ನಾಯ್ಕನಕಟ್ಟೆ ಪುಂಡಲೀಕ್ ನಾಯಕ್ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೀದರ್ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಉಷಾ ಸಿ ಯತ್ನಳ್ಳಿ ಸದ್ಬಾವನ ವೇದಿಯಲ್ಲಿ ಜರುಗಿದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕಳೆದ ನಲವತ್ತು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ನಾಯ್ಕನಕಟ್ಟೆ ಪುಂಡಲೀಕ ನಾಯಕ್ ಅವರಿಗೆ ’ಸಹಕಾರಿ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

Call us

Call us

ಕುಂದಾಪುರ ತಾಲೂಕು ಕೆರ್ಗಾಲಿನವರಾದ ಪುಂಡಲೀಕ ನಾಯಕ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಶಾಖಾ ಸಲಹಾಗಾರರಾಗಿದ್ದಾರೆ. ಬೈಂದೂರು ಹಿರಿಯ ನಾಗರೀಕ ವೇದಿಕೆಯ ಸದಸ್ಯರಾಗಿ, ಈ ಭಾಗದ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಆಧ್ಯಾತ್ಮದತ್ತ ಒಲವು ಹೊಂದಿರುವ ಇವರು ಕವನ, ಲೇಖನ, ನಾಟಕ, ಹಾಡುಗಾರಿಕೆ, ಅಂಚೆಚೀಟಿ ಸಂಗ್ರಹ ಮುಂತಾದ ಹವ್ಯಾಸಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

six + three =