ಭತ್ತದ ಕೃಷಿಯಲ್ಲಿ ಹೊಸ ಆವಿಷ್ಕಾರ ‘ಸನ್‌ರೈಸ್ ಪದ್ಧತಿ’. ಕಡಿಮೆ ವಿನಿಯೋಗ, ಶ್ರಮ – ಅಧಿಕ ಇಳುವರಿ!

Click Here

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಆಧುನಿಕ ಬದುಕಿನ ನಡುವೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಭತ್ತದ ಕೃಷಿಯನ್ನು ಕಡಿಮೆ ಪರಿಶ್ರಮ, ಕಡಿಮೆ ಗೊಬ್ಬರ, ಕಡಿಮೆ ಬಿತ್ತನೆ ಬೀಜ, ಕಡಿಮೆ ಕೆಲಸಗಾರರನ್ನು ಬಳಸಿಕೊಂಡು ಹೆಚ್ಚು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿಕೊಳ್ಳಬೇಕೆಂಬ ಕೋಟೇಶ್ವರದ ಕೈಗಾರಿಕೊದ್ಯಮಿಯೊಬ್ಬರ ಅಧ್ಯಯನ ಹಾಗೂ ಚಿಂತನೆ, ಈಗ ಪ್ರಾಯೋಗಿಕ ರೂಪು ಪಡೆದಿದ್ದು ನೂತನ ವಿಧಾನದ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸತನದ ಪ್ರಯೋಗಕ್ಕೆ ಮುಂದಾಗಿದ್ದಾರೆ.

Call us

Call us

Visit Now

ಕೋಟೇಶ್ವರದ ಸುರೇಶ್ ಕಾಮತ್ ಎಂಬವವರು ಯಶಸ್ವಿ ಕೈಗಾರಿಕೋದ್ಯಮಿ. ತಮ್ಮ ರಾಜಾರಾಮ್ ಪಾಲಿಮರ‍್ಸ್ ಸಂಸ್ಥೆಯ ಮೂಲಕ ಭಾರತದಲ್ಲಿ ಪ್ರಥಮ ಬಾರಿಗೆ ಕೇವಲ ನೀರು ಸಂಗ್ರಹಿಸಿಡುವ ಟ್ಯಾಂಕ್‌ಗಳನ್ನು ಬಹುಉಪಯೋಗಿ ಟ್ಯಾಂಕ್‌ಗಳನ್ನಾಗಿ ನಿರ್ಮಿಸಿ ಜನ ಮನ್ನಣೆಗೆ ಪಾತ್ರರಾದವರು.

