ನರೇಂದ್ರ ಎಸ್. ಗಂಗೊಳ್ಳಿಗೆ ರಾಷ್ಟ್ರೀಯ ಶಿಕ್ಷಕ ವೇತನ ಪುರಸ್ಕಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವೊಡಾಫೋನ್ ಫೌಂಡೇಶನ್ ವತಿಯಿಂದ ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಿಕ್ಷಕರಿಗಾಗಿ ಕೊಡಮಾಡುವ 2021ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ವೇತನ ಪುರಸ್ಕಾರವನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್. ಗಂಗೊಳ್ಳಿ ಅವರು ಪಡೆದುಕೊಂಡಿದ್ದಾರೆ.

Call us

Call us

ಈ ಬಾರಿ ಭಾರತದ 22 ರಾಜ್ಯಗಳಲ್ಲಿನ ಒಟ್ಟು 110 ಶಿಕ್ಷಕರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ. ಶಿಕ್ಷಕರ ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿನ ಬಹುಮುಖ ಪ್ರತಿಭೆಯ ಸಾಧನೆಗಳನ್ನು ಗಮನಿಸಿ ಹಾಗು ಅವರ ಶೈಕ್ಷಣಿಕ ಕೌಶಲ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.

Call us

Call us

Leave a Reply

Your email address will not be published. Required fields are marked *

8 − five =