ಸಮುದ್ರಕ್ಕೆ ಕಲ್ಲು ಹಾಕಲು ನೀಡಿದ ಆದ್ಯತೆ ಪ್ರವಾಸೋದ್ಯಮದ ಅಭಿವೃದ್ಧಿಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶಾಲವಾದ ಕರಾವಳಿ ತೀರ ಸೌಂದರ್ಯದ ನೆಲೆಬೀಡು. ಸರಕಾರ ಸಮುದ್ರಕ್ಕೆ ಕಲ್ಲು ಹಾಕಲು ನೀಡಿದ ಆದ್ಯತೆಯನ್ನು ಬೀಚ್ ಅಭಿವೃದ್ಧಿಗೆ ನೀಡಿಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯಾದಂತೆ ಕರ್ನಾಟಕದಲ್ಲಿ ಈವರೆಗೂ ಆಗಿಲ್ಲ.

ಹೀಗೆಂದವರು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ. ಬೀಜಾಡಿ-ಕೋಟೇಶ್ವರ ಹಳಅಳಿವೆ ಬೀಚ್‌ನಲ್ಲಿ ಕುಂದಾಪುರ ಊರ್‌ಮನಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ತಾ.ಪಂ ಸದಸ್ಯೆ ರೂಪಾ ಪೈ, ಕೋಟೇಶ್ವರ ಗ್ರಾಪಂ ಅದ್ಯಕ್ಷೆ ಜಾನಕಿ ಬಿಲ್ಲವ, ಬೀಜಾಡಿ ಗ್ರಾಪಂ ಅಧ್ಯಕ್ಷೆ ಸಾಕು ಬೀಜಾಡಿ, ಮೀನುಗಾರಿಕ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ಹೆರಿಯಣ್ಣ ಚಾತ್ರಬೆಟ್ಟು,  ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು.

ಕೋಟೇಶ್ವರ ಬೀಚ್ ಉತ್ಸವ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ನಿರೂಪಿಸಿದರು.

ಕುಂದಾಪುರ ತಾಲೂಕಿನ ಪ್ರವಾಸಿ ತಾಣಗಳನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಉಡುಪಿ ಪರ್ಬದ ಭಾಗವಾಗಿ ಊರ್‌ಮನಿ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಇಲ್ಲಿನ ಬೀಚ್ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. –  ಶಿಲ್ಪಾ ನಾಗ್ ಸಿ.ಟಿ, ಸಹಾಯಕ ಆಯುಕ್ತೆ, ಕುಂದಾಪುರಉಪವಿಭಾಗ

 

Leave a Reply

Your email address will not be published. Required fields are marked *

12 + 14 =