ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಅಧಿಕಾರ ಸ್ವೀಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆಯ ನೂತನ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕರಿಸಿದ್ದಾರೆ.

ಚಿಕ್ಕಮಂಗಳೂರು ಜಿಲ್ಲೆಯ ಸಖರಾಯಪಟ್ಟಣದವರಾದ ನಂಜಾ ನಾಯ್ಕ್ ಅವರು ಈ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 6 ತಿಂಗಳು ಪ್ರೊಬೆಷನರಿ ಎಸ್‌ಐ ಆಗಿ ಸೇವೆ ಸಲ್ಲಿಸಿದ್ದು, ಬಳಿಕ ಪಿಎಸ್‌ಐ ಆಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ವರ್ಷ ಮತ್ತು ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಪಿಎಸ್‌ಐ ಭೀಮಾಶಂಕರ ಅವರು ಶಿರಸಿ ಮಾರ್ಕೆಟ್ ಠಾಣೆಗೆ ವರ್ಗಾವಣೆಗೊಂಡ ನಂಜಾ ನಾಯ್ಕ್ ಎನ್. ಅವರು ಗಂಗೊಳ್ಳಿ ಠಾಣೆಯ ಪಿಎಸ್‌ಐಯಾಗಿ ನಿಯುಕ್ತಿಗೊಂಡಿದ್ದಾರೆ.

 

Leave a Reply

Your email address will not be published. Required fields are marked *

5 × one =