ಆನಗಳ್ಳಿ ದತ್ತಾಶ್ರಮದಲ್ಲಿ ನರ್ಮದಾ ಲಿಂಗ ಪ್ರತಿಷ್ಠಾಪನೆ

Call us

Call us

ಕಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ಇಲ್ಲಿಗೆ ಸಮೀಪದ ಆನಗಳ್ಳಿಯ ಹೆಬ್ಬಾರ ಬೆಟ್ಟುವಿನ ಶ್ರೀ ದತ್ತಾಶ್ರಮ, ಶ್ರೀ ಆದಿ ಶಕ್ತಿ ಮಠದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಯ ವಿನಯ್‌ ಗುರೂಜಿ ಹಾಗೂ ದೆಹಲಿಯ ನಾಗ ಸಾಧುಗಳ ಪಂಥದ ರಾಷ್ಟ್ರೀಯ ಜೂನಾ ಅಖಾಡದ ಉಪಾಧ್ಯಕ್ಷ ಅಗಸ್ತ್ಯಗಿರಿ ಮಹಾರಾಜ್‌ ನೇತ್ರತ್ವದಲ್ಲಿ ಬ್ರಹತ್‌ ನರ್ಮದೇಶ್ವರ ಲಿಂಗದ ಪ್ರತಿಷ್ಠಾಪನೆ ನಡೆಯಿತು.

Call us

Call us

Visit Now

Click here

Call us

Call us

ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಬುಧವಾರ ಮುಂಜಾನೆಯಿಂದ ಶಂಕರನಾರಾಯಣದ ಶ್ರೀಶ ಜೋಯಿಸರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ನರ್ಮದಾ ಲಿಂಗಕ್ಕೆ ಹಾಲು, ತುಪ್ಪ, ಜೇನು, ಸಿಯಾಳ, ನೀರು, ರಕ್ತಚಂದನ, ಅರಶಿನ-ಕುಂಕುಮ, ಭಸ್ಮ, ಸಕ್ಕರೆ, ಕಬ್ಬಿನ ಹಾಲು ಸೇರಿದಂತೆ ಪುಣ್ಯ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ನೆರೆದ ಭಕ್ತಸಾಗರವು ಹರಹರ ಮಹಾದೇವ ಘೋಷಣೆಯನ್ನು ಅರ್ಪಿಸಿದರು. ಆದಿವಾಸ ಹೋಮ, ದತ್ತಾಭಿಷೇಕ, ಶತ ರುದ್ರಾಭಿಷೇಕ, ಪವನ ಹೋಮ, ದುರ್ಗಾಷಟಿ ಹೋಮ ಮೊದಲಾದ ಧಾರ್ಮಿಕ ಪೂಜೆ ನಡೆಯಿತು. ಕ್ಷೇತ್ರದ ವತಿಯಿಂದ ನಡೆದ ಅನ್ನ ಸಂತರ್ಪಣೆಯಲ್ಲಿ 7ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಕಂದಾಪ್ರ ಡಾಟ್ ಕಾಂ ಸುದ್ದಿ.

ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಜ್ಯೋತಿಷಿ ತಟ್ಟವಟ್ಟು ವಾಸುದೇವ ಜೋಯಿಸ, ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಆರ್.ಎಸ್.ಎಸ್. ಮುಖಂಡ ಸುಬ್ರಮಣ್ಯ ಹೊಳ್ಳ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಚಂದ್ರ ಗೌಡ ಜಯಪುರ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಆನಗಳ್ಳಿ ದತ್ತಾಶ್ರಮದ ಪ್ರವ್ರತ್ತಕರಾದ ಸುಭಾಷ್ ಪೂಜಾರಿ ಸಂಗಮ್, ಪರ್ವೀನ್ ಎಸ್. ಪೂಜಾರಿ, ಯಶೋಧಾ ಎಸ್. ಪೂಜಾರಿ, ಹರೀಶ್ ತೋಳಾರ್‍ ಕೊಲ್ಲೂರು, ಸಂಗಮ್ ಫ್ರೆಂಡ್ಸ್ ಸಂಗಮ್, ಪ್ರಗತಿ ಯುವಕ ಮಂಡಲ ಆನಗಳ್ಳಿ, ಗೆಳೆಯರ ಬಳಗ ಆನಗಳ್ಳಿ ಸಂಘಟನೆಯವರು ಸದಸ್ಯರು ಇದ್ದರು.

ಲಿಂಗ ಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನಾಗಾ ಸಾಧುಗಳು, ಸೀತಾರಾಮ ಪಂಥದ ಸಾಧುಗಳು, ಅಘೋರಿ ಬಾಬಾಗಳು, ಸಿದ್ಧರು, ಸಂನ್ಯಾಸಿಗಳು ಸೇರಿ 1,300 ಕ್ಕೂ ಮಿಕ್ಕಿ ಸಾಧು ಸಂತರು ಆಗಮಿಸಿದ್ದರು.

ಪರಶುರಾಮ ಸೃಷ್ಟಿಯಾದ ಕರಾವಳಿ ಭಾಗದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಪ್ರಕ್ರೀಯೆಗಳಿಗೆ ಹಿನ್ನೆಲೆಯಿದೆ. ಆನಗಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ದೇಶದ ವಿವಿಧ ಭಾಗಗಳಿಂದ ಸ್ವ ಇಚ್ಛೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಾಧು ಸಂತರು ಭಾಗವಹಿಸುತ್ತಿರುವುದು ಇಲ್ಲಿನ ಮಣ್ಣಿನ ಅಪೂರ್ವ ಯೋಗ ಫಲದ ಸಂಕೇತ. – ಬಿ.ಅಪ್ಪಣ್ಣ ಹೆಗ್ಡೆ. ಧಾರ್ಮಿಕ ಮುಖಂಡರು.

ಆನಗಳ್ಳಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ನರ್ಮದೇಶ್ವರ ಲಿಂಗ (ಬಾಣ ಲಿಂಗ) ಅಂದಾಜು ಏಳೂವರೆ ಅಡಿ ಎತ್ತರವಿದ್ದು, ದಕ್ಷಿಣ ಭಾರತದಲ್ಲಿ ಪ್ರತಿಷ್ಠೆಯಾಗಿರುವ ಮೊದಲ ದೊಡ್ಡ ಲಿಂಗ ಎನ್ನುವ ಮಾಹಿತಿ ಇದೆ. ಎಲ್ಲಾ ಜಾತಿ ವರ್ಗದವರಿಗೂ ಪೂಜೆಗೆ ಅವಕಾಶವಿದೆ.  – ಹರೀಶ್ ತೋಳಾರ್‌, ದತ್ತಾಶ್ರಮ ಆನಗಳ್ಳಿ.

Leave a Reply

Your email address will not be published. Required fields are marked *

12 − one =