ಸ್ವಂತ ಕಟ್ಟಡ ನಿರ್ಮಿಸಲು ಸ್ಥಳವಿಲ್ಲ. ಎತ್ತಂಗಡಿಯಾಗಲಿದೆಯೇ ಶಂಕರನಾರಾಯಣ ವಿದ್ಯುತ್ ಉಪ ವಿಭಾಗ?

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಶಂಕರನಾರಾಯಣ: ಶಂಕರನಾರಾಯಣ ಮೆಸ್ಕಾಂ ಉಪ ವಿಭಾಗ ಕಛೇರಿಗೆ ಅವಶ್ಯವಿರುವ ಸರಕಾರಿ ಜಮೀನು ಲಭವಿಲ್ಲವೆಂಬ ನೆಪವಿರಿಸಿಕೊಂಡು, ಇಲಾಖಾ ಅನುದಾನಗಳಿದ್ದರೂ ಸ್ವಂತ ಕಟ್ಟಡ ನಿರ್ಮಿಸದೇ ಉಪವಿಭಾಗ ಕೇಂದ್ರವನ್ನು ಎತ್ತಂಗಡಿ ಮಾಡುವ ಕಾರ್ಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Call us

Call us

2013ರಿಂದ ಶಂಕರನಾರಾಯಣದ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಮೆಸ್ಕಾಂ ಉಪವಿಭಾಗ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಡಿಮ್ಡ್ ರಹಿತ ಸರಕಾರಿ ಜಮೀನು ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಪತ್ರ ಬರೆದಿದೆ. ಮೆಸ್ಕಾಂ ಉಪ ವಿಭಾಗಕ್ಕೆ ಸ್ವಂತ ಕಚೇರಿ, ಅಧಿಕಾರಿಗಳ ಕ್ವಾಟ್ರರ್ಸ್, ಕಂಬ ಟಿಸಿ ವಯರು ದಾಸ್ತಾನು ಇಡಲು ಗೋದಾಮು, ವಿದ್ಯುತ್ ಬಿಲ್ಲು ಕಟ್ಟಲು ಕೌಂಟರ್ ಅವಶ್ಯಕತೆ ಇದೆ.

Call us

Call us

ಸಹಾಯಕ ಕಾರ್ಯನಿರ್ವಾಹಕ (ಎಇಇ) ಇಂಜಿನಿಯರ್ ಹುದ್ದೆಯನ್ನು ಹೊಂದಿರುವ ಈ ಉಪ ವಿಭಾಗವು ಬೆಳ್ವೆ, ಹಾಲಾಡಿ, ಸಿದ್ದಾಪುರ, ಅಂಪಾರು, ಹೊಸಂಗಡಿಯಲ್ಲಿ ಜೆ.ಇ ಕಚೇರಿ ಶಾಖೆಯನ್ನು ಹೊಂದಿ ಹಳ್ಳಿಹೊಳೆಯಿಂದ ಕಾವ್ರಾಡಿ, ಹಳ್ಳಾಡಿ – ಹರ್ಕಾಡಿ, ಅಮವಸೆಬೈಲ್, ಶೇಡಿಮನೆ, ಮಾಡಾಮಕ್ಕಿವರೆಗೆ ಸುಮಾರು 26 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.

2012ರಲ್ಲಿ ಮುಖ್ಯಮಂತ್ರಿಯಾದ್ದ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ಮನವಿಯ ಮೇರೆಗೆ ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಹಾಗೂ ಬೈಂದೂರು ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ಲಕ್ಷ್ಮೀನಾರಾಯಣ ಹಾಗೂ ಇಲಾಖಾ ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇಲೆ ವಿದ್ಯುತ್ ಉಪ ವಿಭಾಗ ಕಛೇರಿ ಶಂಕರನಾರಾಯಣಕ್ಕೆ ಮಂಜೂರಾಗಿತ್ತು.

ಈ ಹಿಂದೆ ಸರಕಾರಿ ಸ್ಥಳಗಳು ಲಭ್ಯವಿಲ್ಲವೆಂಬ ನೆಪದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಸ್ಥಳಾಂತರಕ್ಕೆ ಪ್ರಾರಂಭಿಸಿದಾಗ ಅಂತಿಮವಾಗಿ 8.00 ಎಕ್ರೆ ಜಾಗ ಸರಕಾರದಿಂದ ಮಂಜೂರುಗೊಳಿಸಲಾಗಿತ್ತು. ಈಗ ವಿದ್ಯುತ್ ಉಪ ವಿಭಾಗಕ್ಕೂ ಕಂದಾಯ ಇಲಾಖೆಯಿಂದ ಡೀಮ್ಡ್ ರಹಿತ ಸರಕಾರಿ ಸ್ಥಳಗಳು ಲಭ್ಯವಿಲ್ಲವೆಂಬ ಪತ್ರ ಬರೆದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಶಂಕರನಾರಾಯಣ ಭಾಗದಲ್ಲಿ ಲಭ್ಯವಿರುವ ಡೀಮ್ಡ್ ರಹಿತ ಸರಕಾರಿ ಸ್ಥಳಗಳ ಸರ್ವೇ ನಂಬರುಗಳನ್ನು ಕಂದಾಯ ಇಲಾಖೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದಿರುವ ತಾಲೂಕು ಹೋರಾಟ ಸಮಿತಿಯು ಜಾಗ ಮಂಜೂರು ಮಾಡಿ ಕಛೇರಿಯು ಸ್ವತಂತ್ರವಾಗಿ ಕಾರ್ಯಾಚರಿಸಲು ಅನುವು ಮಾಡಿಕೊಡುವಂತೆ ಆಗ್ರಹಿಸಿದೆ.

Leave a Reply

Your email address will not be published. Required fields are marked *

8 − 6 =