ಮೂಲ ಸೌಕರ್ಯ ವಂಚಿತ ನಕ್ಸಲ್ ಪೀಡಿತ ಪ್ರದೇಶ ಕೊಡಾಬೈಲ್

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಸಾಕಷ್ಟು ಅಭಿವೃದ್ಧಿ ಹೊಂದಿದ ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳು ಅದೆಷ್ಟೋ ಕಡೆ ಇನ್ನೂ ಮೂಲಭೂತ ಸೌಕರ್ಯಗಳು ವಂಚಿತವಾಗಿವೆ. ದಬ್ಬಾಳಿಕೆ, ಪಾಳಗಾರಿಕೆಗಳ ನಡುವೆಯೂ ಭೂ ಮಾಲಕರು ಮೂಲಭೂತ ಸೌಕರ್ಯಗಳ ವಂಚನೆಗೆ ಇನ್ನೂ ಕಡಿವಾಣ ಹಾಕುತ್ತಲೇ ಇದ್ದಾರೆ ಎಂಬುದಕ್ಕೆ ತಾಲೂಕಿನ ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಬತ್ತು ಸಮೀಪದ ನಕ್ಸಲ್ ಪೀಡಿತ ಕೊಡಾಬೈಲ್ ಎನ್ನುವ ಪ್ರದೇಶದ ಸ್ಪಷ್ಟ ಉದಾಹರಣೆ.

Click Here

Call us

Call us

ಕೊಡಾಬೈಲಿನಲ್ಲಿ ಸುಮಾರು 25 ಮನೆಗಳಿವೆ. ಒಟ್ಟು ಮುನ್ನೂರಾ ಐವತ್ತೆರಡು ಜನ ವಾಸವಿದ್ದಾರೆ. ಆದರೆ ಇವರು ಸಂಪೂರ್ಣವಾಗಿ ಮೂಲಭೂತ ಸೌಕರ್ಯ ವಂಚಿತರಾಗಿದ್ದಾರೆ. ಈ ಪ್ರದೇಶಕ್ಕೆ ಬರಬೇಕಾದರೆ ಒಂದು ರಸ್ತೆ ನಿರ್ಮಾಣ ಇದುವರೆಗೂ ಸಾಧ್ಯವಾಗಿಲ್ಲ. ವಿಶೇಷವೆಂದರೆ ಈ ಪ್ರದೇಶದಲ್ಲಿ ರಸ್ತೆ ಇದೆ. ಆದರೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೊಬ್ಬರು ಆಕ್ಷೇಪ ಸಲ್ಲಿಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದೇ ಈ ಎಲ್ಲಾ ಸಮಸ್ಯೆಗೆ ಮೂಲ ಕಾರಣ.

Click here

Click Here

Call us

Visit Now

ಕೊಡಾಬೈಲಿನಲ್ಲಿ ಸುಮಾರು ಹತ್ತು ವಿದ್ಯಾರ್ಥಿಗಳು ಕಿರಿಯ ಪ್ರಾಥಮಿಕ ಶಾಲೆಗೆ, ೧೫ ಮಕ್ಕಳು ಹಿರಿಯ ಪ್ರಾಥಮಿಕ ಶಾಲೆಗೆ, ನಾಲ್ವರು ಕಾಲೇಜಿಗೆ ಕಾಲು ಹಾದಿ, ಓಣಿ, ಗದ್ದೆಬೈಲಿನಲ್ಲಿ ನಡೆದೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೆ, ಸುಮಾರು ೨೦ಕ್ಕೂ ಹೆಚ್ಚು ಮಂದಿ ಮುದಿ ವಯಸ್ಸಿನ ಜನರಿದ್ದಾರೆ. ಐದು ಜನ ಪ್ರಸ್ತುತ ಗರ್ಭಿಣಿಯರಿದ್ದಾರೆ. ಹತ್ತು ಇಲ್ಲಿ ನಿತ್ಯ ಅನಾರೋಗ್ಯ ಪೀಡಿತರಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ಯಾರಿಗೇ ಆರೋಗ್ಯ ಸಮಸ್ಯೆ ಬಂದರೂ ಕಂಬಳಿಯಲ್ಲಿ ಕಡಿದಾದ ಓಣಿಯಲ್ಲಿ ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ, ಸ್ಥಳೀಯ ಗ್ರಾ ಪಂಚಾಯಿತಿಗಳಿಗೆ ದೂರಿಕೊಂಡಿದ್ದೂ ಆಗಿದೆ. ಎರಡು ಬಾರಿ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದೂ ಆಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲದೇ ಇರುವುದು ಇಲ್ಲಿಯ ಗ್ರಾಮಸ್ಥರನ್ನು ಕೆರಳಿಸಿದೆ. ಸಂಪರ್ಕ ರಸ್ತೆ ಕಲ್ಪಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ರಸ್ತೆಗೆ ತಡೆಯೊಡ್ಡಿದ ಭೂ ಮಾಲೀಕರ ಪರ ವಕೀಲ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪ್ರತಿಕ್ರಿಯಿಸಿ, ಗ್ರಾಮಸ್ಥರು ರಸ್ತೆಗೆ ಕೇಳುತ್ತಿರುವ ಸ್ಥಳದಲ್ಲಿ ಕಕ್ಷಿದಾರರ ಪಟ್ಟಾ ಸ್ಥಳವಿರುವುದರಿಂದ ಮತ್ತು ಸಮಸ್ಯೆ ನ್ಯಾಯಾಲಯದಲ್ಲಿ ಇರುವುದರಿಂದ ಕಾನೂನು ರೀತಿಯಲ್ಲಿಯೇ ಮುನ್ನಡೆಯಬೇಕು. ಕಾನೂನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಕೊಡಾಬೈಲ್ ಪ್ರದೇಶದ ಜನ ಮಾತ್ರ ಮೂಲಭೂತ ಸೌಕರ್ಯವಂಚಿತರಾಗಿರುವುದಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ನೇರ ಹೊಣೆ ಎನ್ನಲಾಗಿದ್ದು, ಇನ್ನಾದರೂ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿ ಕೊಡುತ್ತಾರೆಯೇ ಕಾದು ನೋಡಬೇಕಾಗಿದೆ.

Call us

Kundapur taluk naxalite belt Kodabailu villege deprived of basic facilities

????????????????????????????????????

Leave a Reply

Your email address will not be published. Required fields are marked *

18 + 2 =