ಕೊರೋನಾ ಭೀತಿ: ಕುಂದಾಪುರ ಮದ್ದುಗುಡ್ಡೆಯಲ್ಲಿ ಹೊರಗಿನವರಿಗೆ ನೋ ಎಂಟ್ರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೋನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಕುಂದಾಪುರ ಪುರಸಭೆ ಮದ್ದುಗುಡ್ಡೆ ವಾರ್ಡ್ ನಿವಾಸಿಗಳು ತಮ್ಮ ಏರಿಯಾಕ್ಕೆ ಯಾರೂ ಹೊರಗಿನವರು ಬಾರದಂತೆ ನಾಮಫಲಕ ಹಾಕಿದ್ದಾರೆ.

ಮದ್ದುಗುಡ್ಡೆ ವಾರ್ಡ್ ಪ್ರವೇಶದಲ್ಲಿ ಗೇಟ್ ಮಾಡಿ ಒಳಗೆ ಹೊರಗೆ ಹೋಗುವವರ ಗೇಟ್ ಮೂಲಕ ಬಿಡುತ್ತಿದ್ದಾರೆ. ಪೊಲೀಸ್ ಗೇಟ್ ರೀತಿಯಲ್ಲಿ ಗೇಟ್ ಅಳವಡಿಸಿದ್ದು, ಹಗ್ಗದ ಮೂಲಕ ಗೇಟ್ ಏರಿಸಿ, ಇಳಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ದಯವಿಟ್ಟು ಹೊರಗಡೆಯವರಿಗೆ ನಮ್ಮಲ್ಲಿ ಪ್ರವೇಶ ಇಲ್ಲ. ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸೋಣ ಎಂಬ ಬೋರ್ಡ್ ಅಳವಡಿಸಲಾಗಿದೆ. ಮದ್ದುಗುಡ್ಡೆ ವಾರ್ಡ್ ನಿವಾಸಿಗಳು ತಮಗೆ ತಾವೇ ನಿರ್ಬಂಧ ಹೇರಿಕೊಳ್ಳುವ ಮೂಲಕ ಮನೆಯಲ್ಲಿ ಉಳಿದಿದ್ದಾರೆ.

Leave a Reply

Your email address will not be published. Required fields are marked *

two × two =