ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಘ್ ಇದರ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶವು ಯುಎಐ ಬರ್ದುಬಾಯಿ ರೀಜೆಂಟ್ ಪ್ಯಾಲೇಸ್ ಹೋಟೆಲ್ನಲ್ಲಿ ಜರುಗಿತು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ನಮ್ಮ ಕುಂದಾಪ್ರ ಕನ್ನಡ ಬಳಗ ಸಂಘಟನೆಯನ್ನು ದೀಪ ಬೆಳಗಿ ಉದ್ಘಾಟಿಸಿದರು. ರಾಮೀ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ವರದರಾಜ ಶೆಟ್ಟಿ, ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಕ್ವಾಡಿ, ಚಿತ್ತಾರಿ ಗ್ರೂಫ್ ಆಫ್ ಕಂಪೆನಿ ಆಡಳಿತ ಪಾಲುದಾರ ಪಿ. ಸುಖಾನಂದ ಶೆಟ್ಟಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಉದ್ಯಮಿ ಹಮೀದ್, ಮುಂಬೈ ಉದ್ಯಮಿ ವೆಂಕಟೇಶ ಕಿಣಿ, ಮಂಜುನಾಥ ಬಿಲ್ಲವ, ಉದ್ಯಮಿ ಇಬ್ರಾಹಿಂ ಗಂಗೊಳ್ಳಿ, ಬಾಸುಮ ಕೊಡಗು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಸಾಧನಾ ದಾಸ್ ಸ್ವಾಗತಿಸಿ ಪ್ರಸಾವಿಕ ನುಡಿಗಳನ್ನಾಡಿದರು. ವಾಗ್ಮಿ ಪತ್ರಕರ್ತ ಅರುಣ್ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪ್ರ ಕನ್ನಡ ಬಳಗ:
ಗಲ್ಫ್ ರಾಷ್ಟ್ರದಲ್ಲಿ ನೆಲೆಸಿರುವ ಕುಂದಾಪ್ರ ಭಾಷಿಕರ ಕೂಡಿವಿಕೆ ಒಂದು ವೇದಿಕೆ ದೊರಕಿಸಿಕೊಡುವುದು. ಉದ್ಯೋಗ ಅರಿಸಿ ಬರುವ ಕುಂದಾಪುರಿಗರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವುದು, ಕುಂದಾಪುರ ಭಾಷೆಯ ಬದುಕು, ಕಲೆ ಸಾಹಿತ್ಯವನ್ನು ದಾಖಲಿಸುವುದು, ಭಾಷಿಕ ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ನೀಡುವುದು ಇದರ ಜೊತೆ ಜೊತೆಗೆ ಬಡ ವಿದ್ಯಾರ್ಥಿಗಳಿಗೆ, ಅಶಕ್ತರು ಹಾಗೂ ವಯೋವೃದ್ಧರಿಗೆ ನೆರವು ಸೇರಿದಂತೆ ಹಲವು ಪ್ರಮುಖ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಉದ್ದೇಶದೊಂದಿಗೆ ನಮ್ಮ ಕುಂದಾಪ್ರ ಕನ್ನಡ ಬಳಗವನ್ನು ಸ್ಥಾಪಿಸಲಾಗುತ್ತಿದೆ.
ಪೂರ್ಣ ಸುದ್ದಿ ಹಾಗೂ ಮತ್ತಷ್ಟು ಚಿತ್ರಗಳಿಗಾಗಿ ನಿರೀಕ್ಷಿಸಿ.
ಚಿತ್ರಗಳು: ಮಹದೇವ್ ಬೈಂದೂರು, ರೋಹಿತ್ ಕುಂದಾಪುರ