ಜಿಲ್ಲೆಯಲ್ಲಿ ನೂತನ ಕ್ವಾರಂಟೈನ್ ನಿಯಮ ಜಾರಿ: ಜಿಲ್ಲಾಧಿಕಾರಿ ಜಿ. ಜಗದೀಶ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕ್ವಾರಂಟೈನ್ ವ್ಯವಸ್ಥೆಯಲ್ಲಿ, ಹೋಮ್ ಕ್ವಾರೆಂಟೈನ್‌ನಿಂದ ಸಾಂಸ್ಥಿಕ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್‌ನಿಂದ ಹೋಮ್ ಕ್ವಾರೆಂಟೈನ್‌ಗೆ ಬದಲಾವಣೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಸರ್ಕಾರ ನೀಡಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ನೂತನ ಕ್ವಾರಂಟೈನ್ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು

Call us

Call us

ಅವರು ಬುಧವಾರ ಜಿಲ್ಲಾಪಂಚಾಯತ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳನ್ನು ಪಾಲಿಸಲು ಸಿದ್ದತೆ ನಡೆಸಿದ್ದು, ಉಡುಪಿ ಜಿಲ್ಲೆಗೆ ಬೇರೆ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತಿದ್ದು, ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆಬಾಗಿಲಿಗೆ ಭಿತ್ತಿಪತ್ರವನ್ನು ಅಂಟಿಸಲಾಗುವುದು, ನೆರೆಹೊರೆಯ ಮನೆಗೆ ಮಾಹಿತಿಯನ್ನು ನೀಡಲಾಗುತ್ತದೆ, ಗ್ರಾಮೀಣ ಪ್ರದೇಶದಲ್ಲಿ ಕ್ವಾರಂಟೈನ್‌ಗೆ ಬರುವವರ ಬಗ್ಗೆ ಗ್ರಾಮ ಪಂಚಾಯತಿ ನಿಗಾ ಇರಿಸಲು ಸೂಚಿಸಿದ್ದು, ಗ್ರಾಮ ಪಂಚಾಯತ್ ನಲ್ಲಿ ಆಯ್ಕೆ ಮಾಡಿರುವ ಸಿಬ್ಬಂದಿಗಳು ಕ್ವಾರಂಟೈನ್‌ನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್ ವಾಚ್ ಆಪ್ ನಲ್ಲಿ ಬೇಟಿನೀಡಿದ ಮಾಹಿತಿಯನ್ನು ನೀಡಬೇಕು. ಪ್ರತೀ ಗ್ರಾಮದಲ್ಲಿ ಮೇಲ್ವಿಚಾರಣೆಗಾಗಿ 3 ಜನರ ತಂಡವನ್ನು ನೇಮಕ ಮಾಡಲಾಗಿದೆ.ಇವರು ಮನೆಗಳಿಗೆ ಬೇಟಿ ನೀಡಿ ಪ್ರತಿದಿನ ವರದಿಯನ್ನು ನೀಡಬೇಕು, ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಪ್ಲೈಯಿಂಗ್ ಸ್ವ್ಯಾಡ್ ತಂಡದವರು ಎಫ್ ಐ ಆರ್ ದಾಖಲೆ ಮಾಡಿ, ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರತೀ ತಾಲೂಕಿನಲ್ಲಿ ತಲಾ ಎರಡು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ಮೀಸಲಿರಿಸಿದ್ದು, ಅಗತ್ಯವಿದ್ದವರಿಗೆ ಹೋಟೆಲ್ ಕ್ವಾರಂಟೈನ್ ಗೆ ಸಹ ಅವಕಾಶವಿದೆ ಎಂದು ಡಿಸಿ ಹೇಳಿದರು.

Click here

Click Here

Call us

Call us

Visit Now

ಕ್ವಾರಂಟೈನ್ ವಾಚ್ ಮೂಲಕ ವ್ಯಕ್ತಿಗಳ ತಾಪಮಾನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಲ್ಸ್ ಆಕ್ಸೂಮೀಟರ್ ರಿಡಿಂಗ್ ಮಾಡಲು ಸೂಚಿಸಲಾಗಿದೆ. ವಿಶೇಷ ವರ್ಗದಕ್ಕೆ ಸೇರಿದ 10 ವರ್ಷದೊಳಗಿನ ಮಕ್ಕಳು,ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರಲ್ಲಿ ಆಕ್ಸಿಜನ್ ಕೊರತೆ ಕಂಡುಬAದಲ್ಲಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಡಿಸಿ ಹೇಳಿದರು.

ಟಾಸ್ಕ್ ಪೊರ್ಸ್ ಕಮಿಟಿಗಳಾಗಿ ಗ್ರಾಮೀಣ ಪ್ರದೇಶದಲ್ಲಿ ಮಾಡಲಾಗಿದೆ. ಹಾಗೆಯೇ ನಗರ ಪ್ರದೇಶಗಳಲ್ಲಿ ವಾರ್ಡ್ ವೈಸ್ ಗಳಾಗಿ ನೇಮಕ ಮಾಡಲಾಗಿದೆ.

Call us

ಸಿಲ್ ಡೌನ್ ಆದ ಪ್ರದೇಶದಲ್ಲಿ ಕಂದಾಯ, ಆರೋಗ್ಯ, ಪೋಲಿಸ್ ಅಧಿಕಾರಿಗಳು ಬೇಟಿ ನೀಡಿ ಮಾಹಿತಿಯನ್ನು ನೀಡುತ್ತಾರೆ.

ಹೋಮ್ ಕ್ವಾರಂಟೈನ್ ನಲ್ಲಿ ಸೀಲ್ ಹಾಕಿದವರು ಅನಗತ್ಯವಾಗಿ ತಿರುಗಾಡುವುದು ಕಂಡು ಬಂದಲ್ಲಿ, ಸಾರ್ವಜನಿಕರು 100 ದೂರವಾಣೆ ಸಂಖ್ಯೆಗೆ ಕರೆಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸೇವಾಸಿಂಧು ಮೂಲಕ ಮಹಾರಾಷ್ಟçದಿಂದ ಬರುವವರ ಪಾಸ್ ಗಳನ್ನು ಅನುಮೋದಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಅವರು ನಿಗದಿತ ದಿನಾಂಕ ಆಯ್ಕೆಮಾಡಿ ಬರಬಹುದಾಗಿದೆ, ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರು, ಜಿಲ್ಲೆಯಲ್ಲಿ ಆರಂಭಿಸಿರುವ 7 ಜಿಲ್ಲಾ ವರದಿ ಕೇಂದ್ರಗಳಲ್ಲಿ ತಮ್ಮ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಮಾಡಿದ ಮಾದರಿ ಶಿಕ್ಷಕ ಬಾಬು ಶೆಟ್ಟಿ – https://kundapraa.com/?p=38485 .
► ಉಡುಪಿ ಜಿಲ್ಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಹಿತಿಗಾಗಿ ಸಹಾಯವಾಣಿ – https://kundapraa.com/?p=38453 .
► ಮನೆಯಲ್ಲಿಯೇ ಕುಳಿತು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸೇವೆ ಪಡೆಯುವ ನೂತನ ಯೋಜನೆ ಜಾರಿ – https://kundapraa.com/?p=38501 .

 

Leave a Reply

Your email address will not be published. Required fields are marked *

three + 15 =