ಮರಳು ಹಾಗೂ ಮರಳು ಸಾಗಾಟ ವಾಹನಗಳಿಗೆ ದರ ನಿಗದಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ತಿಳಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ನೂತನ ಅಧಿಕೃತ ದರಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದಾರೆ.

Call us

Call us

Visit Now

ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗಧಿಪಡಿಸಿದ ದರಕ್ಕಿಂತ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಮರಳು ಪರವಾನಿಗೆದಾರರು/ ವಾಹನ ಮಾಲೀಕರ ವಿವರ ಸಾರ್ವಜನಿಕರು ನೀಡಿದ್ದಲ್ಲಿ, ಅಂತಹ ಪರವಾನಿಗೆದಾರರ ಹಾಗೂ ಮರಳು ಸಾಗಾಟ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮರಳು ಪಡೆಯುವವರು ಮರಳಿನ ಸಾಗಾಟ ಪರವಾನಿಗೆಯನ್ನು (MDP) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸದರಿ ಮರಳನ್ನು ಅನಧಿಕೃತ ಮರಳು ಎಂದು ಪರಿಗಣಿಸಿ ನಿಯಮಾನುಸಾರವಾಗಿ ಮುಂದಿನ ಕ್ರಮ ಜರುಗಿಸಲಾಗುವುದು.

Click here

Call us

Call us

ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿರ್ಧರಿಸಿದ/ ನಿಗಧಿಪಡಿಸಿದ ಮರಳಿನ ದರ ಹಾಗೂ ಮರಳು ಸಾಗಾಟ ದರ/ ವೆಚ್ಚದ ವಿವರಗಳು ಹೀಗಿದೆ.

ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (CRZ ಪ್ರದೇಶದ ಸ್ವರ್ಣಾ, ಸೀತಾ & ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತಿ ಮೆ.ಟನ್‍ಗೆ  (ಸಾಗಾಟ ಪರವಾನಿಗೆಯೊಂದಿಗೆ): 550 ರೂ., ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) 5500 ರೂ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿ (NON CRZ ಪ್ರದೇಶದಲ್ಲಿನ ಕುಂದಾಪುರ ತಾಲ್ಲೂಕಿನ ಮರಳು ಬ್ಲಾಕ್ ಸಂಖ್ಯೆ: 4 ರ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಮತ್ತು 6 ರ ಜಪ್ತಿ- ಹಳ್ನಾಡು ಗ್ರಾಮದ ವ್ಯಾಪ್ತಿಯಲ್ಲಿ) ಮರಳುಗಾರಿಕೆ ನಡೆಸಿ ತೆಗೆದ ಮರಳಿನ ದಾಸ್ತಾನು/ ಶೇಖರಣೆ ಸ್ಥಳದಿಂದ ದರ ಪ್ರತಿ ಮೆ.ಟನ್‍ಗೆ (ಸಾಗಾಟ ಪರವಾನಿಗೆಯೊಂದಿಗೆ): 650 ರೂ. ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) : 6500 ರೂ.ಗಳು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ (10 ಮೆ.ಟನ್ ಗೆ): ದೊಡ್ಡ ಲಾರಿಗೆ 3000 ರೂ. (20 ಕಿ.ಮೀಟರ್‍ವರೆಗೆ), ನಂತರದ ಪ್ರತಿ ಕಿ.ಮೀಟರ್‍ಗೆ 50 ರೂ. ಗಳು. ಮಧ್ಯಮ ಗಾತ್ರದ ವಾಹನಗಳಿಗೆ : 2000 ರೂ. (20 ಕಿ.ಮೀಟರ್‍ವರೆಗೆ), ನಂತರದ ಪ್ರತಿ ಕಿ.ಮೀಟರ್‍ಗೆ 40 ರೂ.ಗಳು. ಸಣ್ಣ ವಾಹನಗಳಿಗೆ: 1500 ರೂ. (20 ಕಿ.ಮೀಟರ್‌ಗೆ), ನಂತರದ ಪ್ರತಿ ಕಿ.ಮೀಟರ್‍ಗೆ 35 ರೂ. ಗಳು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ಮರಳಿನ ಹಾಗೂ ಸಾಗಾಟ ಮಾಡುವ ವಾಹನಗಳಿಗೆ ದರ ನಿಗಧಿಪಡಿಸಲಾಗಿದ್ದು, ಸದರಿ ದರದ ವಿವರವನ್ನು ಸಾರ್ವಜನಿಕರ ಗಮನಕ್ಕೆ ಈಗಾಗಲೇ ಪತ್ರಿಕಾ ಪ್ರಕಟಣೆ ಮೂಲಕ ತರಲಾಗಿದೆ. ಆದಾಗ್ಯೂ ಕೆಲವು ಪರವಾನಿಗೆದಾರರು ಹಾಗೂ ಸಾಗಾಟ ವಾಹನದ ಮಾಲೀಕರು ಹೆಚ್ಚಿನ ದರದಲ್ಲಿ ಮರಳನ್ನು ಸಾರ್ವಜನಿಕರಿಗೆ ಪೂರೈಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.

