ಉಡುಪಿ ಕೊರೋನಾ ಅಪ್‌ಡೇಟ್: ಒಟ್ಟು 946 ಮಂದಿ ಡಿಸ್ಚಾರ್ಜ್. ಗುರುವಾರ ಪಾಸಿಟಿವ್ ಇಲ್ಲ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.18ರ ಗುರುವಾರ ದೊರೆತಿರುವ ವರದಿಯಲ್ಲಿ ಯಾವುದೇ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. 27 ಪರೀಕ್ಷಾ ವರದಿ ನೆಗಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಇಂದು 38 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 92 ಸಕ್ರಿಯ ಪ್ರಕರಣಗಳು ಉಳಿದಂತಾಗಿದೆ.

ಈವರೆಗೆ ಒಟ್ಟು 1039 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 946 ಮಂದಿ ಬಿಡುಗಡೆಯಾಗಿದ್ದು, 92 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಒಂದು ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ. ಓರ್ವ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆಗೆ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಸಿಸರಿಯೇನ್ ಮಾಡಲಾಗಿತ್ತು.

ಜಿಲ್ಲೆಯಲ್ಲಿ ಆರಂಭದಲ್ಲಿ 3 ಪಾಸಿಟಿವ್ ಪ್ರಕಣಗಳಿದ್ದು, ಎಲ್ಲರೂ ಗುಣಮುಖರಾಗಿದ್ದರು. ಹೊರ ರಾಜ್ಯದವರು ಜಿಲ್ಲೆಗೆ ಆಗಮಿಸುವ ಸಮಯದಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದ್ದು, ಜನರು ಆತಂಕ ಪಡುವಂತಾಗಿತ್ತು. ಆದರೆ ಅವರಲ್ಲಿ ಬಹುಪಾಲು ಮಂದಿಗೆ ಕೋವಿಡ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳದಿರುವುದರಿಂದ ಬೇಗ ಡಿಸ್ಚಾರ್ಜ್ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಗರಿಷ್ಠ ಪಾಸಿಟಿವ್ ಪ್ರಕರಣಗಳನ್ನು ದಾಖಲಿಸಿದ್ದ ಜಿಲ್ಲೆ, ಅಷ್ಟೇ ವೇಗವಾಗಿ ಗುಣಮುಖರಾಗುವವರ ಸಂಖ್ಯೆಯನ್ನೂ ದಾಖಲಿಸಿದ್ದು, ನೆಮ್ಮದಿಯ ಸಂಗತಿಯಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಈ ತನಕ 13,140 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 11,903 ನೆಗೆಟಿವ್, 1039 ಪಾಸಿಟಿವ್ ಬಂದಿದ್ದು, 198 ವರದಿ ಬರುವುದು ಬಾಕಿ ಇದೆ. ಹೊರ ರಾಜ್ಯಗಳಿಂದ ಬರುತ್ತಿರುವವರನ್ನು ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದ್ದು, ಈವರೆಗೆ 724 ಮಂದಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಹೋಂ ಕ್ವಾರಂಟೈನ್ ಇರುವವರ ಮನೆಗೆ ಯಾರೂ ತೆರಳದಂತೆ ಮತ್ತು ಅವರ ಮನೆಯವರು ಹೊರ ಹೋಗದಂತೆ ಎಚ್ಚರಿಕೆ ವಹಿಸಿವುದು ಅಗತ್ಯವಾಗಿದ್ದು, ಹೊಸ ವ್ಯಕ್ತಿಗಳು ಊರಿಗೆ ಬಂದಲ್ಲಿ ಅಂತವರ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ತಿಳಿಸಿವಂತೆಯೂ ಸೂಚಿಸಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಕುಂದಾಪುರ & ಬೈಂದೂರು: ಆತಂಕ ತೊರೆದು ಪರೀಕ್ಷೆ ಬರೆದ ದ್ವಿತೀಯ ಪಿಯು ವಿದ್ಯಾರ್ಥಿಗಳು – https://kundapraa.com/?p=38754 .
► ಉಡುಪಿ: ಕೋವಿಡ್-19 ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ವೈದ್ಯರು – https://kundapraa.com/?p=38730 .

 

 

 

 

Leave a Reply

Your email address will not be published. Required fields are marked *

five × 2 =