‘ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ’ ಕುಂದಾಪ್ರ ಕನ್ನಡ ಮ್ಯೂಸಿಕಲ್ ವಿಡಿಯೋ ಬಿಡುಗಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಕನ್ನಡದ ‘ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ’ ಮ್ಯೂಸಿಕಲ್ ವಿಡಿಯೋವನ್ನು ಕನ್ನಡದ ಖ್ಯಾತ ಸಿನೆಮಾ ನಟ ಪ್ರಮೋದ್ ಶೆಟ್ಟಿ ಅವರು ಬುಧವಾರ ಬಿಡುಗಡೆಗೊಳಿಸಿದರು.

Click here

Click Here

Call us

Call us

Visit Now

Call us

Call us

ಬಳಿಕ ಅವರು ಮಾತನಾಡಿ, ‘ನಿನ್ನೆ ರಾತ್ರಿ ನಾ ಎಣ್ಣಿ ಕುಡ್ದಿದೆ’ ಎನ್ನುವ ಅದ್ಭುತ ಆಲ್ಬಮ್ ಸಾಂಗ್ ಉತ್ತಮವಾಗಿ ಮೂಡಿಬಂದಿದೆ. ಕುಂದಾಪುರ ಭಾಗದ ಪ್ರತಿಭೆಗಳು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಾಂಗ್ ನೀಡಿದ್ದಾರೆ. ಇದು ಅವರ ಭವಿಷ್ಯದ ಬಗ್ಗೆಯೂ ಭರವಸೆ ಮೂಡಿಸುವಂತಿದೆ. ಕುಂದಾಪ್ರ ಕನ್ನಡದಲ್ಲಿ ಹೆಚ್ಚೆಚು ಸಂಗೀತ, ಸಿನೆಮಾಗಳು ಮೂಡಿ ಬರಲಿ. ಯುವ ತಂಡಗಳ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು.

ಈ ಸಂದರ್ಭದಲ್ಲಿ ಕನ್ನಡ ಆಲ್ಬಮ್ ಗೀತೆ ನಿರ್ಮಾಪಕರಾದ ರಮೇಶ್ ಆಚಾರ್ಯ ಅರಾಟೆ, ಗಾಯತ್ರಿ ರಮೇಶ್ ಆಚಾರ್ಯ, ನಿರ್ದೇಶಕದ ಪ್ರಹ್ಲಾದ್ ಆಚಾರ್ಯ, ಸಹ ನಿರ್ದೇಶಕ ಹರೀಶ್ ಎಂ.ಖಾರ್ವಿ, ಸಂಗೀತ ನಿರ್ದೇಶಕ ಗೌತಮ್ ಕೆ., ಕ್ಯಾಮರಾ ವರ್ಕ್ ಮಾಡಿದ್ದ ಪ್ರವೀಣ್ ನಾಡ, ಜಯರಾಮ ಆಲೂರು, ಪೋಸ್ಟರ್ ವಿನ್ಯಾಸಕಾರ ತಕ್ಷಕ್ , ಕಲಾವಿದರಾದ ಸತ್ಯನಾರಾಯಣ ಆಚಾರ್ಯ, ಮಂಜುನಾಥ ಸಾಲಿಯಾನ್, ರಸಿಕ್ ಶೆಟ್ಟಿ, ಪ್ರದೀಪ್ ಮಾರ್ಗೋಳಿ , ಶರಣ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

14 + three =