ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಡುಪಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ಬೈಂದೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಯ್ಯಾಡಿಯಲ್ಲಿ ನೂತನವಾಗಿ ಆರಂಭಗೊಂಡ ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನೆ ಶನಿವಾರ ನಡೆಯಿತು.

Call us

Call us

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಬೈಂದೂರು ನ್ಯಾಯಾಲಯದ ಕಛೇರಿ ಉದ್ಘಾಟಿಸಿ ಮಾತನಾಡಿ, ಬೈಂದೂರು ಭಾಗದಲ್ಲಿ 2800 ವಿವಿಧ ಪ್ರಕರಣಗಳಿದ್ದು ಇದ್ದು, ಒಂದು ಕೋರ್ಟ್‌ನಲ್ಲಿ 1000 ಸಾವಿರ ಪ್ರಕರಣಗಳಿಗೆ ಮಾತ್ರ ಅವಕಾಶ ನೀಡಬಹುದು ಆದರೆ ಈ ಕೇಸ್‌ಗಳಿಗೆ ಎರಡು ಶಾಶ್ವತ ಕೋರ್ಟ್‌ನ ಅವಶ್ಯಕತೆ ಇದೆ. ಈ ಭಾಗದಲ್ಲಿ ಕೋರ್ಟ್ ಆಗಿದ್ದು, ಹಲವಾರು ಜನರಿಗೆ ಸಹಾಯ ಸಹಕಾರವಾಗಿದೆ ಎಂದರು.

Click here

Click Here

Call us

Call us

Visit Now

ಕರ್ನಾಟಕ ಉಚ್ಛ ನ್ಯಾಯಾಲಯದ ಬೆಂಗಳೂರು ಇದರ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ಈ ಇಪ್ಪತ್ತೊಂದನೇ ಶತಮಾನವನ್ನು ಭಾರತೀಯ ಶತಮಾನ ಎಂಬ ಮಾತಿದೆ ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ನೋಡುತ್ತಿದ್ದೇವೆ, ನ್ಯಾಯಾಲಯಗಳು ಜನಸ್ನೇಹಿಯಾಗಿ ಇಂದು ವರ್ಚವಲ್ ನ್ಯಾಯಲಯವನ್ನು ಈ ಕೋವಿಡ್ ಸಂದರ್ಭದಲ್ಲಿ ನೆಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇಂಟರ್ನೆಟ್ ಸೌಲಭ್ಯಗಳು, ಸಾಮಾಜಿಕ ಜಾಲತಾಣಗಳು ಜನರಿಗೆ ಪೂರಕದ ಜೊತೆಗೆ ಮಾರಕವು ಆಗಿದೆ ಏಕೆಂದರೆ ಅನೇಕ ರೀತಿಯ ಕ್ರಿಮಿನಲ್ ಚಟುವಟಿಗೆಗಳು ಈ ಇಂಟರ್ ನೆಟ್ ಸೌಲಭ್ಯದಿಂದ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ. ನವದೆಹಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ದೇಶದ ಪ್ರಮುಖ ವಿಷಯಗಳಾದ ಶ್ರೀ ರಾಮ ಜನ್ಮ ಭೂಮಿ, ತ್ರಿವಳಿ ತಲಾಕ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ತೀರ್ಪುನ್ನು ನೀಡಿದ್ದಾರೆ ಅವರು ನಮ್ಮ ಕ್ಷೇತ್ರಕ್ಕೆ ಬಂದಿರುವುದು ನಮ್ಮ ಹೆಮ್ಮೆ ಎಂದರು.

ಇದನ್ನೂ ಓದಿ: ► ಕುಂದಾಪುರ: ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕು: ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ – https://kundapraa.com/?p=57560 .

Call us

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ಉಡುಪಿ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯ ಮಹಾ ವಿಲೇಖನಾಧಿಕಾರಿ ಟಿ.ಜಿ. ಶಿವಶಂಕರೇ ಗೌಡ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ವೆಂಕಟೇಶ್ ನಾಯ್ಕ್, ಬೆಂಗಳೂರು ಕರ್ನಾಟಕ ಉಚ್ಛ ನ್ಯಾಯಾಲಯ ಹಿರಿಯ ವಕೀಲ ಉದಯ್ ಹೊಳ್ಳ, ಲೋಕೋಪಯೋಗಿ ಇಲಾಖೆ ಕೇಂದ್ರ ಶಿವಮೊಗ್ಗ ವಲಯದ ಮುಖ್ಯ ಅಭಿಯಂತ ಕಾಂತರಾಜು ಬಿ.ಟಿ, ಬೈಂದೂರು ವಕೀಲರ ಸಂಘದ ಕಾರ್ಯದರ್ಶಿ ಎನ್. ಸುಧೀಂದ್ರ ಆರ್ ಭಟ್ ಉಪಸ್ಥಿತರಿದ್ದರು.

ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶಕ ಸುಬ್ರಹ್ಮಣ್ಯ ಜೆ.ಎಸ್ ಸ್ವಾಗತಿಸಿದರು, ಬೈಂದೂರು ವಕೀಲರ ಸಂಘದ ಅಧ್ಯಕ್ಷ ದೇವಿದಾಸ್ ಆರ್ ಮೇಸ್ತ್ ಪ್ರಾಸ್ತಾವಿಕ ಮಾತನಾಡಿದರು.

Leave a Reply

Your email address will not be published. Required fields are marked *

six − 5 =