ಡಿ.29-30ರಂದು ಬೀಜಾಡಿ- ಕೋಟೇಶ್ವರ ಬೀಚ್‌ನಲ್ಲಿ ‘ಊರ್ಮನಿ ಹಬ್ಬ’

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಸುತ್ತಲಿನ ರಮಣೀಯ ಸ್ಥಳಗಳನ್ನು ಪರಿಚಯ, ಮುಂದಿನ ಪೀಳಿಗೆಗೆ ಸ್ಥಳೀಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಲೆಗಳನ್ನು ಪರಿಚಯಿಸುವುದರೊಂದಿಗೆ ಈ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಚಿಂತನೆಯೊಂದಿಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಉಡುಪಿ ಪರ್ಬ ಹಾಗೂ ಬೀಚ್ ಉತ್ಸವದ ಭಾಗವಾಗಿ ಡಿ.29 ಹಾಗೂ 30ರಂದು ಕೋಟೇಶ್ವರ ಬೀಜಾಡಿ ಕಡಲ ಕಿನಾರೆಯಲ್ಲಿ ’ಊರ್ಮನಿ ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕುಂದಾಪುರ ಕಂದಾಯ ಉಪವಿಭಾಗದ ಆಯುಕ್ತೆ ಶಿಲ್ಪಾ ನಾಗ್ ಹೇಳಿದರು.

Call us

Call us

ಅವರು ಬುಧವಾರ ಮಿನಿ ವಿಧಾನಸೌಧದ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಜಿಲ್ಲಾಡಳಿತ ಹಾಗೂ ಕೋಟೇಶ್ವರ ಬೀಚ್ ಉತ್ಸವ ಸಮಿತಿ ನೇತೃತ್ವದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಉಡುಪಿ, ಪುರಸಭೆ ಕುಂದಾಪುರ, ಗ್ರಾಮ ಪಂಚಾಯತ್ ಬೀಜಾಡಿ, ಗ್ರಾಮ ಪಂಚಾಯತ್ ಕೋಟೇಶ್ವರಹಾಗೂ ಸ್ಥಳೀಯ ಯುವಕ ಮಂಡಲಗಳು ಸಹಕಾರದೊಂದಿಗೆ ಊರ್ಮನಿ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Call us

Call us

ಊರ್ಮನಿ ಹಬ್ಬದಲ್ಲಿ ಗಾಳಿಪಟ ಉತ್ಸವ, ವಸ್ತು ಪ್ರದರ್ಶನ, ಮರಳುಶಿಲ್ಪ ರಚನೆ, ಮಾರಾಟ ಮಳಿಗೆಗಳು ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು, ಹೆಲಿಕಾಪ್ಟರ್ ರೈಡ್ ಇರಲಿವೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಉತ್ಸವನ್ನು ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕದಳದ ಹಾಗೂ ಸ್ಥಳೀಯ ಯುವಕರ ನೆರವಿನೊಂದಿಗೆ ರಕ್ಷಣೆ ಹಾಗೂ ಸಂಚಾರ ನಿರ್ವಹಣೆ ಮಾಡಲಿದ್ದೇವೆ. ಸಮುದ್ರದ ಸುರಕ್ಷತಾ ವಲಯಗಳನ್ನು ಗುರುತಿಸಿಲಾಗಿದ್ದು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದರು.

ಬೀಚ್ ಉತ್ಸವದ ಪ್ರಚಾರದ ಅಂಗವಾಗಿ ಡಿ.25ರ ಮಧ್ಯಾಹ್ನ 3 ಗಂಟೆಗೆ ತೆಕ್ಕಟ್ಟೆ ಕೋಟೇಶ್ವರ ಹಾಗೂ ಕುಂದಾಪುರ ಮಾರ್ಗವಾಗಿ ಬೈಕ್ ರ‍್ಯಾಲಿ ಇರಲಿದೆ. ಡಿ.29ರ ಬೆಳಿಗ್ಗೆ ಉದ್ಘಾಟನೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿ. 30ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಮಧ್ಯೆ ಆಟೋಟ, ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಉತ್ಸವ ಸಮಿತಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಕಾರ್ಯಕ್ರಮದ ವಿವರ ನೀಡಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಆನಂದ ಸಿ. ಕುಂದರ್, ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

one × four =