ಮೇಲಿನಂತೆ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿದ್ದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ: 0820-2574802, 1077 (ಟೋಲ್ ಫ್ರೀ), ಮಹೇಶ ಭೂವಿಜ್ಞಾನಿ : 9632742629, ಡಾ. ಮಹದೇಶ್ವರ ಹೆಚ್. ಎಸ್, ಭೂವಿಜ್ಞಾನಿ : 9483096118, ಗೌತಮ್ ಶಾಸ್ತ್ರಿ ಹೆಚ್, ಭೂವಿಜ್ಞಾನಿ : 9008917890, ಸಂಧ್ಯಾಕುಮಾರಿ, ಭೂವಿಜ್ಞಾನಿ: 9901370559, ಹಾಜಿರಾ ಸಜಿನಿ ಎಸ್, ಭೂವಿಜ್ಞಾನಿ : 9663836959 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷ ಜಿ. ಜಗದೀಶ್ ತಿಳಿಸಿದ್ದಾರೆ.

ಅನಧಿಕೃತ ಮರಳು ದಾಸ್ತಾನು ಕಂಡುಬಂದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ 

ಕುಂದಾಪ್ರ ಡಾಟ್ ಕಾಂ ಸುದ್ದಿ.
ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್‌ಝಡ್ ಪ್ರದೇಶ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು, ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹಾಗೂ ಬಜೆ ಡ್ಯಾಮ್‌ನಲ್ಲಿ ಹೂಳೆತ್ತಿ, ಸದರಿ ಹೂಳಿನಲ್ಲಿ ದೊರಕುವ ಮರಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವ ಬಗ್ಗೆ ಕ್ರಮವಹಿಸಲಾಗುತ್ತಿದ್ದು, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರು, ಸಾರ್ವಜನಿಕರು ಕಾಮಗಾರಿಗಳಿಗನುಸಾರ ಅಗತ್ಯತೆಗಳಿಗನುಗುಣವಾಗಿ ಮರಳನ್ನು ಪಡೆಯಬಹುದಾಗಿದೆ. ಇದನ್ನು ಹೊರತುಪಡಿಸಿ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿರುತ್ತದೆ.

ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ವಿರುದ್ಧ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಪ್ರಾರಂಭವಾದ ನಂತರ ನ್ಯಾಯಾಲಯದಲ್ಲಿ MMDR Act ರಡಿಯಲ್ಲಿ ಹಾಗೂ ಕರ್ನಾಟಕ ಉಪಖನಿಜ ರಿಯಾಯತಿ ನಿಯಮಾವಳಿ 1994 ರನ್ವಯ 23 ಖಾಸಗಿ ದೂರು ದಾಖಲಿಸಲಾಗಿರುತ್ತದೆ.

ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಬಗ್ಗೆ ಮಾಹಿತಿ ಬರುತ್ತಿರುವುದರಿಂದ ಸಂಬಂಧಿಸಿದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅದಾಗ್ಯೂ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ ಅಥವಾ ದಾಸ್ತಾನು ಮಾಡುವುದು ಪುನರಾವರ್ತಿತವಾದಲ್ಲಿ ನಿಯಮಾನುಸಾರ ಗೂಂಡಾ ಕಾಯ್ದೆರಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

three × 1 =