ನ.12ಕ್ಕೆ ಕುಂದಾಪುರದಲ್ಲಿ ‘ಪಿಚ್ಚರ್ ಡೈರೀಸ್’ ಚಲನಚಿತ್ರ ಕಾರ‍್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಲನಚಿತ್ರ ತಯಾರಿಯಲ್ಲಿ ಆಸಕ್ತಿಯಿರುವ ಯುವ ಸಮೂಹಕ್ಕೆ ಚಿತ್ರ ನಿರ್ಮಾಣ ಅರಿವು ಮೂಡಿಸುವ ಹಿನ್ನಲೆಯಲ್ಲಿ ಕಾಣಿ ಸ್ಟುಡಿಯೋ ಬೆಂಗಳೂರು-ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪಿಚ್ಚರ್ ಡೈರೀಸ್ ಎಂಬ ಚಲನಚಿತ್ರ ತಯಾರಿ ಕಾರ್ಯಾಗಾರವನ್ನು ನ.12ರಂದು ಬೆಳಿಗ್ಗೆ 9ರಿಂದ ಕೋಟೇಶ್ವರದ ಸಹನ ಕನ್ವೇಶನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರದ ನಿರ್ದೇಶನ ಆಧಾರಿತ ಚಟುವಟಿಕೆಗಳು, ಚಲನಚಿತ್ರ ವಿಮರ್ಶೆ, ಚರ್ಚೆ, ಚಲನಚಿತ್ರ ಮಾತುಕತೆ ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಒಂದು ಮೊಟ್ಟೆಯ ಕಥೆ ಖ್ಯಾತಿಯ ನಟ ಮತ್ತು ನಿರ್ದೇಶಕ ರಾಜ್ ಬಿ.ಶೆಟ್ಟಿ, ರಾಮಾ ರಾಮಾ ರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ರೈಲ್ವೆ ಚಿಲ್ಡ್ರನ್ ಚಿತ್ರ ನಿರ್ದೇಶಕ ಪೃಥ್ವಿ ಕೊನನೂರ್ ಭಾಗವಹಿಸಲಿದ್ದಾರೆ.

  • ಆಸಕ್ತರು ಕಾರ‍್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, 8867888600, 8867888700 ಕರೆ ಮಾಡಿ ಆಸನಗಳನ್ನು ಮೀಸಲಿರಿಸಬಹುದು ಎಂದು ಕಾಣಿ ಸ್ಟುಡಿಯೋ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

three + 1 =