Click here

Click Here

Call us

Call us

ಇಂತಹ ಪ್ರಯೋಗಗಳಿಗೆ ಅವರು ತೆರೆದುಕೊಂಡ ಇನ್ನೊಂದು ಕ್ಷೇತ್ರವಿದೆ. ಅದುವೇ ಕೃಷಿ ಕ್ಷೇತ್ರ. ಕಳೆದೆರಡು ವರ್ಷಗಳಿಂದ ನಾಟಿ ಯಂತ್ರವನ್ನು ಉಪಯೋಗಿಸಿ ಮ್ಯಾಟ್ ಪದ್ದತಿ ಹಾಗೂ ದೇಶಿ ದನಗಳ ಸಗಣಿ ಹಾಗೂ ಗೋಮೂತ್ರವನ್ನು ಉಪಯೋಗಿಸಿ ಸುಭಾಷ ಪಾಲೇಕರ್ ಅವರ ಶೂನ್ಯ ಭಂಡವಾಳ ಕ್ರಮದಂತೆ, ಜೀವಾಮೃತದಿಂದ ಭತ್ತದ ಕೃಷಿಯನ್ನು ಮಾಡಿ ಒಂದು ಎಕರೆಗೆ 18 ಕ್ವಿಂಟಾಲ್‌ನಷ್ಟು ಉತ್ತಮ ಇಳುವರಿಯನ್ನು ಪಡೆದು ಸಂತಸಪಟ್ಟಿದ್ದ ಅವರು ಪ್ರಸಕ್ತ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದಾರೆ. ಅವರದೇ ಶೈಲಿಯ ಹೊಸ ಪದ್ಧತಿಯನ್ನು ಭತ್ತದ ಕೃಷಿಯಲ್ಲಿ ಅಳವಡಿಸಿಕೊಂಡು ಅದಕ್ಕೆ ಸನ್‌ರೈಸ್ ಪದ್ಧತಿ ಎಂದು ನಾಮಕರಣ ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಏನಿದು ಸನ್‌ರೈಸ್ ಪದ್ಧತಿ?
ಇದೀಗ ಎಲ್ಲಡೆ ಸೀಡ್‌ಬಾಲ್ ಅಭಿಯಾನ ನಡೆಯುತ್ತಿರುವುದು ನಾವೆಲ್ಲ ತಿಳಿದ ಸಂಗತಿ. ಜಪಾನ್‌ನಲ್ಲಿ ಭತ್ತದ ಕೃಷಿಯಲ್ಲಿ ಸೀಡ್‌ಬಾಲ್ ಬಳಕೆ ಸರ್ವೆ ಸಾಮಾನ್ಯ ಸಂಗತಿಯಾಗಿದೆ. ಆದರೆ ಭಾರತದಲ್ಲಿ ಭತ್ತದ ಸೀಡ್‌ಬಾಲ್ ತಯಾರಿಸಿ ಕೃಷಿ ಮಾಡುವ ಪದ್ಧತಿ ಇಲ್ಲ. ಕೋಟೇಶ್ವರದ ಸುರೇಶ್ ಕಾಮತ್‌ರು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಭತ್ತದ ಕೃಷಿಯಲ್ಲಿ ಸೀಡ್‌ಬಾಲ್ ಪ್ರಯೋಗ ಮಾಡಿ ಪ್ರಥಮ ಹಂತದ ಯಶಸ್ಸು ಕಂಡಿದ್ದಾರೆ. ಅವರು ಅನುಸರಿಸಿದ ಕೃಷಿ ಪದ್ದತಿಯನ್ನು ಸನ್‌ರೈಸ್ ಪದ್ದತಿ ಎಂದು ಕರೆಯಲಾಗುತ್ತಿದೆ.

ಭತ್ತದ ಸೀಡ್‌ಬಾಲ್ ತಯಾರಿ ಹೇಗೆ?
ಭತ್ತದ ಸೀಡ್‌ಬಾಲ್ ತಯಾರಿಕೆಗೆ ಕೆಂಪು ಮಣ್ಣು, ದೇಶಿ ದನದ ಸಗಣಿ ಗೊಬ್ಬರ, ದೇಶಿ ದನದ ಗೋಮೂತ್ರ ಹಾಗೂ ಭತ್ತದ ಬೀಜ ಅಗತ್ಯ. ಕೆಂಪು ಮಣ್ಣು ಹಾಗೂ ಗೊಬ್ಬರವನ್ನು ಚೆನ್ನಾಗಿ ಶೋಧಿಸಿ ಇಡಬೇಕು. ನಂತರ 200 ಸೇರು ಕೆಂಪು ಮಣ್ಣಿಗೆ 80 ಸೇರಿನಷ್ಟು ಗೊಬ್ಬರ ಹಾಗೂ 8ರಿಂದ 10 ಸೇರು ಭತ್ತದ ಬೀಜವನ್ನು ಸೇರಿಸಿ ಬೆರೆಸಬೇಕು. ಬಳಿಕ 4 ರಿಂದ 5 ಲೀಟರ್ ಗೋಮೂತ್ರಕ್ಕೆ ಅಷ್ಟೇ ಪ್ರಮಾಣದ ನೀರನ್ನು ಬೆರೆಸಬೇಕು. ನಂತರ ಈ ಗೋಮೂತ್ರವನ್ನು ಅಂದಾಜಿನಂತೆ ಚಿಮುಕಿಸುತ್ತಾ ಉಂಡೆಯನ್ನು ಮಾಡಬೇಕು. ಸಾಧಾರಣ 2 ಸೆಂ.ಮಿ. ಗಾತ್ರದ ಉಂಡೆಯನ್ನು ಮಾಡಿದರೆ ಸಾಕು. ಆಗ ಒಂದು ಸೀಡ್‌ಬಾಲ್‌ನಲ್ಲಿ 4 ರಿಂದ 7 ಭತ್ತದ ಬೀಜಗಳು ಬರುತ್ತವೆ. ನಂತರ ಈ ಸೀಡ್‌ಬಾಲ್‌ಗಳನ್ನು 2-3 ದಿನ ಬಿಸಿಲಿನಲ್ಲಿ ಒಣಗಿಸಿ, ಪೂರ್ಣ ಒಣಗಿದ ಸೀಡ್‌ಬಾಲ್‌ಗಳನ್ನು ಜೋಪಾನವಾಗಿ ಶೇಖರಿಸಿ ಇಡಬೇಕು. ಈ ಸೀಡ್‌ಬಾಲ್ ಸಾಮಾನ್ಯ ಎರಡು ಎಕರೆಗೆ ಸಾಕಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಪ್ರಮಾಣದಲ್ಲಿ ಸೀಡ್‌ಬಾಲ್‌ಗಳನ್ನು ಮಾಡಿಕೊಳ್ಳಬಹುದು. ಕುಂದಾಪ್ರ ಡಾಟ್ ಕಾಂ ವರದಿ.

