಾಮ – ಮಕ್ಕಳ ಮತ್ತು ವಿಷೇಶ ಅವಶ್ಯಕತೆಗಳ ಸಂಚಾಲಕರು
ನೂರ್ ಅಹ್ಮದ್ – ಸದಸ್ಯತ್ವ ಮತ್ತು ನಿರ್ದೇಶಾಂಕ ಸಂಚಾಲಕರು

Click here

Click Here

Call us

Visit Now

ಅಧ್ಯಕ್ಷರ ಕಿರು ಪರಿಚಯ
ನಾಗೇಶ ರಾಯರು ಕತಾರಿನಲ್ಲಿ ಕಳೆದ 29 ವರ್ಷಗಳಿಂದ ವಾಸಿಸುತ್ತಿದ್ದು, ಕರ್ನಾಟಕ ಸಂಘ ಕತಾರಿನ ಸಂಸ್ಥಾಪಕ ಸದಸ್ಯರಲ್ಲೊಬ್ಬರು. ಪುತ್ತೊರು ಮೂಲದ ಇವರು, ಕತಾರಿನಲ್ಲಿ ಔಷದೀಯ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸ್ಥಾನದಲ್ಲಿ ಇವರು ಸಂಘದ ಹೆಸರು ಹಾಗೂ ಕೀರ್ತಿಯನ್ನು ಕತಾರಿನೆಲ್ಲೆಡೆ ಪ್ರವಹಿಸುವಲ್ಲಿ ಸಂಪೂರ್ಣವಾಗಿ ಶ್ರದ್ದೆ ಹಾಗೂ ಶ್ರಮವಹಿಸಲಿದ್ದಾರೆ. ಅತಿ ಹೆಚ್ಚು ಸದಸ್ಯರನ್ನು ಸಂಘದಲ್ಲಿ ಭರ್ತಿಮಾಡಿ, ಎಲ್ಲರನ್ನು ಕ್ರೀಡಾ, ಸಾಂಸ್ಕೃತಿಕ ಹಾಗೂ ಸಮಗ್ರ ಬೆಳವಣಿಗೆಯ ಹಾದಿಯಲ್ಲಿ ನಡೆಸಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.

ಕರ್ನಾಟಕ ಸಂಘ ಕತಾರ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಒಂದು ಅಂಗ ಸಂಸ್ಥೆಯಾಗಿದ್ದು, ಕತಾರಿನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಭಾರತೀಯ ಒಂದು ವೈವಿಧ್ಯಮಯ ಸಂಘಟನೆ. ಸುಮಾರು 800ಕ್ಕೊ ಹೆಚ್ಚು ಸದಸ್ಯರನ್ನು ಹೊಂದಿದ್ದು, ವಿವಿಧ ರೀತಿಯ ಅಂದರೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

Call us

Leave a Reply

Your email address will not be published. Required fields are marked *

20 + twelve =