ಎಲ್ಲಾ ವರ್ಗದ ಜನ ಒಪ್ಪಿಕೊಂಡರೇ ಮಾತ್ರ ನಾಯಕ: ಡಿಸಿ ಜಿ. ಜಗದೀಶ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸ್ವಯಂ ಘೋಷಣೆಯಿಂದ ಅಥವಾ ಧರ್ಮ, ಜಾತಿಯ ಕಾರಣದಿಂದ ನಾಯಕರಾಗಲು ಸಾಧ್ಯವಿಲ್ಲ. ಬದಲಿಗೆ ಜನರು ಒಪ್ಪಿದರೆ ಮಾತ್ರ ನಿಜವಾದ ನಾಯಕರಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

Call us

Call us

Visit Now

ಅವರು ಶುಕ್ರವಾರ ಬ್ರಹ್ಮಗಿರಿಯ ಎನ್‌ಐಎಸ್‌ಟಿ ನೆಹರು ಯುವ ಕೇಂದ್ರ ಸಂಘಟನಾ ಬೆಂಗಳೂರು, ನೆಹರು ಯುವ ಕೇಂದ್ರ ಉಡುಪಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ೧೫ ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ಪ್ರವೇಶ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

Click here

Call us

Call us

ಭಾರತದಲ್ಲಿನ ಯುವ ಸಂಪತ್ತಿಗೆ ವಿಶ್ವವೇ ಹೆದರುತ್ತದೆ. ಇಲ್ಲನ ಶಿಕ್ಷಣ ಪದ್ಧತಿ ಹಾಗೂ ವಿಶ್ವದ ಪ್ರಮುಖ ಉದ್ಯೋಗಗಳಲ್ಲಿ ಭಾರತೀಯರೇ ಹೆಚ್ಚಿರುವುದು ಇದಕ್ಕೆ ಕಾರಣ. ಯುವ ಶಕ್ತಿ ಇಂತಹ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ಮೊಬೈಲ್ ವ್ಯಸನದಿಂದ ದೂರವಾಗಿ ಧನಾತ್ಮಕ ಚಿಂತನೆಯಿಂದ ದೇಶ ಕಟ್ಟಲು ಮುಂದಾಗಲಿ ಎಂದವರು ಆಶಿಸಿದರು.

ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಜಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಡುಪಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಬ್ರಹ್ಮಗಿರಿ ಎನ್‌ಐಎಸ್‌ಟಿ ಸಂಸ್ಥೆಯ ಪ್ರಾಂಶುಪಾಲರಾದ ಅಶೋಕ್ ಕೆ., ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಭಾಷಣ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಯುವ ಮಂಡಲಗಳಿಗೆ ಸ್ಪೋಟ್ಸ್ ಕಿಟ್ ವಿತರಿಸಲಾಯಿತು.

ನೆಹರು ಯುವ ಕೇಂದ್ರ ಉಡುಪಿಯ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೇಖಪಾಲಕ ವಿಷ್ಣುಮೂರ್ತಿ ಸ್ವಾಗತಿಸಿದರು. ಉದಯ ಮರಾಠಿ ವಂದಿಸಿದರು. ಶ್ರೇಯಸ್ ಜಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

1 + 8 =