Click Here

ನಾಟಿ ಕಾರ್ಯ ಬೇಕಿಲ್ಲ:
ಕೃಷಿ ಭೂಮಿಯಲ್ಲಿ ಹಗ್ಗ ಅಥವಾ ಉದ್ದನೆಯ ಕೋಲನ್ನು ಬಳಸಿ ಗುರುತು ಮಾಡಿಕೊಂಡು ಸುಮಾರು 1 ಪೀಟ್ ಅಂತರದಲ್ಲಿ 1 ಇಂಚು ಸುತ್ತಳತೆಯ 3-4ಇಂಚು ಆಳದ ಚಿಕ್ಕ ಗುಂಡಿಯನ್ನು ಮಾಡಿಕೊಳ್ಳಬೇಕು. ತಯಾರಿಸಿದ ಭತ್ತದ ಉಂಡೆಯನ್ನು ಗುಂಡಿಯಲ್ಲಿ ಇಡುತ್ತಾ ಮಣ್ಣನ್ನು ಮುಚ್ಚುತ್ತಾ ಸಾಗಬೇಕು. 4-5 ದಿನದಲ್ಲಿ ಭತ್ತದ ಬೀಜ ಮೊಳಕೆಯೊಡೆದು ಉಂಡೆಯ ಮೇಲ್ಭಾಗದಲ್ಲಿ ಹಸಿರು ಕಾಣಿಸುವುದು. ಈ ಸನ್‌ರೈಸ್ ಪದ್ಧತಿಯಿಂದ ನಾಟಿ ಕಾರ್ಯ ಮಾಡುವ ಅಗತ್ಯ ಬೀಳುವುದಿಲ್ಲ.

ಇಲ್ಲಿ ಒಮ್ಮೆ ಭತ್ತದ ಉಂಡೆಯನ್ನು ಬಿತ್ತಿದ ಮೇಲೆ ಪುನಃ ಕಿತ್ತು ನಾಟಿ ಮಾಡುವ ಪ್ರಮೇಯವಿಲ್ಲ. ಬೀಜದುಂಡೆಯಲ್ಲಿ ಸಗಣಿ ಗೊಬ್ಬರ ಗೋಮೂತ್ರದ ಬಳಕೆಯಾಗಿರುವುದರಿಂದ ಬೀಜಕ್ಕೆ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ. ಸಮೃದ್ಧವಾಗಿ ಬೆಳೆಯಲು ಅನುಕೂಲವಾಗುತ್ತದೆ.

ಸಮಯ, ಹಣ ಉಳಿತಾಯ:
ಸನ್‌ರೈಸ್ ಪದ್ಧತಿ ಅನುಸರಿಸುವುದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಪಾರಂಪರಿಕ ನಾಟಿ ಕ್ರಮಕ್ಕೆ ಒಂದು ಎಕರೆ ಗದ್ದೆಗೆ ಸರಿಸುಮಾರು 40ರಿಂದ 60ಸೇರು ಭತ್ತದ ಬೀಜ ಬೇಕಾಗುತ್ತದೆ. ಸೀಡ್‌ಬಾಲ್ ಕ್ರಮದಲ್ಲಿ 4ರಿಂದ 6 ಸೇರು ಬೀಜ ಸಾಕಾಗುತ್ತದೆ. ಭತ್ತದ ಕೃಷಿ ಲಾಭದಾಯಕವಲ್ಲ ಎಂದು ಅದೆಷ್ಟೋ ಮಂದಿ ಕೃಷಿ ಭೂಮಿಯನ್ನು ನಾಟಿ ಮಾಡದೇ ಹಡೀಲು ಬಿಟ್ಟು ನಗರ ಪಟ್ಟಣಗಳಲ್ಲಿ ಉದ್ಯೋಗಕ್ಕೆ ತೆರಳಿದ್ದಾರೆ. ಇಂತಹ ಸಂದರ್ಭದಲ್ಲಿ ಭತ್ತದ ಕೃಷಿ ಲಾಭದಾಯಕವಾಗಿ ಮಾಡುವುದು ಹೇಗೆ ಎಂಬ ಚಿಂತನೆಯ ಫಲವೇ ಸನ್‌ರೈಸ್ ಪದ್ಧತಿ.

