ಎನ್‌ಎಸ್‌ಯುಐನಿಂದ 120 ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಾಲೂಕಿನ ಎನ್‌ಎಸ್‌ಯುಐನಿಂದ ಕುಂದಾಪುರ, ಬೈಂದೂರು ತಾಲೂಕಿನ 120 ಅತ್ಯಂತ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರು ಚಾಲನೆ ನೀಡಿದರು.

Call us

Call us

Call us

ಬುಧವಾರ ಹೆಮ್ಮಾಡಿಯಲ್ಲಿ ದಿನಸಿ ಕಿಟ್ ಹಸ್ತಾಂತರಿಸಿ ಅವರು ಮಾತನಾಡಿ ರಾಜ್ಯಾದ್ಯಂತ ಕೋವಿಡ್ ಸಂಕಷ್ಟಗಳಿಂದಾಗಿ ಪರದಾಡುತ್ತಿರುವ ಬಡಕುಟುಂಬಗಳ ನೆರವಿಗೆ ಧಾವಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸೂಚನೆ ನೀಡಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎನ್‌ಎಸ್‌ಯುಐ ಸೇರಿದಂತೆ ಯುವ ಸಂಘಟನೆಗಳು, ಕಾರ್ಯಕರ್ತರು ಅರ್ಹ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಹಂಚುತ್ತಿದ್ದಾರೆ. ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಪುರ್ಖಾನ್ ಅವರ ನೇತೃತ್ವದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 120 ಬಡಕುಟುಂಬಗಳಿಗೆ ದಿನಸಿ ಕಿಟ್ ಹಂಚುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

Call us

Call us

ಈ ಸಂದರ್ಭದಲ್ಲಿ ಹೆಮ್ಮಾಡಿ ಪಂಚಾಯತ್ ಅಧ್ಯಕ್ಷ ಯು ಸತ್ಯನಾರಾಯಣ್ ರಾವ್, ಕಾಂಗ್ರೆಸ್ ಮುಖಂಡರಾದ ಶರತ್ ಕುಮಾರ್ ಶೆಟ್ಟಿ, ಸಯ್ಯದ್ ಯಾಸೀನ್, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಫುರ್ಖಾನ್, ಎನ್‌ಎಸ್‌ಯುಐನ ಮೊಹಮ್ಮದ್ ಅಲ್ಫಾಝ್, ಬಿಲಾಲ್, ಸಯ್ಯದ್ ಅದ್ನಾನ್, ಫಹ್ರಾನ್, ಅಫ್ನಾನ್, ಅಶ್ರಫ್, ಮಹೀಂದ್ರಾ, ಜಾವಿದ್, ಶೋಯೇಬ್, ಸಿನಾನ್, ರಫಿಕ್ ಗಂಗೊಳ್ಳಿ, ರೆಹಾನ್ ಗಂಗೊಳ್ಳಿ, ಝಹೀರ್ ಗಂಗೊಳ್ಳಿ, ಬೈಂದೂರಿನಲ್ಲಿ ಕಿಟ್ ವಿತರಣೆ ವೇಳೆ ಮುಖಂಡರಾದ ನಾಗರಾಜ ಗಾಣಿಗ, ಉಮೇಶ್ ದೇವಾಡಿಗ, ಶಬೀರ್ ಬೈಂದೂರು ಮೊದಲಾದವರು ಇದ್ದರು.

ದಿನಸಿ ಕಿಟ್‌ಗಳನ್ನು ಹೆಮ್ಮಾಡಿ, ಕಟ್‌ಬೇಲ್ತೂರು, ಗಂಗೊಳ್ಳಿ, ಬೈಂದೂರು, ಶಿರೂರು, ವಂಡ್ಸೆ, ಹಳಗೇರಿ ವ್ಯಾಪ್ತಿಯ ಬಡಕಟುಂಬಳಿಗೆ ವಿತರಿಸಲಾಗುತ್ತಿದೆ.

Leave a Reply

Your email address will not be published. Required fields are marked *

one × four =