ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಾರ್ ಅಸೋಸಿಯೇಶನ್ಗೆ ನಡೆದ ಚುನಾವಣೆಯಲ್ಲಿ ನಿರಂಜನ್ ಹೆಗ್ಡೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಹಂದೆ ಆಯ್ಕೆಗೊಂಡಿದ್ದಾರೆ.
ಕುಂದಾಪುರ ಬಾರ್ ಅಸೋಸಿಯೇಶನ್ಗೆ ಜೂ.5ರಂದು ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಿರಂಜನ್ ಹೆಗ್ಡೆ ಹಾಗೂ ಕೆ.ಸಿ ಶೆಟ್ಟಿ ಸ್ಪರ್ಧಿಸಿದ್ದರು. ಒಟ್ಟು 232 ಮತಗಳಲ್ಲಿ 223 ಮತಗಳು ಚಲಾಯಿಸಲ್ಪಟ್ಟಿದ್ದವು. 9 ಮತಗಳಿಂದ ನಿರಂಜನ್ ಹೆಗ್ಡೆ ಗೆಲುವು ಸಾಧಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಮೋದ್ ಹಂದೆ ಸ್ಪರ್ಧೆ ಮಾಡಿದ್ದು, ಅವರು 32 ಮತಗಳಿಂದ ಗೆಲುವು ಸಾಧಿಸಿದ್ದಾರೆ.