ಈ ಪದ್ದತಿಯಿಂದ ಒಮ್ಮೆ ಬೀಜದುಂಡೆಯನ್ನು ಕ್ರಮವತ್ತಾಗಿ ಬಿತ್ತಿದ ಬಳಿಕ ಸಸಿಯಾದ ಮೇಲೆ ಅದನ್ನು ಕಿತ್ತು ಬೇರೆಡೆ ನೆಡುವ ಅಗತ್ಯವಿಲ್ಲದ ಕಾರಣ ಸಮಯದ ಉಳಿತಾಯ ಮತ್ತು ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ಹೆಚ್ಚಿನ ವೆಚ್ಚವಾಗುವುದು ತಪ್ಪುತ್ತದೆ. ಕಡಿಮೆ ಗೊಬ್ಬರ, ಕಡಿಮೆ ಬಿತ್ತನೆ ಬೀಜ ಬಳಕೆಯಿಂದಲೂ ಹೆಚ್ಚಿನ ಉಳಿತಾಯ ಸಾಧ್ಯ.

ಜಾಗ್ರತಾ ಕ್ರಮಗಳು:

  • ಒಣಗಿದ ಸೀಡ್‌ಬಾಲ್‌ಗಳನ್ನು ಇಲಿ ಹಾಗೂ ಇರುವೆಗಳಿಂದ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು
  • ಸೀಡ್‌ಬಾಲ್‌ಗಳನ್ನು ಶ್ರೀಪದ್ದತಿಯಂತೆ ಸಾಲಾಗಿ ನೆಟ್ಟರೆ ಒಳ್ಳೆಯದು
  • ಮಳೆ ಪ್ರಾರಂಭವಾಗುವ ಮೊದಲೇ ಸೀಡ್‌ಬಾಲ್ ಬಿತ್ತನೆ ಮಾಡಿದರೆ ಉತ್ತಮ.
  • ಬೀಜ ಮೊಳಕೆಯೊಡೆಯಲು ನೀರಿನ ತೇವಾಂಶವಿದ್ದರೆ ಸಾಕು. ನೀರು ಗದ್ದೆಯಲ್ಲಿ ನಿಂತಿದ್ದರೆ ಮೊಳಕೆಯೊಡೆಯುವ ಸಾಧ್ಯತೆ ಕಡಿಮೆ. ಆದ್ದರಿಂದ ಮೊಳಕೆಯೊಡೆಯುವವರೆಗೆ ಗದ್ದೆಯಲ್ಲಿ ನೀರು ನಿಲ್ಲದ ಹಾಗೇ ನೋಡಿಕೊಳ್ಳಬೇಕು.

ಒಟ್ಟಿನಲ್ಲಿ ಕೃಷಿಯಲ್ಲಿ ಕಡಿಮೆ ಪರಿಶ್ರಮ, ಕಡಿಮೆ ಗೊಬ್ಬರ, ಕಡಿಮೆ ಬಿತ್ತನೆ ಬೀಜ, ಕಡಿಮೆ ಕೆಲಸಗಾರರನ್ನು ಅಪೇಕ್ಷಿಸುವ ಸನ್‌ರೈಸ್ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಹೆಚ್ಚಿನ ಇಳುವರಿ ಜೊತೆಗೆ ಹೆಚ್ಚಿನ ಲಾಭ ಪಡೆಯುವುದರಲ್ಲಿ ಅನುಮಾನವಿಲ್ಲ. \ಕುಂದಾಪ್ರ ಡಾಟ್ ಕಾಂ\

  • ಈ ವೀಡಿಯೋ ನೋಡಿ – https://youtu.be/vMrN9GQV0hQ
  • ಸುರೇಶ್ ಕಾಮತ್ ಕೋಟೇಶ್ವರ – 9448492833

  

Leave a Reply

Your email address will not be published. Required fields are marked *

eighteen + 18 =