ದುಬೈ ಅಜ್ಮಾನ್‌ನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ 2ನೇ ವಾರ್ಷಿಕೋತ್ಸವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕುಂದಾಪುರ ಕನ್ನಡ ಭಾಷಿಕರ ಹೆಮ್ಮೆಯ ಸಂಸ್ಥೆಯ ಎಂದೆನಿಸಿಕೊಂಡಿರುವ ನಮ್ಮ ಕುಂದಾಪ್ರ ಕನ್ನಡ, ದುಬಾಯಿ ಇದರ ಎರಡನೇ ವಾರ್ಷಿಕೋತ್ಸವ ಸಮಾರಂಭ ಜೂನ್ 14ರಂದು ನಡೆಯಲಿದೆ.

Call us

Call us

Visit Now

ದುಬಾಯಿ ಅಜಮನ್‌ನ ಹ್ಯಾಬಿಟೆಟ್ ಸ್ಕೂಲ್ ತಲ್ಲಹ ಇಲ್ಲಿನ ನಡೆಯಲಿರುವ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕುಟುಂಬ ಮಿಲನ, ಸ್ನೇಹ ಮಿಲನ ಕಾರ್ಯಕ್ರಮಗಳು ನಡೆಯಲಿದ್ದು ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಯುಎಇ ರಾಮೀ ಗ್ರೂಪ್ ಆಫ್ ಹೋಟೆಲ್ ಮಾಲಿಕ ವರದರಾಜ ಶೆಟ್ಟಿ, ಸಮಾಜ ಸೇವಕ ಮಣೆಗಾರ್ ಮೀರಾ ಸಾಹೇಬ್, ಎಲಿಗೆಂಟ್ ಕಿಚನ್ ಇಕ್ಯೂಪ್‌ಮೆಂಟ್‌ನ ಮುಖ್ಯಸ್ಥ ದಿನೇಶ್ ದೇವಾಡಿಗ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Click here

Call us

Call us

ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡ ಉದ್ಯಮ ರತ್ನ ಪ್ರಶಸ್ತಿಯನ್ನು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಮುಖ್ಯಸ್ಥ ಪ್ರವೀಣ ಶೆಟ್ಟಿ ವಕ್ವಾಡಿ ಅವರಿಗೆ ಪ್ರದಾನಿಸಲಾಗುತ್ತಿದ್ದು, ಕುಂದಾಪ್ರ ಕನ್ನಡ ಭಾಷಾ ರತ್ನ ಪ್ರಶಸ್ತಿಯನ್ನು ಹಿರಿಯ ವಕೀಲ ಎಎಸ್‌ಎನ್ ಹೆಬ್ಬಾರ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಕುಂದಾಪ್ರ ಕನ್ನಡದ ಔದ್ಯಮಿಕ ಸಾಧನಾ ಪುರಸ್ಕಾರವನ್ನು ಗಲದಾರಿ ಸಮೂಹ ಸಂಸ್ಥೆಯ ಮಹಮ್ಮದ್ ಯಹ್ಯಾ ಖಾಜಿ ಅವರಿಗೆ ಪ್ರದಾನಿಸಲಾಗುತ್ತಿದೆ.

ಕಾರ್ಯಕ್ರಮದ ಆಕರ್ಷಣೆಯಾಗಿ ಬಿಗ್ ಬಾಸ್ ಖ್ಯಾತಿ ಧನರಾಜ್ ಅವರಿಂದ ಸಾಂಸ್ಕೃತಿಕ ಝಲಕ್, ಖ್ಯಾತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ಸೇರಿದಂತೆ ವಿವಿಧ ನೃತ್ಯ, ಸಂಗೀತ, ಹಾಸ್ಯ ಕಾರ್ಯಕ್ರಮಗಳು ಜರುಗಲಿದೆ.

ನಮ್ಮ ಕುಂದಾಪ್ರ ಕನ್ನಡ ಬಳಗ:
ದುಬೈನಲ್ಲಿ ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಕೆ ನಮ್ಮ ಕುಂದಾಪ್ರ ಕನ್ನಡ ಬಳಗದ್ದಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಂಕಷ್ಟದಲ್ಲಿರುವವರಿಗೆ ಸಹಾಯ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಕುಂದಾಪುರ ಭಾಷಿಗರನ್ನು ಒಗ್ಗೂಡಿಸುವುದು ಹಾಗೂ ಪರಸ್ಪರ ಭಾಂದವ್ಯ ಬೆಳೆಸುವುದು ಸಂಸ್ಥೆಯ ಧ್ಯೇಯವಗಿದೆ.

ನಮ್ಮ ಕುಂದಾಪ್ರ ಕನ್ನಡ ಸಂಸ್ಥೆಗೆ ವರದರಾಜ್ ಶೆಟ್ಟಿ ಪೋಷಕರಾಗಿದ್ದು, ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಹಾಗೂ ಮಣೆಗಾರ್ ಮೀರಾನ್ ಸಾಹೇಬ್ ಗೌರವಾಧ್ಯಕ್ಷರಾಗಿದ್ದಾರೆ. ಸಾಧನದಾಸ್ ಅಧ್ಯಕ್ಷರಾಗಿ, ದಿನೇಶ ದೇವಾಡಿಗ ಉಪಾಧ್ಯಕ್ಷರಾಗಿದ್ದು ಸುಧಾಕರ ಕಾರ್ಯದರ್ಶಿಗಳಾಗಿದ್ದಾರೆ. ಸುಜೀತ್ ಶೆಟ್ಟಿ ಖಜಾಂಚಿಯಾಗಿದ್ದಾರೆ.

 

Leave a Reply

Your email address will not be published. Required fields are marked *

sixteen − nine =