ಪಕ್ಷನಿಷ್ಠ ಕಾರ್ಯಕರ್ತ, ಸೇವಾನಿಷ್ಠ ರಾಜಕಾರಣಿ ಬಾಬು ಶೆಟ್ಟಿ

Call us

ಕುಂದಾಪ್ರ ಡಾಟ್ ಕಾಂ ಲೇಖನ
ಕುಂದಾಪುರ: ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಾಲಿ ಜಿಪಂ ಸದಸ್ಯ ಬಾಬು ಶೆಟ್ಟಿ ಈ ಭಾರಿ ವಂಡ್ಸೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದಾರೆ.

Call us

Call us

ಬಾಬು ಶೆಟ್ಟಿ ಅವರು ಸಮಾಜ ಸೇವೆಗಾಗಿ ಬ್ಯಾಂಕ್ ಉದ್ಯೋಗ ತೊರೆದು, ಹಿಂದೂ ಸಂಘಟನೆಗಳ ಮೂಲಕ ಗುರುತಿಸಿಕೊಂಡು, ಸಮಾಜಸೇವೆಗೈಯುತ್ತಾ, ೨೭ವರ್ಷಗಳಿಂದಲೂ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿ, ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದು, ಸಹಕಾರಿ, ಧಾರ್ಮಿಕ ರಂಗದಲ್ಲೂ ತೊಡಗಿಸಿಕೊಂಡು ಜನನಾಯಕರಾಗಿ ಬೆಳೆದವರು.

ತಗ್ಗರ್ಸೆ ಕಂಠದಮನೆ ಕುಟುಂಬದವರಾದ ಬಾಬು ಶೆಟ್ಟಿ ಬಿಕಾಂ ಪದವೀಧರರು. ವಿಜಯ ಬ್ಯಾಂಕ್ ಉದ್ಯೋಗಿ ಆಗಿದ್ದ ಅವರಿಗೆ ಹಿಂದೂ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಬಾಬು ಶೆಟ್ಟಿ ಅವರಿಗಿದ್ಧ ಆದರಣೀಯ ಭಾವವೇ ರಾಜಕೀಯ ಅಖಾಡಕ್ಕೆ ಇಳಿಯಲು ಪ್ರೇರಣೆಯಾಯಿತು. ಸಕ್ರೀಯ ರಾಜಕಾರಣಿಯಾಗಿದ್ದ ತನ್ನ ಅಣ್ಣ ನಾರಾಯಣ ಹೆಗ್ಡೆ ಅವರೊಂದಿಗಿನ ಒಡನಾಟ, ಬಿಜೆಪಿಯ ರಾಷ್ಟ್ರೀಯ ನಾಯಕರುಗಳ ಪ್ರಭಾವದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ತಮ್ಮ ೩೧ವರ್ಷದ ಸೇವೆಯ ಬಳಿಕ ಸ್ವಯಂ ನಿವೃತ್ತಿ ಹೊಂದಿ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡವರು. ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮೇಲೆ ಅಪಾರ ನಂಬಿಕೆ ಇರಿಸಿದ್ದ ಬಾಬು ಹೆಗ್ಡೆ ಅವರು ೨೦೦೮ರಿಂದ ಪೂರ್ಣಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಿದರು. ಕುಂದಾಪ್ರ ಡಾಟ್ ಕಾಂ ಲೇಖನ

Call us

Call us

ಪಕ್ಷನಿಷ್ಠೆ ಹಾಗೂ ಜನಪರ ನಿಲುವು ಹೊಂದಿದ್ದರಿಂದ ಬಾಬು ಶೆಟ್ಟಿ ಅವರು ಬಿಜೆಪಿ ಪಕ್ಷದಿಂದ ೨೦೧೧ರಲ್ಲಿ ಮೊದಲ ಭಾರಿಗೆ ಖಂಬದಕೋಣೆ ಕ್ಷೇತ್ರದಿಂದ ಸ್ವರ್ಧಿಸಿ ಜಿಲ್ಲಾ ಪಂಚಾಯತ್‌ಗೆ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ ಲೇಖನ

ಬೈಂದೂರು ವ್ಯವಸಾಯ ಸೇವಾ ಸಹಕಾರಿ, ತಗ್ಗರ್ಸೆ ಮಹಾಲಿಂಗೇಶ್ವರ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ರಂಗದಲ್ಲಿ ತೊಡಗಿಸಿಕೊಂಡು, ರೋಟರಿ ಬೈಂದೂರು ಸಂಸ್ಥೆಯಲ್ಲಿ ಇದ್ದು ಸಾಮಾಜಿಕವಾಗಿ ತೊಡಗಿಸಿಕೊಂಡು, ತನ್ನೂರಿನ ತಗ್ಗರ್ಸೆ ಮಹಾಲಿಂಗೇಶ್ವರ ದೇವಳದ ಜೀಣೋದ್ಧಾರದಲ್ಲಿ ಶ್ರಮಿಸಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಎಲ್ಲಾ ರಂಗದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಈ ಭಾರಿ ವಂಡ್ಸೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ವರ್ಧಿಸುತ್ತಿರವು ಬಾಬು ಶೆಟ್ಟಿ ಅವರು ನಿರಾತಂಕವಾಗಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

four × 3 =